ಪ್ರಧಾನಿ ಮೋದಿಯವರು ಬೆಂಗಳೂರಿಗೆ ಅವಮಾನ ಮಾಡಿದ್ದಾರೆ ಎಂದ ರಾಹುಲ್‌

ವಿಧಾನಸಭಾ ಚುನಾವಣೆ ಪ್ರಯುಕ್ತ ಬೆಂಗಳೂರಿನ ಶಿವಾಜಿ ನಗರದಲ್ಲಿ ಪ್ರಚಾರ ಭಾಷಣ ಮಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರ ವಿರುದ್ಧ ಹರಿಹಾಯ್ದರು. ದಲಿತರ ಮೇಲಿನ ದೌರ್ಜನ್ಯದ ಬಗ್ಗೆ ಮೋದಿಯವರು ಮೌನ ವಹಿಸಿರುವುದನ್ನು ರಾಹುಲ್ ಮತ್ತೊಮ್ಮೆ ಪ್ರಶ್ನಿಸಿದರು

  • ಎಲ್ಲರನ್ನೂ ಒಂದುಗೂಡಿಸಿ ಮುನ್ನಡೆಯುವುದು ನಮ್ಮ ಸಿದ್ಧಾಂತ. ಸಮಾಜವನ್ನು ಒಡೆದಾಳುವುದು ಬಿಜೆಪಿ ಸಿದ್ಧಾಂತ.
  • ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಯಡಿಯೂರಪ್ಪ ಮತ್ತು ರೆಡ್ಡಿ ಸಹೋದರರ ಬಗ್ಗೆ ಮೌನ ವಹಿಸುತ್ತಾರೆ.
  • ಮೋದಿಯವರು ಜನರ ಸಮಸ್ಯೆಗಳ ಬಗ್ಗೆ ಮಾತನಾಡುವುದು ಬಿಟ್ಟು, ಕಾಂಗ್ರೆಸ್‌ ನಾಯಕರಾದ ಮನಮೋಹನ ಸಿಂಗ್‌, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಬಗ್ಗೆ ಭಾಷಣ ಮಾಡುತ್ತಾರೆ.
  • ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಸಾಲ ಮನ್ನಾ ಮಾಡಿದ್ದಾರೆ. ರೈತರ ಸಾಲ ಮನ್ನಾ ಮಾಡಲು ಮೋದಿಯವರನ್ನು ಕೇಳಿಕೊಂಡರೆ ಅವರು ಮೌನಕ್ಕೆ ಶರಣಾಗುತ್ತಾರೆ.
  • ನರೇಂದ್ರ ಮೋದಿ ಸರ್ಕಾರದ ಸಚಿವರೊಬ್ಬರು ಸಂವಿಧಾನ ಬದಲಿಸುವ ಬಗ್ಗೆ ಮಾತನಾಡುತ್ತಾರೆ. ಈ ಬಗ್ಗೆ ಮೋದಿಯವರನ್ನು ಕೇಳಿದರೆ ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ
  • ಅಂಬೇಡ್ಕರ್‌ ಮೂರ್ತಿಗೆ ಹಾರ ಹಾಕಿ ತಲೆಬಾಗಿಸಿ ನಮಸ್ಕರಿಸುವ ಮೋದಿ, ದಲಿತರ ಮೇಲಿನ ದೌರ್ಜನ್ಯದ ಬಗ್ಗೆ ತುಟಿ ಬಿಚ್ಚುವುದಿಲ್ಲ.
  • ಮೋದಿಯಾಗಲಿ, ಅವರ ಸರ್ಕಾರದ ಸಚಿವರಾಗಲಿ, ಆರ್‌ಎಸ್‌ಎಸ್‌ನವರು ಸಂವಿಧಾನ ಬದಲಿಸುವುದು ಹಾಗಿರಲಿ ಅದನ್ನು ಮುಟ್ಟಲು ಸಹ ನಾವು ಬಿಡುವುದಿಲ್ಲ.
  • ಆರೆಸ್ಸೆಸ್, ಗೋಡ್ಸೆ, ನಾಗಪುರ ಹಾಗೂ ಬಿಜೆಪಿಯವರದ್ದು ಒಂದೇ ವಿಚಾರ, ಒಂದೇ ಸಿದ್ದಾಂತ, ಒಂದೇ ಮಾನಸಿಕ ಸ್ಥಿತಿ.
  • ಜಸ್ಟಿಸ್‌ ಲೋಯಾ ಪ್ರಕರಣದ ಬಗ್ಗೆ, ಅಮಿತ್‌ ಮಗನ ಆಸ್ತಿ ಗಳಿಕೆಯ ಬಗ್ಗೆ, ನೀರವ್ ಮೋದಿ ವಂಚನೆಯ ಬಗ್ಗೆ ನರೇಂದ್ರ ಮೋದಿ ಮಾತನಾಡುತ್ತಿಲ್ಲ.
  • ಬೆಂಗಳೂರಿಗರಿಂದ ಭಾರತದ ಹೆಸರು ಜಗತ್ತಿನಾದ್ಯಂತ ಬೆಳಗುತ್ತಿದೆ. ಭಾರತದ ಕೀರ್ತಿ ಕಳಸ ಬೆಂಗಳೂರು. ನರೇಂದ್ರ ಮೋದಿ ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಮಾತನಾಡಿಕೊಂಡು ತಿರುಗುತ್ತಾರೆ. ನೀವು ಮತ್ತು ನಿಮ್ಮ ಪೂರ್ವಜರು ಕಟ್ಟಿ ಬೆಳೆಸಿರುವ ಬೆಂಗಳೂರು ನಗರದ ಬಗ್ಗೆ ಮೋದಿಯವರು ಅವಹೇಳನ ಮಾಡುತ್ತಾರೆ. ಇದು ಬೆಂಗಳೂರಿಗರಿಗೆ ಮೋದಿಯವರು ಮಾಡಿರುವ ಮಹಾದ್ರೋಹ.
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More