ಕಾಂಗ್ರೆಸ್‌ ಪಕ್ಷ ದಲಿತರ ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದ ಮೋದಿ

ವಿಧಾನಸಭೆ ಚುನಾವಣೆ ಪ್ರಯುಕ್ತ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಪ್ರಚಾರ ಭಾಷಣ ಮಾಡಿದ ಪ್ರಧಾನಿ ಮೋದಿಯವರು, ಎತ್ತಿನಹೊಳೆ ಯೋಜನೆಯ ಬಗ್ಗೆ ಮತ್ತೆ ಪ್ರಾಸ್ತಾಪಿಸಿದರು. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಿದ್ದೇವೆ ಎಂದು ಭರವಸೆ ನೀಡಿದರು

  • ಕಾಂಗ್ರೆಸ್‌ ಪಕ್ಷವು ರೈತರ ಬಗ್ಗೆ ಮೊಸಳೆ ಕಣ್ಣಿರು ಸುರಿಸುತ್ತದೆ. ಇಲ್ಲಿನ ಜನರಿಗೆ ನೀರು ಹರಿಸಿದ್ದರೆ ಕುಡಿಯುವ ನೀರಿನ ಬವಣೆಯಾದರೂ ತಪ್ಪುತ್ತಿತ್ತು.
  • ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅವರ ರಿಮೋಟ್ ಕಂಟ್ರೋಲ್‌ ಜನಪಥದ ಮನೆಯಲ್ಲಿತ್ತು. ಈಗ ನನಗೂ ರಿಮೋಟ್‌‌ ಕಂಟ್ರೋಲ್‌ ಇದೆ. ಅದು 125 ಕೋಟಿ ಭಾರತೀಯರು.
  • ಯಡಿಯೂರಪ್ಪ ಸರ್ಕಾರ ಬಂದ ತಕ್ಷಣವೇ ಇಲ್ಲಿನ ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸಿ ಈ ಭಾಗದ ನೀರಿನ ಸಮಸ್ಯೆ ಬಗೆಹರಿಸಲಿದ್ದೇವೆ.
  • ಸುಳ್ಳಿನ ತಳಹದಿಯ ಮೇಲೆ ನಿಂತಿರುವುದು ಕಾಂಗ್ರೆಸ್‌ ಪಕ್ಷ. ಇದು ದಲಿತರ ಬಗ್ಗೆ ಪದೇಪದೇ ಸುಳ್ಳು ಹೇಳುತ್ತಿದೆ. ದಲಿತರನ್ನು ದಾರಿ ತಪ್ಪಿಸುತ್ತಿದೆ.
  • ಕಾಂಗ್ರೆಸ್‌ ಪಕ್ಷ ಮೀಸಲಾತಿ ವಿಚಾರದಲ್ಲಿ ದಲಿತರ ದಾರಿತಪ್ಪಿಸುತ್ತಿದೆ. ದಲಿತಪರ ಕಾರ್ಯಗಳಿಗೆ ಬಿಜೆಪಿ ನೀಡಿದಷ್ಟು ಕೊಡುಗೆಯನ್ನು ಬೇರೆ ಯಾವ ಪಕ್ಷವೂ ನೀಡಿಲ್ಲ.
  • ಎತ್ತಿನಹೊಳೆ ಯೋಜನೆಯನ್ನು ಕೈಗೆತ್ತಿಕೊಂಡು ಕಾಮಗಾರಿ ಪೂರ್ಣಗೊಳಿಸಿದ್ದರೆ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜನತೆಯ ಕುಡಿಯುವ ನೀರಿನ ಸಮಸ್ಯೆಯಾದರೂ ಬಗೆಹರಿಯುತ್ತಿತ್ತು.
  • ಸುಳ್ಳನ್ನು ಹೇಳುವುದು ಕಾಂಗ್ರೆಸ್‌ ಅಧ್ಯಕ್ಷರ ನೂತನ ಜವಾಬ್ದಾರಿಯಾಗಿದೆ. ರಾಷ್ಟ್ರದಲ್ಲಿ ಅದೋಗತಿಗೆ ಇಳಿದಿರುವ ಕಾಂಗ್ರೆಸ್‌ ಅನ್ನು ಪುನಶ್ಚೇತನಗೊಳಿಸುವ ಕನಸನ್ನು ಕಾಂಗ್ರೆಸ್‌ ನಾಯಕರು ಕಾಣುತ್ತಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್‌ ಪಕ್ಷವು ಸಮಾಜ ಒಡೆಯುವ ಕೆಲಸ ಮಾಡಿದೆ ಎಂದ ಪ್ರಧಾನಿ ಮೋದಿ
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More