ಬಿಜೆಪಿಯು ದೇಶದೆಲ್ಲೆಡೆ ದ್ವೇಷ ಹುಟ್ಟುಹಾಕುತ್ತಿದೆ ಎಂದ ರಾಹುಲ್ ಗಾಂಧಿ

ಬೆಂಗಳೂರಿನಲ್ಲಿ ಚುನಾವಣಾ ಪ್ರಚಾರ ಕೈಗೊಂಡ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿಯವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿ ಹಾಗೂ ಕಾರ್ಯವೈಕರಿಗಳ ವಿರುದ್ದ ತೀವೃ ವಾಗ್ದಾಳಿ ನಡೆಸಿದರು

ಹೆಬ್ಬಾಳ

 • ರಾಜೀವ್‌ ಗಾಂಧಿ ಕಂಪ್ಯೂಟರ್‌ ಬಗ್ಗೆ ಮಾತನಾಡಿದಾಗ ಎಲ್ಲರೂ ಅಪಹಾಸ್ಯ ಮಾಡಿದ್ದರು. ಆದರೆ, ಕಂಪ್ಯೂಟರ್‌ ಬಳಸಿಕೊಂಡು ಬೆಂಗಳೂರಿಗರು ಈ ನಗರವನ್ನು ಸಿಲಿಕಾನ್‌ ವ್ಯಾಲಿಯನ್ನಾಗಿ ಮಾಡಿದರು.
 • ಈ ನಗರದಲ್ಲಿ ಹಲವು ಧರ್ಮ, ಭಾಷೆ ಹಾಗೂ ಸಂಪ್ರದಾಯಗಳ ಜನ ಸಾಮರಸ್ಯದಿಂದ ಬದುಕುತ್ತಿದ್ದಾರೆ.
 • ಅಮೆರಿಕಾದಲ್ಲಿರುವವರು ಬೆಂಗಳೂರನ್ನು ಸ್ಮಾರ್ಟ್‌ ಸಿಟಿ ಎಂದು ಕರೆಯುತ್ತಾರೆ. ಈ ನಗರ ಭಾರತಕ್ಕೆ ದಾರಿದೀಪವಾಗಿದೆ.
 • ಎಚ್ಎಎಲ್ ಒಪ್ಪಂದವನ್ನು ಪ್ರಧಾನಿ ಮೋದಿ ಮುರಿದರು. ಇದರಿಂದ ಬೆಂಗಳೂರಿಗೆ ನಷ್ಟವಾಯಿತು. ಇಲ್ಲಿನ ಯುವಕರಿಗೆ ನಷ್ಟವಾಯಿತು.
 • ಜೈಲಿನಲ್ಲಿ ಊಟ ಮಾಡಿಕೊಂಡು ಬಂದವರು ಇವತ್ತು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ. ಆದರೂ ಪ್ರಧಾನಿ ಮೋದಿ ಭ್ರಷ್ಟಾಚಾರದ ವಿರುದ್ದ ಭಾಷಣ ಮಾಡುತ್ತಾರೆ.
 • ಗಣಿ ಲೂಟಿಕೋರರನ್ನು ಜೈಲಿನಿಂದ ಹೊರತಂದು ವಿಧಾನಸಭೆಗೆ ಕಳಿಸುವ ಪ್ರಯತ್ನವನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆ.
 • ‘ಹಸಿವು ಮುಕ್ತ ಕರ್ನಾಟಕ’ವನ್ನು ನಾವು ಸಾಕಾರಗೊಳಿಸಿದ್ದೇವೆ. ಅನ್ನಭಾಗ್ಯ ಹಾಗೂ ಇಂದಿರಾ ಕ್ಯಾಂಟಿನ್‌ ಯೋಜನೆಗಳನ್ನು ನಾವು ತಂದಿದ್ದೇವೆ.
 • ಇವತ್ತು ರಾಷ್ಟ್ರದ ಪರಿಸ್ಥತಿ ಹೀನಾಯವಾಗಿದೆ. ಬಿಜೆಪಿಯವರು ದ್ವೇಷ, ಅಸೂಯೆಯನ್ನು ಹುಟ್ಟುಹಾಕುತ್ತಿದ್ದಾರೆ. ದಲಿತರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳ ಹಿಂದೆ ಬಿಜೆಪಿಯವರು ಇದ್ದಾರೆ. ಈ ವಿಚಾರಗಳ ಬಗ್ಗೆ ಪ್ರಧಾನಿ ಮಾತನಾಡುವುದಿಲ್ಲ.

ಶಿವಾಜಿ ನಗರ

 • ಎಲ್ಲರನ್ನೂ ಒಂದುಗೂಡಿಸಿ ಮುನ್ನಡೆಯುವುದು ನಮ್ಮ ಸಿದ್ಧಾಂತ. ಸಮಾಜವನ್ನು ಒಡೆದಾಳುವುದು ಬಿಜೆಪಿ ಸಿದ್ಧಾಂತ.
 • ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಯಡಿಯೂರಪ್ಪ ಮತ್ತು ರೆಡ್ಡಿ ಸಹೋದರರ ಬಗ್ಗೆ ಮೌನ ವಹಿಸುತ್ತಾರೆ.
 • ಮೋದಿಯವರು ಜನರ ಸಮಸ್ಯೆಗಳ ಬಗ್ಗೆ ಮಾತನಾಡುವುದು ಬಿಟ್ಟು, ಕಾಂಗ್ರೆಸ್‌ ನಾಯಕರಾದ ಮನಮೋಹನ ಸಿಂಗ್‌, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಬಗ್ಗೆ ಭಾಷಣ ಮಾಡುತ್ತಾರೆ.
 • ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಸಾಲ ಮನ್ನಾ ಮಾಡಿದ್ದಾರೆ. ರೈತರ ಸಾಲ ಮನ್ನಾ ಮಾಡಲು ಮೋದಿಯವರನ್ನು ಕೇಳಿಕೊಂಡರೆ ಅವರು ಮೌನಕ್ಕೆ ಶರಣಾಗುತ್ತಾರೆ.
 • ನರೇಂದ್ರ ಮೋದಿ ಸರ್ಕಾರದ ಸಚಿವರೊಬ್ಬರು ಸಂವಿಧಾನ ಬದಲಿಸುವ ಬಗ್ಗೆ ಮಾತನಾಡುತ್ತಾರೆ. ಈ ಬಗ್ಗೆ ಮೋದಿಯವರನ್ನು ಕೇಳಿದರೆ ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ
 • ಅಂಬೇಡ್ಕರ್‌ ಮೂರ್ತಿಗೆ ಹಾರ ಹಾಕಿ ತಲೆಬಾಗಿಸಿ ನಮಸ್ಕರಿಸುವ ಮೋದಿ, ದಲಿತರ ಮೇಲಿನ ದೌರ್ಜನ್ಯದ ಬಗ್ಗೆ ತುಟಿ ಬಿಚ್ಚುವುದಿಲ್ಲ.
 • ಮೋದಿಯಾಗಲಿ, ಅವರ ಸರ್ಕಾರದ ಸಚಿವರಾಗಲಿ, ಆರ್‌ಎಸ್‌ಎಸ್‌ನವರು ಸಂವಿಧಾನ ಬದಲಿಸುವುದು ಹಾಗಿರಲಿ ಅದನ್ನು ಮುಟ್ಟಲು ಸಹ ನಾವು ಬಿಡುವುದಿಲ್ಲ.
 • ಆರೆಸ್ಸೆಸ್, ಗೋಡ್ಸೆ, ನಾಗಪುರ ಹಾಗೂ ಬಿಜೆಪಿಯವರದ್ದು ಒಂದೇ ವಿಚಾರ, ಒಂದೇ ಸಿದ್ದಾಂತ, ಒಂದೇ ಮಾನಸಿಕ ಸ್ಥಿತಿ.
 • ಜಸ್ಟಿಸ್‌ ಲೋಯಾ ಪ್ರಕರಣದ ಬಗ್ಗೆ, ಅಮಿತ್‌ ಮಗನ ಆಸ್ತಿ ಗಳಿಕೆಯ ಬಗ್ಗೆ, ನೀರವ್ ಮೋದಿ ವಂಚನೆಯ ಬಗ್ಗೆ ನರೇಂದ್ರ ಮೋದಿ ಮಾತನಾಡುತ್ತಿಲ್ಲ.
 • ಬೆಂಗಳೂರಿಗರಿಂದ ಭಾರತದ ಹೆಸರು ಜಗತ್ತಿನಾದ್ಯಂತ ಬೆಳಗುತ್ತಿದೆ. ಭಾರತದ ಕೀರ್ತಿ ಕಳಸ ಬೆಂಗಳೂರು. ನರೇಂದ್ರ ಮೋದಿ ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಮಾತನಾಡಿಕೊಂಡು ತಿರುಗುತ್ತಾರೆ. ನೀವು ಮತ್ತು ನಿಮ್ಮ ಪೂರ್ವಜರು ಕಟ್ಟಿ ಬೆಳೆಸಿರುವ ಬೆಂಗಳೂರು ನಗರದ ಬಗ್ಗೆ ಮೋದಿಯವರು ಅವಹೇಳನ ಮಾಡುತ್ತಾರೆ. ಇದು ಬೆಂಗಳೂರಿಗರಿಗೆ ಮೋದಿಯವರು ಮಾಡಿರುವ ಮಹಾದ್ರೋಹ.
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More