ರಾಜ್ಯಾದ್ಯಂತ ಮತದಾನದ ಸಂಭ್ರಮ, ಇಲ್ಲಿದೆ ಗಮನ ಸೆಳೆದ ಕ್ಷಣಗಳ ಗುಚ್ಛ

ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಶನಿವಾರ 222 ಕ್ಷೇತ್ರಗಳಿಗೆ ಮತದಾನವಾಗಿದ್ದು, ಜನಸಾಮಾನ್ಯರು ಹಕ್ಕು ಚಲಾಯಿಸುವ ಮೂಲಕ ತಮ್ಮ ಕರ್ತವ್ಯವನ್ನು ಮೆರೆದರು. ಮತದಾನದ ಗಮನ ಸೆಳೆದ ಹತ್ತು ಹಲವು ವಿಚಾರಗಳು, ಮತದಾನ ಮಾಡಿದವರ ಸಂಭ್ರಮದ ಕೆಲ ಕ್ಷಣಗಳು ಇಲ್ಲಿವೆ

ತೃತೀಯ ಲಿಂಗಿಗಳಿಗೂ ಈ ಬಾರಿ ಮತದಾನಕ್ಕೆ ಅವಕಾಶ ಸಿಕ್ಕಿದ್ದು, ಹಕ್ಕು ಚಲಾಯಿಸಿದ ಅಕ್ಕೈ ಪದ್ಮಸಾಲಿ ಫೇಸ್‌ಬುಕ್‌ನಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಮಂಗಳೂರಿನಲ್ಲಿ 100 ಮಂದಿ ಮಂಗಳಮುಖಿಯರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
111 ವರ್ಷ ವಯಸ್ಸಿನ ಶತಾಯುಷಿ ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಡೆ ದಂಪತಿ
ವೀರೇಂದ್ರ ಹೆಗ್ಡೆ ಸಹೋದರ ಹರ್ಷೇಂದ್ರ ಹೆಗ್ಡೆ ದಂಪತಿ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮಲ್ಲಾಪುರದಲ್ಲಿ ಕಮಲವ್ವ ಹಾಗೂ ಕಾಡಪ್ಪ ದಂಪತಿಗಳು ತಮ್ಮ ಹಕ್ಕು ಚಲಾಯಿಸಿ ಇತರಿಗೆ ಮಾದರಿಯಾದರು.
ಬೆಂಗಳೂರಿನ ಸದಾಶಿವನಗರದಲ್ಲಿ 92ರ ಹರೆಯದ ಗಿರಿಜಮ್ಮ, ವೀಲ್ ಚೇರ್ ಸಹಾಯದಿಂದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.
ಮೈಸೂರಿನಲ್ಲಿ ವಯಸ್ಕರೊಬ್ಬರು ಮನೆಮಂದಿ ಸಹಾಯದಿಂದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.
ಮಂಡ್ಯದಲ್ಲಿ ಹಕ್ಕು ಚಲಾಯಿಸಿದ ವಿಶೇಷಚೇತನ
ವರುಣಾದಲ್ಲಿ ಮತದಾನದ ಬಳಿಕ, ಶಾಹಿ ಹಾಕಿದ ಬೆರಳನ್ನು ಕ್ಯಾಮೆರಾಗೆ ಪ್ರದರ್ಶಿಸಿದ ಕುರಿಗಾಹಿ
ಇದೇ ಮೊದಲ ಬಾರಿಗೆ ಚುನಾವಣಾ ಆಯೋಗವು ಪಿಂಕ್ ಮತಗಟ್ಟೆಯನ್ನು ಸ್ಥಾಪಿಸಿ, ಮಹಿಳಾ ಮತದಾರರನ್ನು ಸೆಳೆಯುವ ಯತ್ನ ಮಾಡಿದೆ. ಸಖಿ ಎಂಬ ಹೆಸರಿನ ಮತಗಟ್ಟೆ ಸಂಪೂರ್ಣ ಪಿಂಕ್ ಬಣ್ಣದಿಂದ ಕೂಡಿದ್ದು, ಸಿಬ್ಬಂದಿ ಕೂಡ ಪಿಂಕ್ ಬಣ್ಣದ ಉಡುಪು ಧರಿಸಿದ್ದರು
ಬಿಡದಿ ಆಶ್ರಮದ ನಿತ್ಯಾನಂದ ಸ್ವಾಮೀಜಿ ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದಾಸಪ್ಪನದೊಡ್ಡಿಯಲ್ಲಿ ಮತದಾನ ಮಾಡಿದರು.
ಬಾಗಲಕೋಟೆಯಲ್ಲಿ ವಧು-ವರರು ಮದುವೆ ಉಡುಪಿನಲ್ಲೇ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿ ಬಳಿಕ ಮದುವೆ ಮಂಟಪಕ್ಕೆ ತೆರಳಿದರು.
ಮಡಿಕೇರಿಯಲ್ಲಿ ವಧುವಿನ ಅಲಂಕಾರದಲ್ಲೇ ಮತಗಟ್ಟೆಗೆ ಆಗಮಿಸಿದ ಯುವತಿ
ಮೈಸೂರು ಯುವರಾಜ ಯದುವೀರ್ ಒಡೆಯರ್ ಇದೇ ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಿದರು. 2013ರ ಚುನಾವಣೆ ಸಂದರ್ಭ ಯದುವೀರ್ ಅವರು ವ್ಯಾಸಂಗದ ನಿಮಿತ್ತ ಅಮೆರಿಕದಲ್ಲಿದ್ದರು.
ಶತಾಯುಷಿ 107 ವರ್ಷ ವಯಸ್ಸಿನ ಸಾಲುಮರದ ತಿಮ್ಮಕ್ಕ ತನ್ನ ಸಾಕುಮಗನೊಂದಿಗೆ ಆಗಮಿಸಿ ಹಕ್ಕು ಚಲಾಯಿಸಿದರು.
ಯುವಕನೊಬ್ಬ ಮತದಾನ ಮಾಡಿದ ಬಳಿಕ ಫೇಸ್ಬುಕ್‌ನಲ್ಲಿ ಸೆಲ್ಫಿಯೊಂದಿಗೆ ಹಾಕಿಕೊಂಡ, “ಎದುರಾಳಿ ಎಷ್ಟೇ ಒಳ್ಳೆಯ ವ್ಯಕ್ತಿಯಾಗಿದ್ದರೂ, ಅವನು ಅಧರ್ಮದ ಪಕ್ಷದಲ್ಲಿದ್ದರೆ ಅವನನ್ನು ಸೋಲಿಸಲೇಬೇಕು. ಇಲ್ಲದಿದ್ದರೆ ಧರ್ಮ ಸೋಲುತ್ತದೆ,” ಎಂಬ ಬರಹ ಗಮನ ಸೆಳೆಯಿತು.
ಬೆಂಗಳೂರಿನ ನಾರಾಯಣಪುರ ಮತಗಟ್ಟೆಯಲ್ಲಿ 5 ತಿಂಗಳ ಮಗುವಿನೊಂದಿಗೆ ಮತಗಟ್ಟೆಗೆ ಬಂದ ತಾಯಿಯ ನೆರವಿಗೆ ಧಾವಿಸಿದ ಪೊಲೀಸ್ ಕಾನ್‌ಸ್ಟೇಬಲ್ ಶಾಮರಾಯ, ಮಗುವನ್ನು ಪಡೆದು ತಾಯಿಗೆ ಮತದಾನಕ್ಕೆ ಅನುವು ಮಾಡಿಕೊಟ್ಟರು.
ಬೆಂಗಳೂರಿನ ರಾಮಸಂದ್ರದಲ್ಲಿ ವಿಶೇಷಚೇತನ ದಂಪತಿಗಳು ತಮ್ಮ ಪುಟಾಣಿ ಮಕ್ಕಳೊಂದಿಗೆ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು.
ಮತ ಚಲಾಯಿಸಿ ಸಂಭ್ರಮಿಸಿದ ತಾಯಿ-ಮಗಳು.

ಮತಚಲಾಯಿಸಿದ 97ರ ಹರೆಯದ ಜೋಸೆಫ್ ಎಲ್ಲರೂ ತಮ್ಮ ಹಕ್ಕನ್ನು ತಪ್ಪದೆ ಚಲಾಯಿಸಿ ಎಂದು ಕರೆ ನೀಡಿದರು.

ಪ್ರತಿಯೊಬ್ಬ ಕನ್ನಡಿಗರೂ ತಮ್ಮ ಹಕ್ಕನ್ನು ಮರೆಯದೆ ಕರ್ತವ್ಯ ಪ್ರಜ್ಞೆಯಿಂದ ಮತ ಚಲಾಯಿಸಿ ಎಂದು ಹಿರಿಯ ಮಹಿಳೆಯೊಬ್ಬರು ಯುವಕರಿಗೆ ಕರೆ ನೀಡಿದರು.

ಶಿವಮೊಗ್ಗದಲ್ಲಿ 47ರ ಹರೆಯದ ರಾಜಿಮೋನ್ ಮಿಥಾಲ್ 1.75 ಕೆಜಿ ತೂಕದ ಚಿನ್ನಾಭರಣ ಧರಿಸಿ, ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ಬೆಂಗಳೂರಿನ ದೇವಯ್ಯ ಪಾರ್ಕ್‌ನಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬರು, ಮನೆಮಂದಿಯ ಸಹಾಯದೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

ಉಪಚುನಾವಣೆಗೂ ಮುನ್ನ ದೇವೇಗೌಡ, ಸಿದ್ದರಾಮಯ್ಯ ರವಾನಿಸಿದ ಸಂದೇಶವೇನು?
ಶಿವಮೊಗ್ಗ ಲೋಕಸಭಾ ಉಪ ಚುನಾವಣೆ | ಒಲ್ಲದ ಮದುವೆ ಕಣದಲ್ಲಿ ಬಳುವಳಿಗಳ ಮೇಲಾಟ!
ಲಿಂಗಾಯತ ಧರ್ಮ ಕುರಿತ ಸಚಿವ ಡಿಕೆಶಿ ಕ್ಷಮಾಪಣೆ ಹಿಂದಿನ ಒಳಗುಟ್ಟುಗಳೇನು?
Editor’s Pick More