ತೈಲ ದರ ಏರಿಕೆ ವಿಚಾರದಲ್ಲಿ ಕೇಂದ್ರದ ವೈಫಲ್ಯ ಪ್ರಶ್ನಿಸಿದ ರಾಹುಲ್ ಗಾಂಧಿ

ಕೋಲಾರದ ಮಾಲೂರಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ರೋಡ್‌ ಶೋ ನಡೆಸಿದರು. ಈ ವೇಳೆ ಬಂಡಿಯ ಮೇಲೆ ನಿಂತು ಭಾಷಣ ಮಾಡಿದರು. ಸಾಂಕೇತಿಕವಾಗಿ ಗ್ಯಾಸ್‌ ಸಿಲಿಂಡರ್ ತೋರಿಸಿ ಇಂಧನ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿದರು. ಇಲ್ಲಿನ ಭಾಷಣದ ಪ್ರಮುಖ ಅಂಶಗಳು ಇಂತಿವೆ

  • ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ನೀತಿಗಳಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ.
  • ಕೇಂದ್ರ ಸರಕಾರ ಬಡಜನರಿಗಾಗಿ ಏನೂ ಕೆಲಸ ಮಾಡಿಲ್ಲ. ಬಿಜೆಪಿ ಸರಕಾರ ೨೦೧೪ರಿಂದ ಪೆಟ್ರೋಲ್‌, ಎಲ್‌‌ಪಿಜಿ, ಡೀಸೆಲ್‌ ಮೇಲೆ ೧೦ ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿದೆ. ಆದರೆ, ಬೆಲೆ ಏರಿಕೆಯಿಂದ ಇನ್ನೂ ಜನರಿಗೆ ಮುಕ್ತಿ ಸಿಕ್ಕಿಲ್ಲ. ಸಿಲಿಂಡರ್ ದರ, ಇಂಧನ ಬೆಲೆ ಏರಿಕೆಯಾಗಿದೆ. ಜಾಗತಿಕವಾಗಿ ತೈಲ ದರ ಕಡಿಮೆ ಆದಾಗಲೂ ದೇಶದಲ್ಲಿ ತೈಲ ದರ ಕಡಿಮೆ ಆಗಲಿಲ್ಲ.
  • ಮೋದಿ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಭ್ರಷ್ಟಾಚಾರ ಆರೋಪದಲ್ಲಿ ಜೈಲಿಗೆ ಹೋಗಿಬಂದಿದ್ದಾರೆ. ಇದನ್ನು ಮೋದಿ ಅರ್ಥ ಮಾಡಿಕೊಳ್ಳಬೇಕು.
  • ಸಿಎಂ ಸಿದ್ದರಾಮಯ್ಯ ಜನಪರ ಆಡಳಿತ ನೀಡಿದ್ದಾರೆ. ಯಡಿಯೂರಪ್ಪ ಸರಕಾರ ಭ್ರಷ್ಟ ಸರ್ಕಾರ ಎಂಬುದು ಜನರಿಗೆ ತಿಳಿದಿದೆ. ಅವರು ಎಷ್ಟು ದಿನ ಜೈಲಿನಲ್ಲಿದ್ದರು, ಎಷ್ಟು ಹಣ ಲೂಟಿ ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ.
ಇದನ್ನೂ ಓದಿ : ಮೋದಿ ಹೇಳಿಕೊಳ್ಳಲಷ್ಟೇ ರೈತ ಪರ, ಯುವಜನ ಪರ, ಮಹಿಳಾ ಪರ ಪ್ರಧಾನಿ ಎಂದ ರಾಹುಲ್
ಕೆಸಿಆರ್‌ಗೆ ತಿರುಗುಬಾಣ ಆಗಲಿದಿಯೇ ವಿಧಾನಸಭೆ ವಿಸರ್ಜನೆಯ ನಿರ್ಧಾರ?
ಆರ್‌ಎಸ್‌ಎಸ್ ನಾಯಕ ಭಾಗವತ್‌ ಅವರ ‘ಉದಾರವಾದಿ’ ಮಾತುಗಳ ಸಂದೇಶವೇನು?
ಬಿಜೆಪಿ ಮಣಿಸಲು ಶಿವಭಕ್ತ ರಾಹುಲ್ ಬ್ರಾಂಡ್ ಮೊರೆಹೋದ ಕಾಂಗ್ರೆಸ್
Editor’s Pick More