ಮಧ್ಯರಾತ್ರಿಯ ಅಸಲಿ ಗುರುತಿನ ಚೀಟಿ ಪ್ರಕರಣದ ಹೈಡ್ರಾಮಾ ಹೇಳುವುದೇನು?

ಬೆಂಗಳೂರಿನ ಜಾಲಹಳ್ಳಿಯ ಅಪಾರ್ಟ್‌ಮೆಂಟ್‌ನ ಪ್ಲ್ಯಾಟ್‌ವೊಂದರಲ್ಲಿ ದೊರೆತ ೯ ಸಾವಿರಕ್ಕೂ ಹೆಚ್ಚು ಅಸಲಿ ಗುರುತಿನ ಚೀಟಿ ಪ್ರಕರಣ ಬಿಜೆಪಿ-ಕಾಂಗ್ರೆಸ್‌ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನೇ ಮುಂದೆ ಮಾಡಿದ ಬಿಜೆಪಿ ಮಂಗಳವಾರ ಮಧ್ಯರಾತ್ರಿ ಹೈಡ್ರಾಮಾ ಸೃಷ್ಟಿಸಿತ್ತು. ಆದರೆ ಆಗಿದ್ದೇನು?

ಬೆಂಗಳೂರಿನ ಪ್ರತಿಷ್ಠಿತ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಜಾಲಹಳ್ಳಿಯಲ್ಲಿ ಬಿಜೆಪಿ ಕಾರ್ಪೊರೇಟರ್‌‌ಗೆ ಸೇರಿದ ಅಪಾರ್ಟ್‌ಮೆಂಟ್‌ನ ಪ್ಲ್ಯಾಟ್‌ನಲ್ಲಿ ೯,೭೪೬ ಅಸಲಿ ಗುರುತಿನ ಚೀಟಿಗಳು ಪತ್ತೆಯಾಗಿರುವುದು ರಾಷ್ಟ್ರಮಟ್ಟದಲ್ಲಿ ಭಾರಿ ಸದ್ದು ಮಾಡಿದೆ. ನ್ಯಾಯ ಮತ್ತು ಮುಕ್ತ ಚುನಾವಣೆಗೆ ಮಾರಕವಾದ ಇದೊಂದು ಗಂಭೀರ ಪ್ರಕರಣ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಅಸಲಿ ಗುರುತಿನ ಚೀಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯು ಮಧ್ಯರಾತ್ರಿಯಲ್ಲಿ ಸೃಷ್ಟಿಸಿದ ನಾಟಕೀಯ ಬೆಳವಣಿಗೆ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಇದನ್ನೇ ಮುಂದು ಮಾಡಿ ಆ ಕ್ಷೇತ್ರದ ಚುನಾವಣೆ ರದ್ದು ಮಾಡುವಂತೆ ಬಿಜೆಪಿ ಆಗ್ರಹಿಸಿದೆ. ಆದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ‘ಕಾಂಗ್ರೆಸ್ ಸೋಲುವುದು ಖಚಿತವಾಗುತ್ತಿದ್ದಂತೆ ಅಸಲಿ ಗುರುತಿನ ಚೀಟಿ ಸೃಷ್ಟಿಸುವುದು ಹಾಗೂ ಮತ್ತಿತರ ವಿಧಾನಗಳ ಅನುಸರಿಸುತ್ತದೆ’ ಎಂದು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ನಿರ್ಧಾರಕ್ಕೆ ಬರುವ ಮುನ್ನವೇ ಕಾಂಗ್ರೆಸ್‌ ಮೇಲೆ ಹೊಣೆ ಹೊರಿಸಿರುವುದರ ಹಿಂದೆ ಪಿತೂರಿ ಇದೆಯೇ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿದೆ.

ಅಸಲಿ ಗುರುತಿನ ಚೀಟಿಗಳು ಪತ್ತೆಯಾದ ಪ್ಲ್ಯಾಟ್‌ ಬಿಜೆಪಿ ಕಾರ್ಪೊರೇಟ್‌ಗೆ ಸೇರಿದ್ದು, ಅದನ್ನು ಬಾಡಿಗೆ ಪಡೆದಿದ್ದ ವ್ಯಕ್ತಿ ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್‌ಗೆ ಆಪ್ತರಾದವರು ಎಂಬುದನ್ನು ಅರಿತಿದ್ದೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಿಕ್ಕಮಗಳೂರು ಮತ್ತು ಬೆಳಗಾವಿಯಲ್ಲಿ ನಡೆದ ಪ್ರಚಾರ ಭಾಷಣದಲ್ಲಿ ಅಸಲಿ ಗುರುತಿನ ಚೀಟಿ ವಿಚಾರವನ್ನು ಪ್ರಸ್ತಾಪಿಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವಿವಾದಕ್ಕೆ ಜವಾಬ್ದಾರಿಯುತವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ವಿಷಯ ಚುನಾವಣಾ ಆಯೋಗದ ಅಂಗಳದಲ್ಲಿದೆ. ಆಯೋಗ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ’ ಹೇಳಿದ್ದಾರೆ. ಬಿಜೆಪಿ ಮುಖಂಡರು ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದಿದ್ದರೂ ಸಿದ್ದರಾಮಯ್ಯ ಅವರು ಅದನ್ನು ರಾಜಕೀಯಗೊಳಿಸಲು ಮುಂದಾಗಿಲ್ಲ ಎಂಬುದು ಗಮನಾರ್ಹ.

ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯುವರು ಅಸಲಿ ಗುರುತಿನ ಚೀಟಿ ಪ್ರಕರಣವನ್ನು ಮುಂದು ಮಾಡಿ, ಆಯೋಗವು ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನವೇ ರಾಜ್ಯ ಸರ್ಕಾರದ ವಿರುದ್ಧ ದಾಳಿ ನಡೆಸುವ ಭರದಲ್ಲಿ, ಚುನಾವಣಾ ಆಯೋಗವನ್ನು ಒತ್ತಡಕ್ಕೆ ಸಿಲುಕಿಸುವ ಕೆಲಸ ಮಾಡಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ. ಸಾಂವಿಧಾನಿಕ ಸಂಸ್ಥೆಗಳ ಮೇಲೆ ಗೌರವವಿದ್ದರೆ ಪ್ರಧಾನಿಯವರು ಆಯೋಗವು ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳುವವರೆಗೆ ಪ್ರಕರಣದ ಬಗ್ಗೆ ಮಾತನಾಡಬಾರದಿತ್ತು ಎಂಬ ತರ್ಕ ಒಪ್ಪುವಂಥದ್ದೇ.

ಇದಕ್ಕೆ ಪೂರಕವೆಂಬಂತೆ ಅಸಲಿ ಗುರುತಿನ ಚೀಟಿ ಪ್ರಕರಣ ಬೆಳಕಿಗೆ ಬರುತ್ತಲೇ ಮಂಗಳವಾರ ರಾತ್ರಿ ಬಿಜೆಪಿಯು ಹೈಡ್ರಾಮಾ ಸೃಷ್ಟಿಸಿತ್ತು. ತಡರಾತ್ರಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್‌ ಕುತಂತ್ರ ನಡೆಸಿದೆ ಎಂದು ಮತದಾನಕ್ಕೆ ಎರಡು ದಿನ ಬಾಕಿ ಇರುವಾಗ ಪ್ರಕರಣವನ್ನು ದೊಡ್ಡದಾಗಿ ಬಿಂಬಿಸಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಯತ್ನಿಸಿತ್ತು. ಇದನ್ನು ಸಮರ್ಥವಾಗಿ ಎದುರಿಸಿರುವ ಕಾಂಗ್ರೆಸ್‌ ವಕ್ತಾರರು ಬಿಜೆಪಿಯ ಇಬ್ಬಗೆ ನೀತಿಯನ್ನು ಅನಾವರಣಗೊಳಿಸಿದ್ದರು. ಅಸಲಿ ಗುರುತಿನ ಚೀಟಿ ದೊರೆತ ಪ್ಲ್ಯಾಟ್‌ ಬಿಜೆಪಿ ಮುಖಂಡರಿಗೆ ಸೇರಿದ್ದು ಎಂಬ ಕಾಂಗ್ರೆಸ್‌ ಆರೋಪವನ್ನು ಬಿಜೆಪಿ ನಿರಾಕರಿಸಿತ್ತು. ಆದರೆ, ಇದನ್ನು ಒಪ್ಪದ ಬಿಜೆಪಿ ನಾಯಕಿ ಮಂಜುಳಾ ನಂಜಮುರಿ ಅವರು ‘ತಾನು ಬಿಜೆಪಿ ಟಿಕೆಟ್‌ನಲ್ಲಿ ಕಾರ್ಪೊರೇಟರ್‌ ಆಗಿದ್ದೇನೆ. ಕಾಂಗ್ರೆಸ್‌ ಸೇರುವ ಪ್ರಶ್ನೆಯೇ ಇಲ್ಲ. ದೂರದ ಸಂಬಂಧಿ ಜಗದೀಶ್ ಎಂಬವರಿಗೆ ಪ್ಲ್ಯಾಟ್‌ ಅನ್ನು‌ ಬಾಡಿಗೆ ನೀಡಿದ್ದೇನೆ’ ಎಂದು ಹೇಳಿದ್ದಾರೆ. ಆದರೆ, ಪ್ಲ್ಯಾಟ್‌ ಬಾಡಿಗೆ ಪಡೆದ ವ್ಯಕ್ತಿ ಜಗದೀಶ್‌ ಅವರು ‘ಮಂಜುಳಾ ಹಾಗೂ ತಮಗೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ. ಪ್ರಕರಣದಲ್ಲಿ ಸಾಕಷ್ಟು ಗೊಂದಲ, ಸಂಶಯವಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ : ಅಂಕಿ-ಅಂಶಗಳ ಮೂಲಕ ಮೋದಿ ಸರ್ಕಾರದ ಆರ್ಥಿಕ ವೈಫಲ್ಯ ಬಿಚ್ಚಿಟ್ಟ ಮನಮೋಹನ್ ಸಿಂಗ್‌

ಇದೆಲ್ಲದರ ಮಧ್ಯೆ, ಈ ಪ್ರಕರಣಕ್ಕೆ ಇನ್ನೊಂದು ಮುಖವಿದೆ. ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್‌ ಹಾಲಿ ಶಾಸಕ ಮುನಿರತ್ನ ಅವರು ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಿಂದ ಮುನಿರಾಜು ಗೌಡ ಹಾಗೂ ಜೆಡಿಎಸ್‌ ಜೆ ಎಚ್‌ ರಾಮಚಂದ್ರ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿಯಲ್ಲಿ ಟಿಕೆಟ್‌ ದೊರೆಯದೇ ಇರುವುದರಿಂದ ರಾಮಚಂದ್ರ ಜೆಡಿಎಸ್‌ ಸೇರಿದ್ದಾರೆ. ಅಸಲಿ ಮತದಾರ ಗುರುತಿನ ಚೀಟಿಗಳು ಪತ್ತೆಯಾಗುತ್ತಿದ್ದಂತೆ ಇದನ್ನು ಹಾಲಿ ಶಾಸಕ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಅವರ ಪಾತ್ರವಿದೆ ಎಂದು ಬಿಜೆಪಿ ನೇರ ಆರೋಪ ಮಾಡಿತ್ತು. ಆದರೆ, ಜೆಡಿಎಸ್‌, ಕಾಂಗ್ರೆಸ್‌ ಮತ್ತು ಬಿಜೆಪಿ ವ್ಯವಸ್ಥಿತವಾಗಿ ಪ್ರಮುಖ ವಿಚಾರವನ್ನು ಮುಚ್ಚಿಹಾಕುವ ಯತ್ನ ನಡೆಸುತ್ತಿವೆ. ಬೆಂಗಳೂರಿನ ೨೮ ವಿಧಾನಸಭಾ ಕ್ಷೇತ್ರಗಳನ್ನು ರಿಯಲ್‌ ಎಸ್ಟೇಟ್‌ ಮಾಫಿಯಾ ತನ್ನ ಕೈಯಲ್ಲಿ ಹಿಡಿದಿದೆ. ಇದರಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮುಖಂಡರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗಿಯಾಗಿದ್ದಾರೆ. ಉದ್ಯಮದ ಹಿತಾಸಕ್ತಿ ಕಾಯ್ದುಕೊಳ್ಳಲು ಅವರಿಗೆ ರಾಜಕೀಯ ಅಧಿಕಾರ ಅಗತ್ಯವಿದೆ. ಅದಕ್ಕಾಗಿ ಗೆಲುವನ್ನು ಮಾನದಂಡವಾಗಿಸಿ ಮತದಾನವನ್ನು ನಾನಾ ರೀತಿಯಲ್ಲಿ ಪ್ರಭಾವಿಸುವ ದುಷ್ಕೃತ್ಯಗಳಲ್ಲಿ ತೊಡಗಿರುವ ಸಾಧ್ಯತೆ ಇದೆ. ಆದರೆ, ಚುನಾವಣಾ ಆಯೋಗದ ವಿಚಾರಣೆ ಪೂರ್ವಗೊಳ್ಳುವುದಕ್ಕೂ ಮುನ್ನ ಬಿಜೆಪಿ ನಡೆದುಕೊಳ್ಳುತ್ತಿರುವ ರೀತಿ ಬಿಜೆಪಿಯು ರಾಜಕೀಯವಾಗಿ ರಾಜ್ಯದಲ್ಲಿ ತನಗಾಗುತ್ತಿರುವ ಹಿನ್ನಡೆಯಿಂದ ಪಾರಾಗಲು ಈ ಚುನಾವಣಾ ಅಕ್ರಮವನ್ನು ವಿವಾದವನ್ನಾಗಿ ಪರಿವರ್ತಿಸುತ್ತಿದೆಯೇ ಎನ್ನುವ ಸಂಶಯ ಮೂಡದೇ ಇರದು.

ಪ್ರಸಕ್ತ ಚುನಾವಣೆಯಲ್ಲಿ ಗೆದ್ದೇ ತೀರುವ ಹುಕಿಗೆ ಕಾಂಗ್ರೆಸ್‌-ಬಿಜೆಪಿ ಬಿದ್ದಿವೆ. ಆದರೆ, ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್‌ ಮುಂದಿದ್ದು, ಬಿಜೆಪಿ ಹಿಂದಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿವೆ. ಇದರಿಂದ ಆತಂಕಕ್ಕೆ ಒಳಗಾಗಿರುವ ಬಿಜೆಪಿಯು ಅಧಿಕಾರ ಕೈತಪ್ಪಿದರೆ ರಾಷ್ಟ್ರಮಟ್ಟದಲ್ಲಿ ಹೊಡೆತ ಬೀಳಲಾರಂಭಿಸುತ್ತದೆ ಎಂದು ಅಂದಾಜಿಸಿ ಅದನ್ನು ರಾಜಕೀಯಗೊಳಿಸಿ, ಜನಮನದಲ್ಲಿ ಕಾಂಗ್ರೆಸ್‌ ಅನ್ನು ಅಪರಾಧಿಯನ್ನಾಗಿಸಲು ಯತ್ನಿಸುತ್ತಿರುವಂತಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More