ಎಂ ಬಿ ಪಾಟೀಲ್‌ ಮನದ ಮಾತು | ವಿರೋಧಿಸಿದವರಿಗೆ ಪಕ್ಷದಲ್ಲಿದ್ದೇ ಉತ್ತರ ಕೊಡುವೆ

ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿರುವ ಕಾಂಗ್ರೆಸ್‌ ನಾಯಕ ಎಂ ಬಿ ಪಾಟೀಲ್‌ ಅವರು ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. “ನನಗೊಂದು ಮಾನದಂಡ, ಬೇರೆಯವರಿಗೊಂದು ಮಾನದಂಡವೇ?” ಎಂದು ಕೂಡ ಅವರು ಪ್ರಶ್ನಿಸಿದ್ದಾರೆ

ಸಂದರ್ಶನದ ಮುಖ್ಯಾಂಶಗಳು

  • ನನ್ನ ವಿಷಯದಲ್ಲಿ ಆಗಿರುವ ತಪ್ಪು ನನ್ನ ಶತ್ರುವಿಗೂ ಆಗಬಾರದು. ನಾನು ಪಕ್ಷ ಬಿಡುವುದಿಲ್ಲ, ಪಕ್ಷದಲ್ಲಿದ್ದುಕೊಂಡೇ ನನ್ನನ್ನು ವಿರೋಧಿಸಿದವರಿಗೆ ಉತ್ತರ ನೀಡುತ್ತೇನೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತೇನೆ.
  • ಒಬ್ಬರಿಗೆ ಒಂದು ನ್ಯಾಯ, ಮತ್ತೊಬ್ಬರಿಗೆ ಒಂದು ನ್ಯಾಯ. ನನಗೊಂದು ಮಾನದಂಡ, ಬೇರೆಯವರಿಗೆ ಒಂದು ಮಾನದಂಡವನ್ನು ನಮ್ಮ ಕೆಲ ನಾಯಕರು ಅನುಸರಿಸಿರುವುದು ನನಗೆ ನೋವು ತಂದಿದೆ.
  • ನಂಬಿದವರೇ ಕೈಕೊಡುತ್ತಾರೆ. ಕೈಕೊಡುವವರನ್ನೇ ನಾವು ನಂಬುತ್ತೇವೆ. ನನಗೆ ಯಾರು ಕೈಕೊಟ್ಟರೆಂದು ಈಗ ಹೇಳುವುದಿಲ್ಲ. ಆದರೆ, ಇನ್ನು ಮುಂದೆ, ಹೆಂಡತಿ-ಮಕ್ಕಳನ್ನು ಒಳಗೊಂಡಂತೆ ನಾನು ಯಾರನ್ನೂ ನಂಬುವುದಿಲ್ಲ.
  • ನನ್ನ ಹಾಗೂ ರಾಹುಲ್ ಗಾಂಧಿ ಭೇಟಿ ವೇಳೆ ನಾವಿಬ್ಬರೇ ಇದ್ದೆವು. ನಾನು ರಾಹುಲ್ ಗಾಂಧಿ ಬಳಿ ಯಾವುದೇ ಬೇಡಿಕೆ ಇಟ್ಟಿಲ್ಲ. ನನ್ನ ಪಕ್ಷದ ನಿಷ್ಠೆ, ಕೊಡುಗೆ ಬಗ್ಗೆ ಅವರಿಗೆ ತಿಳಿಸಿದ್ದೇನೆ. ಈ ಬಗ್ಗೆ ಕೆಲವು ಮಾಧ್ಯಮಗಳು ತಪ್ಪುತಪ್ಪಾಗಿ ವರದಿ ಮಾಡಿವೆ.
  • ಬಸವ ಧರ್ಮ ಜಾಗತಿಕ ಧರ್ಮ ಆಗಬೇಕೆನ್ನುವುದಕ್ಕೆ ನಾನು ಬದ್ದನಾಗಿದ್ದೇನೆ. ಆದರೆ, ಲಿಂಗಾಯತ ಧರ್ಮ ವಿಚಾರವನ್ನು ಎಸ್‌ ಎಂ ಜಾಮದಾರ್‌ ಅವರಿಗೆ ಬಿಟ್ಟಿದ್ದೇನೆ. ವೀರಶೈವ-ಲಿಂಗಾಯತರು ಒಂದಾಗಿಯಾದರೂ ಪ್ರತ್ಯೇಕ ಧರ್ಮವಾಗಲಿ.
ಉಪಚುನಾವಣೆಗೂ ಮುನ್ನ ದೇವೇಗೌಡ, ಸಿದ್ದರಾಮಯ್ಯ ರವಾನಿಸಿದ ಸಂದೇಶವೇನು?
ಶಿವಮೊಗ್ಗ ಲೋಕಸಭಾ ಉಪ ಚುನಾವಣೆ | ಒಲ್ಲದ ಮದುವೆ ಕಣದಲ್ಲಿ ಬಳುವಳಿಗಳ ಮೇಲಾಟ!
ಲಿಂಗಾಯತ ಧರ್ಮ ಕುರಿತ ಸಚಿವ ಡಿಕೆಶಿ ಕ್ಷಮಾಪಣೆ ಹಿಂದಿನ ಒಳಗುಟ್ಟುಗಳೇನು?
Editor’s Pick More