ಎಸ್ ಎಂದರೆ ಜಾತ್ಯತೀತವೇ ಅಥವಾ ಸಂಘ ಪರಿವಾರವೇ? ಜೆಡಿಎಸ್‌ಗೆ ರಾಹುಲ್‌ ಟಾಂಗ್

ದೇವನಹಳ್ಳಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣೆ ಪ್ರಚಾರ ನಡೆಸಿದರು. ‘ಜೆಡಿಎಸ್’ ನಲ್ಲಿರುವ ‘ಎಸ್’ ಜಾತ್ಯತೀತ ಎಂದೇ ಅಥವಾ ಸಂಘ ಪರಿವಾರವೇ ಎಂಬುದನ್ನು ತಮ್ಮ ವೇದಿಕೆ ಮೂಲಕ ಜೆಡಿಎಸ್ ಕರ್ನಾಟಕದ ಜನರಿಗೆ ಸ್ಪಷ್ಟಪಡಿಸಬೇಕು ಎಂದರು. ಭಾಷಣದ ಮುಖ್ಯಾಂಶ ಇಲ್ಲಿದೆ

 • ರಾಜ್ಯದ ಮುಂದಿನ ಚುನಾವಣೆ ಎರಡು ಸಿದ್ಧಾಂತಗಳ ನಡುವಿನ ಯುದ್ಧ. ಒಂದೆಡೆ ಬಸವಣ್ಣರ ಸಿದ್ಧಾಂತ ಇನ್ನೊಂದೆಡೆ ಆರ್‌ಎಸ್‌ಎಸ್‌, ಮೋದಿ, ಅಮಿತ್‌ ಶಾ ಸಿದ್ಧಾಂತ. ಈ ಎರಡು ಸಿದ್ಧಾಂತದ ಸಂಘರ್ಷ ಹೋರಾಟದಲ್ಲಿ ಜನತಾದಳ ತನ್ನ ನಿಲುವು ಸ್ಪಷ್ಟವಾಗಿ ತಿಳಿಸಬೇಕು. ಜನತಾದಳ ಪಕ್ಷದ ಹೆಸರಿನ ಜೊತೆ ‘ಎಸ್’ ಸೇರಿಕೊಂಡಿದೆ. ಅದು ಜಾತ್ಯಾತೀತವೇ ಅಥವಾ ಸಂಘ ಪರಿವಾರವೇ ಎಂಬುದನ್ನು ಜನತಾದಳದ ನಾಯಕರು ಕರ್ನಾಟಕದ ಜನರಿಗೆ ಸ್ಪಷ್ಟಪಡಿಸಬೇಕು. ಇದು ಕರ್ನಾಟಕದ ಭವಿಷ್ಯದ ಚುನಾವಣೆ, ಬಸವಣ್ಣನ ಚಿಂತನೆಯನ್ನು ಉಳಿಸುವ ಚುನಾವಣೆ.
 • ನುಡಿದಂತೆ ನಡೆಯಿರಿ ಎಂಬುದನ್ನು ಜೆಡಿಎಸ್‌ಗೆ ಹೇಳುತ್ತಿದ್ದೇನೆ. ಸಂಘ ಪರಿವಾರದ ಜೊತೆ ಸೇರುವುದಿಲ್ಲ ಎಂದಿದ್ದೀರಿ, ಅದನ್ನು ಉಳಿಸಿಕೊಳ್ಳಿ. ಕಾಂಗ್ರೆಸ್‌ ಏನನ್ನು ನುಡಿಯುತ್ತದೆಯೋ ಅದನ್ನೇ ಅನುಸರಿಸುತ್ತದೆ.
 • ೫ ವರ್ಷದಲ್ಲಿ ಯಾರೂ ಹಸಿದ ಹೊಟ್ಟೆಯಲ್ಲಿ ಮಲಗುವುದಿಲ್ಲ ಎಂದು ನಾವು ಮಾತು ನೀಡಿದ್ದೆವು. ಅದನ್ನು ನಿಜ ಮಾಡಿದ್ದೇವೆ. ಅನ್ನಭಾಗ್ಯ ಯೋಜನೆ ನೀಡಿದ್ದೇವೆ. ಇಂದು ಇಂದಿರಾ ಕ್ಯಾಟೀನ್‌ ಕೂಡ ಎಲ್ಲೆಡೆ ಕಾರ್ಯ ನಿರ್ವಹಿಸುತ್ತಿದೆ. ಈ ಮೂಲಕ ಕಡಿಮೆ ಬೆಲೆಗೆ ಗುಣಮಟ್ಟದ ಆಹಾರವನ್ನು ಪೂರೈಸಲಾಗುತ್ತದೆ.
 • ನರೇಂದ್ರ ಮೋದಿ ದೇಶದ ಅಗರ್ಭ ಶ್ರೀಮಂತ ವಾಣಿಜ್ಯೋದ್ಯಮಿಗಳ ೨ ವರೆ ಲಕ್ಷ ಕೋಟಿ ರುಪಾಯಿ ಸಾಲ ಮನ್ನಾ ಮಾಡಿದ್ದಾರೆ. ರೈತರು ಕೈ ಮುಗಿದು ಸಾಲ ಮನ್ನಾ ಮಾಡಿ ಎಂದು ಕೇಳಿದರು. ಆದರೂ ನೀಡಿದ ಭರವಸೆ ಅವರು ಈ ಡೇರಿಸಲಿಲ್ಲ. ರೈತರಿಗೆ ಕಷ್ಟ ಬಂದಾಗ ನೆರವಾಗಲಿಲ್ಲ.
 • ಬಿಜೆಪಿ ಕಾರ್ಯಕ್ರಮದಲ್ಲಿ ರೈತರ ಸಾಲಮನ್ನಾ ಮಾಡಲು ಸಾಧ್ಯವಿಲ್ಲ ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ, ಪ್ರಧಾನಿ ಮೋದಿ ಹೇಳಿದರು. ಆದರೂ ನಾನು ಪ್ರಧಾನಿ ಕಚೇರಿಗೆ ಹೋಗಿ ರೈತರಿಗೆ ನೆರವಾಗುವಂತೆ ಕೋರಿದೆ. ಮೋದಿ ನನಗೆ ಉತ್ತರ ಕೊಡದಿದ್ದಾಗ ಕರ್ನಾಟಕದಲ್ಲಿ ಸಿದ್ದರಾಮಯ್ಯನವರಲ್ಲಿ ಕೇಳಿದೆ. ಕೇಳಿದ ೧೦ ದಿನಗಳೊಳಗಾಗಿ ಸಿದ್ದರಾಮಯ್ಯ ಸಾಲ ಮನ್ನಾ ಮಾಡಿದರು.
 • ಕಾಂಗ್ರೆಸ್‌ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ೧೦ ದಿನಗೊಳಗಾಗಿ ದೇಶದ ರೈತರ ಇತರ ಸಾಲ ಮನ್ನಾ ಮಾಡುತ್ತೇವೆ. ಕರ್ನಾಟಕದಲ್ಲಿ ಕೃಷಿ ಹೊಂಡ ನಿರ್ಮಿಸಿದ್ದೇವೆ. ಕೃಷಿ ಭಾಗ್ಯ ಕಾರ್ಯಕ್ರದ ಮೂಲಕ ಬಡ್ಡಿ ರಹಿತ ಸಾಲ ನೀಡಿದ್ದೇವೆ. ಬಿಜೆಪಿಗಿಂತ ೩ ಪಟ್ಟುಹಣವನ್ನು ನೀರಾವರಿಗಾಗಿ ಖರ್ಚು ಮಾಡಿದ್ದೇವೆ. ಕುಡಿಯುವ ನೀರಿಗಾಗಿ ಎತ್ತಿನಹೊಳೆ ಯೋಜನೆ ಆರಂಭಿಸಿದ್ದೇವೆ.
 • ೫ ವರ್ಷದಲ್ಲಿ ನಾವು ಹಸಿವು ಮುಕ್ತ ಕರ್ನಾಟಕವನ್ನು ನಿರ್ಮಿಸಿದ್ದೇವೆ. ಇನ್ನು ೫ ವರ್ಷದಲ್ಲಿ ಕರ್ನಾಟಕದಲ್ಲಿ ಮನೆ ಇಲ್ಲದ ವ್ಯಕ್ತಿ ನಿಮಗೆ ಸಗಲಾರ. ೫೦ ಲಕ್ಷ ಮನೆಗಳನ್ನು ನಾವು ನಿರ್ಮಿಸುತ್ತೇವೆ.
 • ಪ್ರತಿ ವರ್ಷದಲ್ಲಿ ೨ ಕೋಟಿ ಕೆಲಸ ಕೊಡುತ್ತೇವೆಂದು ನರೇಂದ್ರ ಮೋದಿ ಆಶ್ವಾಸನೆ ಕೊಟ್ಟಿದ್ದರು. ಅದು ಸುಳ್ಳು ಆಶ್ವಾಸನೆ. ಪ್ರಧಾನಿಯವರೇ ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಿದೆ ಎಂದಿದ್ದಾರೆ. ೫ ವರ್ಷದಲ್ಲಿ ೧ ಕೋಟಿ ಉದ್ಯೋಗ ಒದಗಿಸುತ್ತೇವೆ. ಕಂಪ್ಯೂಟರ್ ಹಾಗೂ ಮೊಬೈಲ್‌ ಕೊಡಿಸುತ್ತೇವೆ. ಮಹಿಳೆಯರಿಗೆ ಸರಕಾರಿ ಉದ್ಯೋಗದಲ್ಲಿ ಶೇ.೩೩ ಮೀಸಲು ನೀಡುತ್ತೇವೆ.
 • ಮೋದಿ ವೇದಿಕೆಯಲ್ಲಿ ಭ್ರಷ್ಟಾಚಾರ ವಿರೋಧಿ ಎನ್ನುತ್ತಾರೆ. ಆದರೆ ಅವರ ಪಕ್ಕವೇ ಯಡಿಯೂರಪ್ಪ ಕುಳಿತಿರುತ್ತಾರೆ. ರೆಡ್ಡಿ ಸಹೋದರರಿಗೆ ೮ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧೆಗೆ ಟಿಕೇಟು ನೀಡಿದ್ದಾರೆ. ಇವರು ಕರ್ನಾಟಕದ ಜನರ ೩೫ ಸಾವಿರ ಕೋಟಿ ಸಂಪತ್ತು ಲೂಟಿ ಮಾಡಿದ್ದಾರೆ.
ಇದನ್ನೂ ಓದಿ : ತೈಲ ದರ ಏರಿಕೆ ವಿಚಾರದಲ್ಲಿ ಕೇಂದ್ರದ ವೈಫಲ್ಯ ಪ್ರಶ್ನಿಸಿದ ರಾಹುಲ್ ಗಾಂಧಿ
 • ಬಿಜೆಪಿ ಸರಕಾರವಿದ್ದಾಗ ಈ ರಾಜ್ಯದ ಅರ್ಧದಷ್ಟು ಹಣ ಯಡಿಯೂರಪ್ಪ, ಇನ್ನರ್ಧ ರೆಡ್ಡಿ ಸಹೋದರರು ಹಾಗೂ ಬಂಡವಾಳ ಶಾಹಿಗಳು ಹಂಚಿಕೊಂಡರು. ನಾವು ೮ ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇವೆ. ರೆಡ್ಡಿ ಸಹೋದರರು ಲೂಟಿ ಮಾಡಿದ ಹಣವಿದ್ದಿದ್ದರೆ ಆ ಹಣದಿಂದ ೪ ಸಲ ರೈತರ ಸಾಲ ಮನ್ನಾ, ಮಾಡಬಹುದಿತ್ತು, ನೀರು ಒದಗಿಸಬಹುದಿತ್ತು, ಬಾಲಕಿಯರಿಗೆ ಉಚಿತ ಕಾಲೇಜು ಶಿಕ್ಷಣ ಸಿಗುವಂತೆ ಮಾಡಬಹುದಿತ್ತು, ಕರ್ನಾಟಕದಲ್ಲಿ ಆಹಾರ ಸಂಸ್ಕರಣೆ ಕೇಂದ್ರ ಆರಂಭಿಸಬಹುದಿತ್ತು, ಯುವಕರಿಗೆ ಉದ್ಯೋಗ ಕೊಡಿಸಬಹುದಿತ್ತು.
 • ಈ ಐದು ವರ್ಷದಲ್ಲಿ ಕಾಂಗ್ರೆಸ್‌ ಅಧಿಕಾರವಾಧಿಯಲ್ಲಿ ಯಾವುದೇ ಹಗರಣವಾಗಲಿಲ್ಲ. ಸಿದ್ದರಾಮಯ್ಯನವರು ೨೪ ಗಂಟೆ ಜನರಿಗಾಗಿ ಕೆಲಸ ಮಾಡುತ್ತಾರೆ. ಕಾಂಗ್ರೆಸ್‌ನ ಎಲ್ಲ ನಾಯಕರು ರಾಜ್ಯದ ಬಗ್ಗೆ ಜನರ ಬಗ್ಗೆ ಚಿಂತಿಸುತ್ತಾರೆ.
 • ನೀವೆಲ್ಲರೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ಕೊಡಿ. ಕಾಂಗ್ರೆಸ್‌ ನಾಯಕರು ಸೇರಿ ಜನರಿಗಾಗಿ ಕೆಲಸ ಮಾಡುತ್ತಾರೆ. ನಾವು ಬಸವಣ್ಣನ ವಚನದಂತೆ ನಡೆಯುತ್ತೇವೆ. ಮೋದಿ ಾವರು ಪ್ರತಿಯೊಬ್ಬರ ಖಾತೆಗೆ ೧೫ ಲಕ್ಷದ ಭರವಸೆ ನೀಡಿದರು. ಆದರೆ ಯಾವುದೇ ಆಶ್ವಾಸನೆ ಪೂರ್ತಿಗೊಳಿಸಲಿಲ್ಲ. ನಾನೇನು ಈ ವೇದಿಕೆಯಿಂದ ಹೇಳುತ್ತೇನೋ ಅದನ್ನು ಮಾಡಿ ತೋರಿಸುತ್ತೇನೆ.
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More