ಕರ್ನಾಟಕ ಚುನಾವಣೆ ಕಲಿಸಿದ ಪಾಠ; ಬಿಜೆಪಿ ಓಟಕ್ಕೆ ವಿರೋಧಿಗಳ ಒಗಟ್ಟೇ ಲಗಾಮು

ರಾಷ್ಟ್ರದ ಗಮನ ಸೆಳೆದ ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್‌ ಪ್ರಚಾರ, ರಣತಂತ್ರಗಳು ಬಿಜೆಪಿಯನ್ನು ಹಿಡಿದು ನಿಲ್ಲಿಸುವಲ್ಲಿ ಸೋತಿವೆ. ಆದರೂ ಅಧಿಕಾರದಿಂದ ದೂರ ನಿಂತ ಕಾಂಗ್ರೆಸ್‌ನ ಲೆಕ್ಕಾಚಾರ ಸೋತಿದ್ದೆಲ್ಲಿ?

ಕರ್ನಾಟಕದಲ್ಲಿ ಬಿಜೆಪಿ ಪರಿಣಾಮಕಾರಿಯಾದ ಪ್ರದರ್ಶನದ ನೀಡಿದ ಬಳಿಕ, ದೇಶದ ಎಲ್ಲ ಜಾತ್ಯತೀತ ಪಕ್ಷಗಳಿಗೆ ರವಾನೆಯಾಗಿರುವ ಸಂದೇಶವಿದು: ೨೦೧೯ರಲ್ಲಿ ಬಿಜೆಪಿಯೊಂದಿಗೆ ಸೆಣಸಲು ತಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಂಡು ಒಟ್ಟಾಗಿ ಹೋರಾಡಬೇಕು. ತ್ರಿಣಮೂಲ ಕಾಂಗ್ರೆಸ್‌ ನಾಯಕಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಮಾತಲ್ಲಿ ಹೇಳುವಂತೆ, "ಕಾಂಗ್ರೆಸ್‌, ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರೆ, ಫಲಿತಾಂಶ ಭಿನ್ನವಾಗಿರುತ್ತವೆ-ತುಂಬಾ ಭಿನ್ನವಾಗಿರುತ್ತಿತ್ತು.'' ಇದೇ ದೃಷ್ಟಿಕೋನವು ಕಾಂಗ್ರೆಸ್‌ ನಾಯಕರೂ ಪ್ರತಿಧ್ವನಿಸಿದ್ದು, ಗೋರಖ್‌ಪುರ ಉಪಚುನಾವಣೆಯಲ್ಲಿ ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷ ಮಾದರಿಯ ಮೈತ್ರಿ ಮುನ್ನಡೆಗೆ ಕಾರಣವಾಯಿತು ಎಂದು ಅವರು ಭಾವಿಸುತ್ತಾರೆ.

ಕೇರಳದ ಹಿರಿಯ ಕಾಂಗ್ರೆಸ್‌ ನಾಯಕರೊಬ್ಬರು, ಯುಪಿಎ-೨ರಲ್ಲಿ ಸಂಪುಟ ಸಚಿವರಾಗಿದ್ದವರು, ಈ ವಿಚಾರವನ್ನು ‘ದಿ ಸ್ಟೇಟ್‌’ನೊಂದಿಗೆ ಹಂಚಿಕೊಂಡರು: "ಮಾಯಾವತಿ ಮತ್ತು ಅಖಿಲೇಶ್‌ ಯಾದವ್‌ ಅವರ ಮೈತ್ರಿಯನ್ನು ಅಪವಿತ್ರ ಎಂದು ಜನ ಬಣ್ಣಿಸಿದರು. ಯಾಕೆಂದರೆ, ಎರಡೂ ಪಕ್ಷಗಳು ಘೋಷಿತ ಶತ್ರುಗಳಾಗಿದ್ದರು. ಆದರೆ, ಗೋರಖ್‌ಪುರದಲ್ಲಿ ಬಿಜೆಪಿ ವಿರೋಧಿಗಳನ್ನು ಒಂದು ಸೂತ್ರದಲ್ಲಿ ಬಂಧಿಸಲು ಮೈತ್ರಿ ನೆರವಾಯಿತು. ಈ ಗೋರಖ್‌ಪುರ ಸೂತ್ರವನ್ನು ಎಲ್ಲ ಪಕ್ಷಗಳು ಕಲಿಯಬೇಕು ಮತ್ತು ನಕಲು ಮಾಡಬೇಕು. ಕಾಂಗ್ರೆಸ್‌ ಪಕ್ಷ ಕೂಡ ತನ್ನ ಮೈತ್ರಿ ಧರ್ಮವನ್ನು ಎಲ್ಲರನ್ನು ಒಳಗೊಳ್ಳುವಂತೆ ಪುನಾರಚಿಸಿಕೊಳ್ಳಬೇಕಾಗಿದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆಯುವ ಮತ್ತು ಎಲ್ಲರಿಗೂ ಅವಕಾಶಗಳನ್ನು ಕಲ್ಪಿಸುವಂತಾಗಬೇಕು. ಬಿಜೆಪಿ ಅನುಸರಿಸುತ್ತಿರುವ ರಾಜಕೀಯವನ್ನು ವಿರೋಧಿಸುವ ಎಲ್ಲರೂ ಒಂದು ವೇದಿಕೆಯಲ್ಲಿ, ಒಟ್ಟಾಗಿ ನಿಲ್ಲುವಂತಾಗಬೇಕು. ಅದೊಂದೇ ಮಾರ್ಗ.''

ಅವರು ಹೇಳುವಂತೆ, ಕೋಮುವಾದ ಅಜೆಂಡಾವನ್ನು ಜನರತ್ತ ತಳ್ಳಲು ಸಾಮಾಜಿಕ ಮಾಧ್ಯಮವನ್ನು ಬಳಕೆ ಮತ್ತು ದುರ್ಬಳಕೆ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ ಹೆಚ್ಚು ಪರಿಣಾಮಕಾರಿಯಾಗಿದೆ ಎಂಬುದನ್ನು ಕರ್ನಾಟಕ ಫಲಿತಾಂಶ ಸಾಬೀತು ಮಾಡಿದೆ. "ಕಾಂಗ್ರೆಸ್‌ ಸಾಮಾಜಿಕ ಮಾಧ್ಯಮಗಳ ಪ್ರಚಾರಗಳನ್ನು ನಿಲ್ಲಿಸಬೇಕೆಂದು ಯಾರೂ ಹೇಳುತ್ತಿಲ್ಲ. ಅದು ಅದರದ್ದೇ ಆದ ಪಾತ್ರವನ್ನು ನಿರ್ವಹಿಸುತ್ತದೆ. ಆದರೆ ಒಂದು ಪಕ್ಷವಾಗಿ ನಾವು ಬಿಜೆಪಿಯಷ್ಟು ಕೆಳಮಟ್ಟಕ್ಕೆ ಇಳಿಯಲು ಆಗುವುದಿಲ್ಲ ಮತ್ತು ಸುಳ್ಳು ಸುದ್ದಿಗಳನ್ನು ಮತ್ತು ವ್ಯವಸ್ಥಿತ ಪ್ರಚಾರ ನಡೆಸುವುದಿಲ್ಲ. ಹಾಗಾಗಿ ಸಮರ್ಥವಾದ ಚುನಾವಣಾ ತಂತ್ರಗಳನ್ನು ಕಂಡುಕೊಳ್ಳಬೇಕಾಗಿದೆ. ಈಗ ಬಿಜೆಪಿ ಎದುರು ಅತಿದೊಡ್ಡ ಪ್ರತಿರೋಧವನ್ನು ಮುಂದಿಡುವುದಕ್ಕೆ ಗಂಭೀರವಾಗಿ ಚಿಂತಿಸಬೇಕಾಗಿದೆ,'' ಎಂದು ಆ ನಾಯಕರು ಹೇಳಿದರು.

ಬಿಜೆಪಿಯೊಳಗಿನವರ ಪ್ರಕಾರ, ಕರ್ನಾಟಕದ ಬಿಜೆಪಿ ಸೋಷಿಯಲ್‌ ಮೀಡಿಯಾ ಸೆಲ್‌ ೨೩,೦೦೦ ವಾಟ್ಸ್‌ಆಪ್‌ ಗ್ರೂಪ್‌ಗಳನ್ನು ಸೃಷ್ಟಿಸಿತ್ತು. ಪ್ರತಿ ಗುಂಪಿನಲ್ಲಿ ೧೦೦ ಸದಸ್ಯರು. ಪಕ್ಷವೂ ಈ ಸೋಷಿಯಲ್‌ ಮೀಡಿಯಾ ನೆಟ್‌ವರ್ಕ್‌ ಮೂಲಕ ಜನರ ತಲುಪಿ, ಪ್ರತಿ ಪಕ್ಷದ ಪ್ರಚಾರಗಳಿಗೆ ಪ್ರತಿರೋಧವನ್ನು ಕಟ್ಟಿತು. ಜೊತೆಗೆ ತನ್ನ ರಾಜಕೀಯ ವೈರಿಗಳ ಬಗ್ಗೆ ತಪ್ಪು ಮಾಹಿತಿಗಳನ್ನು ಹರಡುವುದು ಮತ್ತು ಮತದಾರರನ್ನು ಕೋಮು ವಿಚಾರಗಳ ಮೇಲೆ ಧ್ರುವೀಕರಿಸಿತು.

ಕರ್ನಾಟಕದಲ್ಲಿ ಕಾಂಗ್ರೆಸ್‌ ಸೋಲು ರಾಹುಲ್‌ ಗಾಂಧಿಗಂತೂ ದೊಡ್ಡ ಹಿನ್ನಡೆ. ಆದರೆ, ಅಲ್ಲಗಳೆಯಲಾಗದ ಒಂದು ಸಂಗತಿ ಎಂದರೆ ದಕ್ಷಿಣ ರಾಜ್ಯವೊಂದರಲ್ಲಿ ಅತ್ಯಂತ ಹುರುಪಿನಿಂದ ಪ್ರಚಾರ ನಡೆಸಿದ್ದು. ಜನರನ್ನು ಸೆಳೆಯುವಲ್ಲಿ ಮತ್ತು ಘನತೆಯೊಂದಿಗೆ ನಡೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಕ್ರಿಯಾಶೀಲರಾಗಿದ್ದ ಹೊಸ ರಾಹುಲ್‌ ಗಾಂಧಿ ಕಂಡಿದ್ದಾರೆ. ಆದರೆ ಆಡಳಿತ ವಿರೋಧಿ ಅಲೆ ಮತ್ತು ಒಡೆದ ಜಾತ್ಯತೀತ ರಂಗ, ರಾಜ್ಯದ ಹಲವು ಕ್ಷೇತ್ರಗಳಲ್ಲಿ ತ್ರಿವಳಿ ಸ್ಪರ್ಧೆಯನ್ನು ಹುಟ್ಟುಹಾಕಿ ಬಿಜೆಪಿ ಗೆಲುವಿಗೆ ಕಾರಣವಾಯಿತು.

ಇದನ್ನೂ ಓದಿ : ದೇವೇಗೌಡರ ಕುಸ್ತಿ ಅಖಾಡದಲ್ಲಿ ಕೊನೆಗೂ ಸೋಲೊಪ್ಪಿದ ಸಿದ್ದರಾಮಯ್ಯ

ಒಂದು ವೇಳೆ ವಿರೋಧ ಪಕ್ಷಗಳು ೨೦೧೯ರಲ್ಲಿ ಒಂದಾಗಿ, ಮೈತ್ರಿಕೂಟವನ್ನು ಕಟ್ಟಬೇಕಿದೆ. ಬಹಳ ವೇಗದಲ್ಲಿ ಈ ಕೆಲಸ ಆಗಿದೆ, ಯಾಕೆಂದರೆ ಮುಂದಿನ ವರ್ಷ ಮೇ ನಡೆಯಬೇಕಿರುವ ಲೋಕಸಭಾ ಚುನಾವಣೆ ಡಿಸೆಂಬರ್‌ನಲ್ಲೇ ನಡೆಯಬಹುದು ಎಂಬ ಮಾತುಗಳು ದೆಹಲಿಯಲ್ಲಿ ಕೇಳಿಬರುತ್ತಿವೆ. ಈ ಬಗ್ಗೆ ಅಧಿಕೃತ ಮಾಹಿತಿಯೇನಿಲ್ಲ. ಆದರೆ, ಈ ವಿಷಯದಲ್ಲಿ ಬಿಜೆಪಿಯಲ್ಲೇ ಭಿನ್ನಾಭಿಪ್ರಾಯ ಇವೆ ಎನ್ನಲಾಗುತ್ತಿದೆ. ಪಕ್ಷ ಒಂದು ವಲಯ, ಕರ್ನಾಟಕದಲ್ಲಾಗಿರುವ ಲಾಭವನ್ನು ವಿಸ್ತರಿಸಬೇಕೆನ್ನುತ್ತಿದೆ. ಆದರೆ, ಇನ್ನೊಂದು ವಲಯವು, ಮಧ್ಯಪ್ರದೇಶ, ಚತ್ತೀಸಗಢ ಮತ್ತು ರಾಜಸ್ಥಾನಗಳಲ್ಲಿ ಡಿಸೆಂಬರ್‌-ಜನವರಿಯಲ್ಲಿ ವಿಧಾನಸಭಾ ಚುನಾವಣೆಗಳು ನಿಗದಿಯಾಗಿರುವುದರಿಂದ ಈ ವೇಳಾಪಟ್ಟಿಯಲ್ಲಿ ವ್ಯತ್ಯಾಸ ಮಾಡುವುದು ಬೇಡ ಎನ್ನುತ್ತಿದೆ.

ಚುನಾವಣೆಗೆ ಸಿದ್ಧವಾಗಿರುವ ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಆಡಳಿತ ವಿರೋಧ ಅಲೆಯನ್ನು ಎದುರಿಸುತ್ತಿದೆ ಮತ್ತು ಕಾಂಗ್ರೆಸ್‌ ಮರಳಿ ಅಧಿಕಾರ ಹಿಡಿಯುವ ಲಕ್ಷಣ ಕಾಣುತ್ತಿದ್ದು, ಕೇಸರಿ ಪಕ್ಷದ ನಾಲ್ಕನೇ ಒಂದು ಭಾಗ ಮತ್ತು ಆರ್‌ಎಸ್‌ಎಸ್‌ ಎಲ್ಲ ರಾಜ್ಯಗಳಲ್ಲಿ ಅಧಿಕಾರ ಉಳಿಸಿಕೊಳ್ಳುವತ್ತ ಹೆಚ್ಚು ಗಮನಹರಿಸಿದೆ.

ಕಾಂಗ್ರೆಸ್‌ ಪಾಲಿಗೆ ಈ ವಿಧಾನಸಭಾ ಚುನಾವಣೆಗಳು ಮರಳಿ ಅಧಿಕಾರ ಹಿಡಿಯುವುದಕ್ಕೆ ಇರುವ ಮತ್ತೊಂದು ಅವಕಾಶ. ಬಹುಶಃ ಈ ಮೂರು ರಾಜ್ಯಗಳ ಫಲಿತಾಂಶಗಳು ೨೦೧೯ರಲ್ಲಿ ಭಾರಿ ಫಲವನ್ನೇ ನೀಡಲಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More