ಲೂಟಿಕೋರರು ಬೇಕೋ ಸೂರು ಒದಗಿಸುವವರು ಬೇಕೋ ನೀವೇ ನಿರ್ಧರಿಸಿ ಎಂದ ರಾಹುಲ್

ದೊಡ್ಡಬಳ್ಳಾಪುರದಲ್ಲಿ ಚುನಾವಣೆ ಪ್ರಚಾರ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ, ಮುಂದಿನ ೫ ವರ್ಷದಲ್ಲಿ ಕಾಂಗ್ರೆಸ್ ಸರಕಾರ ರಾಜ್ಯದ ಎಲ್ಲ ನಿರಾಶ್ರಿತರಿಗೆ ೫೦ ಲಕ್ಷ ಸೂರು ಒದಗಿಸುವ ಭರವಸೆ ನೀಡಿದರು. ದೊಡ್ಡಬಳ್ಳಾಪುರದ ಭಾಷಣದ ಮುಖ್ಯಾಂಶಗಳು ಇಲ್ಲಿವೆ

 • ನಾವು ಯಾವುದೇ ಧರ್ಮ, ಜಾತಿ, ಭಾಷೆ ನೋಡಲಿಲ್ಲ. ಕರ್ನಾಟಕದಲ್ಲಿರುವ ಬಡ ಕುಟುಂಬದ ಪ್ರತಿ ವ್ಯಕ್ತಿಗೆ ೭ ಕೆಜಿ ಉಚಿತ ಅಕ್ಕಿ ನೀಡಿದ್ದೇವೆ. ನಗರದ ಜನ ಬಂದು ತಮಗಾಗಿಯೂ ಕಾರ್ಯಕ್ರಮ ಆರಂಭಿಸಿ ಎಂದು ಕೇಳಿಕೊಂಡರು; ಇದನ್ನು ಪರಿಗಣಿಸಿ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್‌ ಆರಂಭಿಸಲಾಗಿದೆ. ಈ ಮೂಲಕ ಸ್ವಾದಿಷ್ಟ ಉಪಹಾರ, ಭೋಜನ ಎಲ್ಲರಿಗೂ ಕಡಿಮೆ ಬೆಲೆಗೆ ಲಭ್ಯವಾಗುವಂತೆ ಮಾಡಿದ್ದೇವೆ. ಗುಜರಾತ್‌ನಲ್ಲಿ ಇಂದಿರಾ ಕ್ಯಾಂಟೀನ್‌ನಂತ ಆಹಾರ ಸಿಗುವುದಿಲ್ಲ. ಅಂತಹ ಆಹಾರ ಬೇಕೆಂದರೆ ನೀವು ೧೦೦, ೨೦೦ ರುಪಾಯಿ ಖರ್ಚು ಮಾಡಬೇಕಾಗುತ್ತದೆ. ಪ್ರಧಾನಿಯವರು ಇಂದಿರಾ ಕ್ಯಾಂಟೀನ್‌ ನೋಡಲಿ. ಒಂದು ಸಲ ಇಂದಿರಾ ಕ್ಯಾಂಟೀನ್‌ ನೋಡಿ, ನಂತರ ನಿಮಗೆ ಅದನ್ನು ಬಿಜೆಪಿ ರಾಜ್ಯದಲ್ಲೂ ಆರಂಭಿಸಬೇಕು ಎನಿಸಬಹುದು.
 • ಬಿಜೆಪಿ ದೇಶದಲ್ಲಿರುವ ಹತ್ತು, ೧೫ ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಮಾಡಿದರು. ಸೂಟು, ಬೂಟು ಹಾಕಿದ ಉದ್ಯಮಿಗಳು ಪ್ರಧಾನಿ ಕಚೇರಿಗೆ ಹೋಗಿ ಸಾಲ ಮನ್ನಾ ಮಾಡಿಸಿಕೊಳ್ಳುತ್ತಾರೆ. ಆದರೆ ಎಷ್ಟೇ ರೈತರು ಆತ್ಮಹತ್ಯೆ ಮಾಡಿದರೂ ಪ್ರಧಾನಿ ರೈತರ ಸಾಲ ಮನ್ನಾ ಮಾಡಲು ತಯಾರಿಲ್ಲ. ಸಿದ್ದರಾಮಯ್ಯ ಸರಕಾರ ಕರ್ನಾಟಕದ ಕೃಷಿಕರ ೮ ಕೋಟಿ ರು. ಸಾಲ ಮನ್ನಾ ಮಾಡಿತು.
 • ಮೋದಿ ಚುನಾವಣೆ ಪ್ರಚಾರದಲ್ಲಿ ನಾನು ದೇಶದ ಕಾವಲುಗಾರ, ಭ್ರಷ್ಟಾಚಾರ ವಿರೋಧಿ ಎನ್ನುತ್ತಾರೆ. ಆದರೆ, ಮೋದಿಯ ಪಕ್ಕದಲ್ಲಿಯೇ ಪರಪ್ಪನ ಅಗ್ರಹಾರದಲ್ಲಿ ಆಹಾರ ಸೇವಿಸಿದವರಿರುತ್ತಾರೆ. ಅದೇ ವೇದಿಕೆಯಲ್ಲಿ ಜೈಲಿಗೆ ಹೋದ ೪ ಜನ ಕುಳಿತಿರುತ್ತಾರೆ.
 • ರೆಡ್ಡಿ ಸಹೋದರರ ಕುಟುಂಬಕ್ಕೆ ೮ ಟಿಕೇಟುಗಳನ್ನು ನೀಡಿದ್ದಾರೆ. ಕಾಂಗ್ರೆಸ್‌ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ೩೫ ಸಾವಿರ ಕೋಟಿ ಮಂಜೂರು ಮಾಡಿತ್ತು. ಅಷ್ಟೇ ಹಣವನ್ನು ರೆಡ್ಡಿ ಸಹೋದರರು ಕರ್ನಾಟಕ ಜನರಿಂದ ಲೂಟಿ ಮಾಡಿದ್ದಾರೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಆಗಿ ಆರಿಸಲು ಅವರಲ್ಲಿ ಯಾವ ಅರ್ಹತೆ ಇದೆ ಎಂಬುದನ್ನು ಪ್ರಧಾನಿ ಜನತೆಗೆ ತಿಳಿಸಬೇಕು.
 • ೮ ಜನ ರೆಡ್ಡಿ ಸಹೋದರರನ್ನು ಕರ್ನಾಟಕ ವಿಧಾನಸಭೆಗೆ ಹೋಗಲು ಯಾಕೆ ಅನುವು ಮಾಡಿಕೊಡುತ್ತೀರಿ ಎಂದು ಮೋದಿಯವರನ್ನು ಕೇಳಬೇಕು, ಅದಕ್ಕಿರುವುದು ಒಂದೇ ಕಾರಣ. ಲೂಟಿಕೋರ ಸಹೋದರರು ಕರ್ನಾಟಕದ ಜನರ ಹಣವನ್ನು ಲೂಟಿ ಮಾಡಿ ಮೋದಿಯ ಪ್ರಚಾರ ಕೆಲಸಕ್ಕೆ ಉಪಯೋಗಿಸಲಿ ಎಂದು.
 • ರಾಜ್ಯದಲ್ಲಿ ೨ ಲಕ್ಷ ಕೃಷಿ ಹೊಂಡ ಮಾಡಿದ್ದೇವೆ. ನಾವು ೧೦ ಸಾವಿರ ಕುಡಿಯುವ ನೀರಿನ ಮೆಶಿನ್‌ಗಳನ್ನು ವಿವಿಧೆಡೆ ಸ್ಥಾಪಿಸಿದ್ದೇವೆ. ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ತರುತ್ತಿದ್ದೇವೆ. ಮೋದಿ ಕರ್ನಾಟಕಕ್ಕೆ ಬಂದು ಸಿದ್ದರಾಮಯ್ಯ, ಖರ್ಗೆ ಹಾಗೂ ನನ್ನ ಅವಹೇಳನ ಮಾಡುತ್ತಾರೆ. ಖುಷಿಯ ವಿಚಾರ ಎಂದರೆ ರೆಡ್ಡಿ ಸಹೋದರರು ವಿಧಾನಸಭೆ ಪ್ರವೇಶಿಸುವುದಿಲ್ಲ, ಯಡಿಯೂರಪ್ಪ ಕೂಡ ವಿಧಾನಸಭೆ ಪ್ರವೇಶಿಸುವುದಿಲ್ಲ; ಚುನಾವಣೆಯಲ್ಲಿ ಕರ್ನಾಟಕದ ಜನ ಸ್ಪಷ್ಟ ಸಂದೇಶವನ್ನು ಮೋದಿಗೆ ತಲುಪಿಸಲಿದ್ದಾರೆ.
 • ಯಾವ ಜನ ಅಂಬೇಡ್ಕರ್ ಮುಂದೆ ನಮಸ್ಕರಿಸುತ್ತಾರೋ ಅದೆ ಜನ ದಲಿತರ ವಿರುದ್ಧ ದೌರ್ಜನ್ಯ ನಡೆಸುತ್ತಾರೆ. ರೋಹಿತ್ ವೇಮುಲ ಹತ್ಯೆ ಆಗುತ್ತದೆ. ಪ್ರಧಾನಿ ಮಾತನಾಡುವುದಿಲ್ಲ, ಗುಜರಾತ್‌ನಲ್ಲಿ ದಲಿತರ ಮೇಲೆ ಹಲ್ಲೆ ಆಗುತ್ತದೆ, ಮೋದಿ ಮಾತನಾಡುವುದಿಲ್ಲ. ಉತ್ತರ ಪ್ರದೇಶ ಬಿಜೆಪಿ ಶಾಸಕ ಮಹಿಳೆಯ ಬಲತ್ಕಾರ ಮಾಡುತ್ತಾನೆ, ಮೋದಿ ಮಾತನಾಡುವುದಿಲ್ಲ. ಜಮ್ಮ ಕಾಶ್ಮೀರದಲ್ಲಿ ೮ ವರ್ಷದ ಸಣ್ಣ ಬಾಲಕಿ ಮೇಲೆ ಅತ್ಯಾಚಾರವಾಗುತ್ತದೆ. ಮೋದಿ ಮಾತಾನಡುವುದಿಲ್ಲ, ಕರ್ನಾಟಕಕ್ಕೆ ಬಂದು ಬಸವಣ್ಣನವರ ಮತ್ತು ಅಂಬೇಡ್ಕರ್‌ ಮೂರ್ತಿಗೆ ಸಾಷ್ಟಾಂಗ ನಮಸ್ಕರಿಸುತ್ತಾರೆ.
 • ಆರ್‌ಎಸ್‌ಎಸ್‌ ಎಷ್ಟೇ ಶಾಖೆ ತೆರೆಯಲಿ, ಪ್ರಧಾನಿ ಏನೇ ಹೇಳಲಿ, ನಾವು ಸಂವಿಧಾನ ಬದಲಾಯಿಸಲು ಬಿಡುವುದಿಲ್ಲ.
 • ಕರ್ನಾಟಕದ ಜನರ ಹಸಿವು ನೀಗಿಸುವ ಭರವಸೆ ನೀಡಿ ಅದನ್ನು ಪೂರೈಸಿದ್ದೇವೆ. ಈಗ ಭರವಸೆ ಕೊಡುತ್ತೇನೆ. ಇನ್ನು ೫ ವರ್ಷದಲ್ಲಿ ಯಾವುದೇ ಕರ್ನಾಟಕದ ಯಾವುದೇ ನಾಡಿಗೆ ಹೋದರೂ ಮನೆ ಇಲ್ಲದ ವ್ಯಕ್ತಿಯನ್ನು ನೀವು ಕಾಣಲಾರಿರಿ. ೫ ವರ್ಷದಲ್ಲಿ ೫೦ ಲಕ್ಷ ಮನೆ ನಿರ್ಮಿಸಲಿದ್ದೇವೆ.
ಇದನ್ನೂ ಓದಿ : ರಾಹುಲ್‌ ಗಾಂಧಿ ಪ್ರಶ್ನೆಗಳಿಗೆ ಉತ್ತರಿಸಲು ಬಿಜೆಪಿ ತಡವರಿಸುತ್ತಿರುವುದೇಕೆ?
 • ಯೋಚನೆ ಮಾಡಿ, ರೆಡ್ಡಿ ಸಹೋದರರಿಗೆ ಮತ್ತೊಮ್ಮೆ ೫೦ ಲಕ್ಷ ಕೋಟಿ ಲೂಟಿ ಮಾಡಲು ಅವಕಾಶ ಕೊಡುತ್ತೀರೋ, ಕರ್ನಾಟಕದಲ್ಲಿ ೫೦ ಲಕ್ಷ ಮನೆ ನಿರ್ಮಿಸುವವರಿಗೆ ಅವಕಾಶ ಕೊಡುತ್ತೀರೋ?
 • ನಾವು ಮುಂದಿನ ೫ ವರ್ಷದಲ್ಲಿ ೧ ಕೋಟಿ ಯುವಕರಿಗೆ ಉದ್ಯೋಗ ನೀಡಲಿದ್ದೇವೆ. ರೈತರಿಗೆ ಕಷ್ಟ ಬಂದಾಗ ನಾವು ಅವರ ಜೊತೆ ನಿಲ್ಲುತ್ತೇವೆ. ಇದೇ ನಮ್ಮ ಹಾಗೂ ಅವರ ನಡುವಿನ ವ್ಯತ್ಯಾಸ.
 • ಈ ಬಾರಿ ಕಾಂಗ್ರೆಸ್‌ ನಾಯಕರು ಒಂದಾಗಿ ಕೆಲಸ ಮಾಡಿದ್ದಾರೆ. ಈ ಬಾರಿ ಕಾಂಗ್ರೆಸ್ ನಾಯಕರ ಶಕ್ತಿ ಏನೆಂಬುದನ್ನು ಈ ಸಲ ಬಿಜೆಪಿಗೆ ತೋರಿಸುತ್ತೇವೆ. ಒಂದು ಕಡೆ ಆರ್‌ಎಸ್‌ಎಸ್‌, ಇನ್ನೊಂದೆಡೆ ಬಸವಣ್ಣನ ಕಾಂಗ್ರೆಸ್ ಪಕ್ಷ. ಮಧ್ಯದಲ್ಲಿ ಜೆಡಿಎಸ್. ಜೆಡಿಎಸ್ ಮೌನವಾಗಿರಬಾರದು. ಇದು ಸಿದ್ಧಾಂತಗಳ ಸಂಘರ್ಷ. ತನ್ನ ನಿಲುವು ಸ್ಪಷ್ಟಪಡಿಸಬೇಕು.
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More