‘ಪರಿವಾರ್‌‌ ಫಸ್ಟ್‌‌’ ಎಂಬುದು ಕಾಂಗ್ರೆಸ್‌ ಅಜೆಂಡಾ ಎಂದ ಪ್ರಧಾನಿ ಮೋದಿ

ರಾಜ್ಯ ವಿಧಾನಸಭೆ ಚುನಾವಣೆ ಪ್ರಯುಕ್ತ ಪ್ರಚಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಕೋಲಾರ ಜಿಲ್ಲೆಯ ಬಂಗಾರಪೇಟೆ, ಚಿಕ್ಕಮಗಳೂರು ಮತ್ತು ಬೆಳಗಾವಿಯಲ್ಲಿ ಸಾರ್ವಜನಿಕ ಭಾಷಣಗಳನ್ನು ಮಾಡಿದರು. ತಮ್ಮ ಭಾಷಣಗಳಲ್ಲಿ ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದರು

ಬೆಳಗಾವಿ

 • ಕಾಂಗ್ರೆಸ್‌ ಸರ್ಕಾರವು ತನ್ನ ಐದು ವರ್ಷಗಳ ಸಾಧನೆಯನ್ನು ಜನರಿಗೆ ತಿಳಿಸುವ ಬದಲು, ಮೋದಿ ಜಪದಲ್ಲಿ ಮುಳುಗಿದೆ. ಇದರಿಂದ ಕಳೆದು ಐದು ವರ್ಷಗಳಲ್ಲಿ ಕಾಂಗ್ರೆಸ್‌ನಿಂದ ಯಾವುದೇ ಸಾಧನೆಯಾಗಿಲ್ಲವೆಂದು ತಿಳಿಯುತ್ತದೆ.
 • ಬಾದಾಮಿಯಲ್ಲಿ ಸೋಲಿನ ಭೀತಿಯಿಂದ ಮುಖ್ಯಮಂತ್ರಿಗಳು ಅಕ್ರಮ ಎಸಗಲು ಸಿದ್ದರಾಗಿದ್ದಾರೆ. ಬಾದಾಮಿಯ ಹೆಸರನ್ನು ಬದನಾಮ್‌ ಮಾಡಲು ಹೊರಟಿದ್ದಾರೆ.
 • ಹಿಂದಿನ ಸರ್ಕಾರಗಳು ಶಂಕುಸ್ಥಾಪನೆ ಮಾಡಿದ ಕಾಮಗಾರಿಗಳನ್ನು ನಾವು ಕೈಗೆತ್ತಿಕೊಂಡಿದ್ದೇವೆ. ಯೋಜನೆಗಳನ್ನು ಪೂರ್ಣಗೊಳಿಸಲು ಒಂದು ಲಕ್ಷ ಕೋಟಿ ರು. ಮೀಸಲಿಟ್ಟಿದ್ದೇವೆ.
 • ಮುದ್ರಾ ಯೋಜನೆಯಡಿ ಕೋಟ್ಯಾಂತರ ಯುವಕರಿಗೆ ಸಾಲ ಒದಗಿಸಿ ಅವರಿಗೆ ಸ್ವಾವಲಂಭಿ ಬದುಕನ್ನು ಕಲ್ಪಿಸಿಕೊಡುವ ಪ್ರಯತ್ನ ಮಾಡಿದ್ದೇವೆ.
 • ಇಂಡಿಯಾ ಫಸ್ಟ್‌ ಅನ್ನುವುದು ಬಿಜೆಪಿಯ ಉದ್ದೇಶವಾಗಿದೆ. ಪರಿವಾರ್‌‌ ಫಸ್ಟ್‌‌ ಎನ್ನುವುದು ಕಾಂಗ್ರೆಸ್‌ ಉದ್ದೇಶವಾಗಿದೆ.
 • ಸ್ಮಾರ್ಟ್‌ ಹ್ಯಾಕಥಾನ್‌ ಮೂಲಕ ಭಾರತವನ್ನು ಹೊಸ ತಂತ್ರಜ್ಞಾನದತ್ತ ಮನ್ನೆಡೆಸುವ ಪ್ರಯತ್ನ ಕೇಂದ್ರ ಸರ್ಕಾರ ಮಾಡುತ್ತಿದೆ.
 • ಕಾಂಗ್ರೆಸ್‌ಗೆ ಸೋಲುವುದು ನಿಶ್ಚಿತವಾದಾಗ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹಬ್ಬಿಸಲಾಗುತ್ತದೆ. ವಾಮಮಾರ್ಗಗಳನ್ನು ಅನುಸರಿಸಲಾಗುತ್ತದೆ.
 • ಉಡಾನ್ ಯೋಜನೆ ಮೂಲಕ ದೇಶದ ಬಡವರ ವಿಮಾನಯಾನದ ಕನಸನ್ನು ಸಾಕಾರಗೊಳಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ.
 • ಈ ಪ್ರದೇಶದಲ್ಲಿ ಹಲವು ನದಿಗಳು ಹರಿಯುತ್ತಿವೆ. ಆದರೂ ಇಲ್ಲಿನ ಜನರು ನೀರಿಗಾಗಿ ಪರಿದಾಡುವಂತಾಗಿದೆ. ನಾವು ಅಧಿಕಾರಕ್ಕೆ ಬಂದರೆ ನೀರಿನ ಸಮಸ್ಯೆಯನ್ನು ಬಗೆಹರಿಸಲಿದ್ದೇವೆ.

ಚಿಕ್ಕಮಗಳೂರು

 • ಸಾವಿರಾರು ವರ್ಷಗಳ ಭವ್ಯ ಪರಂಪರೆ ಹೊಂದಿರುವ ಮಠ ಮಂದಿರಗಳನ್ನು ವಶಪಡಿಸಿಕೊಳ್ಳುವ ಪ್ರಯತ್ನವನ್ನು ಸಿದ್ದರಾಮಯ್ಯ ಸರ್ಕಾರ ಮಾಡಿದ್ದು ಅಕ್ಷಮ್ಯ.
 • 1978 ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಸಂಸತ್ ಪ್ರವೇಶಿಸಿದ್ದ ಇಂದಿರಾ ಗಾಂಧಿಯವರು ಮತ್ತೆ ಈ ಕ್ಷೇತ್ರಕ್ಕೆ ಕಾಲಿಡಲಿಲ್ಲ.
 • ನಕಲಿ ಮತಪತ್ರ ಸೃ‍‍‍‍ಷ್ಟಿಸಿ ಮತ್ತೆ ಅಧಿಕಾರ ಹಿಡಿಯುವ ಪ್ರಯತ್ನವನ್ನು ಕಾಂಗ್ರೆಸ್‌ ಮಾಡುತ್ತಿದೆ. ಅವರು ಸೋಲಿನ ಭೀತಿಯಿಂದ ಬಳಲುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.
 • ಭಾರತದ ಆರ್ಥಿಕ ಪರಿಸ್ಥಿತಿಯ ಬಗ್ಗೆ ರೇಟಿಂಗ್‌ ಏಜೆನ್ಸಿಗಳು ಗುಣಾತ್ಮಕವಾಗಿ ಮಾತನಾಡಿರುವುದು ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲಾಗುತ್ತಿಲ್ಲ.
 • ಇಲ್ಲಿನ ಸರ್ಕಾರವು ಕೇಂದ್ರದೊಂದಿಗೆ ಸಂಘರ್ಷಕ್ಕಿಳಿದು ಕಳೆದು ಐದು ವರ್ಷಗಳನ್ನು ವ್ಯಯಿಸಿತು. ಈ ಸಮಯವನ್ನು ಕರ್ನಾಟಕದ ಅಭಿವೃದ್ಧಿಗೆ ವ್ಯಯಿಸಿದ್ದರೆ, ಕರ್ನಾಟಕದ ಕಲ್ಯಾಣವಾದರೂ ಆಗುತ್ತಿತ್ತು.
 • ಕಾಂಗ್ರೆಸ್‌ಗೆ ಅಧಿಕಾರದ ಬಗ್ಗೆ ಇರುವಷ್ಟು ಕಾಳಜಿ ಜನರ ಬಗ್ಗೆ ಇಲ್ಲ. ಬೇರೆಯವರು ಪ್ರಧಾನ ಮಂತ್ರಿಯಾಗುವುದನ್ನು ಕಾಂಗ್ರೆಸ್‌ನವರು ಸಹಿಸುವುದಿಲ್ಲ.
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More