ರಾಜ್ಯ ಸರ್ಕಾರದ ಬದಲು ಕಾಂಗ್ರೆಸ್ ಕಡೆಗೆ ವಾಗ್ದಾಳಿ ಕೇಂದ್ರೀಕರಿಸಿದ ಮೋದಿ

ಹುಬ್ಬಳ್ಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರನ್ನು ಉದ್ಧೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದರು. ಆದರೆ ಈ ಬಾರಿ ಅವರ ಮಾತಿನ ದಾಳಿ ಕಾಂಗ್ರೆಸ್ ಪಕ್ಷದ ಕಾರ್ಯವೈಖರಿ ಮೇಲಿತ್ತೇ ವಿನಾ ರಾಜ್ಯ ಸರ್ಕಾರದ ಮೇಲೆ ಹೆಚ್ಚಿರಲಿಲ್ಲ ಎಂಬುದು ವಿಶೇಷ

  • ದಲಿತರನ್ನು ಗೌರವಿಸುವ ಸೌಜನ್ಯ ಕಾಂಗ್ರೆಸ್ ಗೆ ಇಲ್ಲ. ದಲಿತ ವ್ಯಕ್ತಿಯೊಬ್ಬರು ರಾಷ್ಟ್ರಪತಿಯಾದರೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸೌಜನ್ಯಕ್ಕಾದರೂ ಅಭಿನಂದಿಸಿಲ್ಲ. ಕನಿಷ್ಠಪಕ್ಷ ಫೋನ್‌ನಲ್ಲಿಯಾದರೂ ರಾಷ್ಟ್ರಪತಿಯನ್ನು ಅವರು ಅಭಿನಂದಿಸಬೇಕಿತ್ತು. ಕಾಂಗ್ರೆಸ್ ದಲಿತರನ್ನು ಕೇವಲ ಮತಕ್ಕಾಗಿ ಬಳಸಿಕೊಳ್ಳುತ್ತಿದೆ.
  • ಕಾಂಗ್ರೆಸ್‌ನವರು ಹುಬ್ಬಳ್ಳಿ-ಧಾರವಾಡದಿಂದ ಒಬ್ಬರನ್ನು ಮಂತ್ರಿ ಮಾಡಿದರು. ಆದರೆ, ಅವರು ವೈದ್ಯರನ್ನು ಹೊಡೆಯುತ್ತಾರೆ. ಜನರಿಗೆ ತೊಂದರೆ ಕೊಡುತ್ತಾರೆ. ಇಂಥವರನ್ನು ಜನ ತಿರಸ್ಕರಿಸಬೇಕು. ಕಾಂಗ್ರೆಸ್‌ನ ತುಂಬೆಲ್ಲ ಇಂತಹ ನಾಯಕರೇ ತುಂಬಿಕೊಂಡಿದ್ದಾರೆ. ಜನ ನೆಮ್ಮದಿ ಹಾಗೂ ಅಭಿವೃದ್ಧಿಗಾಗಿ ಇಂತಹ ನಾಯಕರು ಹುಟ್ಟದಂತೆ ನೋಡಿಕೊಳ್ಳಬೇಕು.
  • ಮೇ 15ಕ್ಕೆ ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಬರುತ್ತದೆ. ರಾಜ್ಯದ ಪ್ರತಿಯೊಬ್ಬ ಮತದಾರರಿಗೂ ಗೊತ್ತಿದೆ, ಯಾರ ಪರ ಫಲಿತಾಂಶ ಬರಲಿದೆ ಎಂಬುವುದು. ಕಾಂಗ್ರೆಸ್‌ನವರಿಗೆ ನಾನು ಧಾರವಾಡ್ ಪೇಡಾ ತಿನ್ನಿ ಎಂದು ಸಲಹೆ ಕೊಡುತ್ತೇನೆ. ಅವರು ಬಾಯಿ ಸಿಹಿ ಮಾಡಿಕೊಳ್ಳಲಿ. ಉತ್ತರ ಪ್ರದೇಶದ ಉನ್ನಾವೋದಿಂದ ಬಂದು ಇಲ್ಲಿ ಪೇಡಾ ಮಾಡತೊಡಗಿದರು. ಅದು ಉನ್ನಾವೋ ಪೇಡಾ ಆಗದೆ ಧಾರವಾಡ ಪೇಡಾ ಆಗಿ ಖ್ಯಾತಿ ಪಡೆದಿದೆ. ಮೇ 15ಕ್ಕೆ ಕಾಂಗ್ರೆಸ್ಸಿಗರು ಧಾರವಾಡ ಪೇಡಾ ತಿಂದು ಮನಸು ಹಗುರ ಮಾಡಿಕೊಳ್ಳಲಿ.
  • ಆವತ್ತು ಮೈನಸ್ 40 ಡಿಗ್ರಿ ಚಳಿಯಲ್ಲಿ ಹಿಮದ ರಾಶಿಯಡಿಯಲ್ಲಿ ಧಾರವಾಡದ ಹನುಮಂತಪ್ಪ 6 ದಿನಗಳ ಕಾಲ ಜೀವ ಹಿಡಿದು ಮಲಗಿದ್ದರು. ಅಂತಹ ಸ್ಥಿತಿಯಲ್ಲೂ ಅವರು ತೋರಿದ ಸ್ಥೈರ್ಯ ನಿಜಕ್ಕೂ ಅದ್ಭುತ. ಇದು ಹುಬ್ಬಳ್ಳಿಯ ಶಕ್ತಿ, ನಮ್ಮ ದೇಶದ ಸೈನಿಕರ ಶಕ್ತಿಗೆ ಸಾಕ್ಷಿ. ಇಂತಹ ಸೈನಿಕರನ್ನು ಕಾಂಗ್ರೆಸ್‌ನವರು ಅವಮಾನಿಸುತ್ತಾರೆ.
  • ಕಾಂಗ್ರೆಸ್ ಪಕ್ಷ ಚುನಾವಣೆಗಾಗಿ ಮತ್ತೆ ಮತ್ತೆ ಸುಳ್ಳು ಹೇಳುತ್ತಿದೆ. ದೇಶದಲ್ಲಿ ದಲಿತರು, ಬಡವರು, ಶೋಷಿತರು ಹಾಗೂ ಆದಿವಾಸಿಗಳ ಅಭಿವೃದ್ಧಿಗಾಗಿ ಬಿಜೆಪಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ದಲಿತರು, ಆದಿವಾಸಿಗಳು ಹಾಗೂ ಒಬಿಸಿ ವಿರೋಧಿಯಾಗಿರುವುದರಿಂದ ಲೋಕಸಭೆಯಲ್ಲಿ ಚರ್ಚೆಯಾಗಲು ಬಿಡಲಿಲ್ಲ. ಇಂಥ ಕಾಂಗ್ರೆಸ್ ಪಕ್ಷಕ್ಕೆ ಉತ್ತರ ನೀಡುವ ಸಮಯ ಬಂದಿದೆ.
  • ಜನ್ ಧನ್ ಯೋಜನೆ ಮೂಲಕ ಹಲವರಿಗೆ ಬ್ಯಾಂಕ್ ಅಕೌಂಟ್ ಮಾಡಿಕೊಟ್ಟಿದ್ದೇವೆ. ಈ ಮೂಲಕ ಬಡವರು ಸಹ ಹಣ ಉಳಿತಾಯ ಮಾಡುತ್ತಿದ್ದಾರೆ. ಹೆಚ್ಚು ಹಣವನ್ನು ಹೊಂದಿರುವವರ ವಿರುದ್ಧ ಬಿಜೆಪಿ ಸಮರ ಸಾರಿದೆ. ಹೀಗಾಗಿ ಮೋದಿ ವಿರುದ್ಧ ಹಲವರು ಆಕ್ರೋಶಗೊಂಡಿದ್ದಾರೆ. ಕರ್ನಾಟಕಲ್ಲೂ ಬಿಜೆಪಿ ಬಂದಮೇಲೆ ಅಭಿವೃದ್ಧಿಯಾಗುತ್ತದೆ.
  • ಎಸ್‌ ನಿಜಲಿಂಗಪ್ಪ ಅವರನ್ನು ಕಾಂಗ್ರೆಸ್‌ ಪರಿವಾರ ಯಾವ ರೀತಿ ಅಪಮಾನ ಮಾಡಿದೆ ಎನ್ನುವುದನ್ನು ಯುವಕರು ನೆನಪಿಸಿಕೊಳ್ಳಬೇಕಾಗಿದೆ. ಯಾವುದೇ ಅವಕಾಶಗಳನ್ನು ನೀಡದೆ ಅವರನ್ನು ಬದಿಗೆ ಸರಿಸಿದ್ದರು. ಅವರು ಮಾಡಿದ ತಪ್ಪೇನು? ಬೇರೆ ಯಾವುದೂ ಅಲ್ಲ; ನೆಹರು ತಪ್ಪು ನೀತಿಗಳ ವಿರುದ್ಧ, ಆರ್ಥಿಕ ನೀತಿಗಳ ವಿರುದ್ಧ ಸವಾಲು ಎತ್ತಿದ್ದರು, ಅದು ಮಾತ್ರ ಅವರ ತಪ್ಪು! ಕಾಂಗ್ರೆಸ್‌ನಲ್ಲಿ ಗಾಂಧಿ ಕುಟುಂಬ ಯಾವ ನಿರ್ಧಾರ ತೆಗೆದುಕೊಂಡರೂ ನಾಯಕರು ತಲೆ ಅಲ್ಲಾಡಿಸಬೇಕು, ಇಲ್ಲವಾದಲ್ಲಿ ಶಿಕ್ಷೆ ಎದುರಿಸಬೇಕು.
ಇದನ್ನೂ ಓದಿ : ಸುಳ್ಳು ಹೇಳಿದವರು ಬಾಗಲಕೋಟೆ ಪ್ರವೇಶಿಸಲು ಬಿಡುತ್ತೀರಾ? ಮೋದಿ ಪ್ರಶ್ನೆ
  • ನಾವು ಜಾತಿ, ಧರ್ಮ ನೋಡುವುದಿಲ್ಲ. ಮಹಾನ್‌ ವಿಜ್ಞಾನಿ ಎಪಿಜೆ ಅಬ್ದುಲ್‌ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದೆವು. ನಾನು ಪ್ರಧಾನಿ ಅದ ಬಳಿಕ, ಬಡ ದಲಿತ ಸಮುದಾಯದಲ್ಲಿ ಹುಟ್ಟಿದ ರಾಮ್‌ನಾಥ್‌ ಕೋವಿಂದ್‌ ಅವರನ್ನು ರಾಷ್ಟ್ರಪತಿ ಮಾಡಿ ನಮ್ಮ ಬದ್ಧತೆ ತೋರಿಸಿದ್ದೇವೆ. ಕಾಂಗ್ರೆಸ್‌ಗೆ ಈಗ ದಿಗಿಲಾಗಿದೆ, ಪ್ರಧಾನಿಯೂ ಬಡ ಸಣ್ಣ ಕುಟುಂಬದಿಂದ ಬಂದವರು, ರಾಷ್ಟ್ರಪತಿಯೂ ಬಡ ದಲಿತ ಸಮುದಾಯದಿಂದ ಬಂದವರು, ನಮ್ಮ ವೋಟ್‌ಬ್ಯಾಂಕ್‌ ಭಂಗವಾಯಿತು ಎಂದು ಅವರಿಗೆ ಅರ್ಥವಾಗಿದೆ. ಹೀಗಾಗಿ ಕಾಂಗ್ರೆಸ್ ಮುಕ್ತ ರಾಷ್ಟ್ರ ನಿರ್ಮಾಣವಾಗುವುದು ಶತಸಿದ್ಧವಾಗಿದೆ.
  • ಕಾಂಗ್ರೆಸ್‌ನಿಂದ ಧಾರವಾಡ-ಹುಬ್ಬಳ್ಳಿಯ ಅಭಿವೃದ್ಧಿಯಾಗಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ಸಾಕಷ್ಟು ಅನುದಾನವನ್ನು ಈ ನಗರಗಳಿಗೆ ನೀಡಲಾಗಿತ್ತು. ಆದರೆ, ಕಾಂಗ್ರೆಸ್‌ನಿಂದ ಅಂತಹ ಯಾವುದೇ ಅಭಿವೃದ್ಧಿ ಆಗಿಲ್ಲ. ಸ್ಮಾರ್ಟ್ ಸಿಟಿ, ಐಐಟಿ ಸೇರಿದಂತೆ ಹತ್ತಾರು ಯೋಜನೆಗಳನ್ನು ಈ ನಗರಗಳಿಗೆ ಬಿಜೆಪಿ ನೀಡಿದೆ.
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More