ಎಲ್‌ ಕೆ ಅಡ್ವಾಣಿ ಸೀಕ್ರೆಟ್‌ ಡೈರಿ | ಏ ‘ಮನ್ ಕಿ ಬಾತ್’ ನಹೀ ಹೈ, ಏ ‘ದಿಲ್ ಕಿ ಬಾತ್’ ಹೈ

ನಾನಂದು ಮಾತನಾಡಲು ನಿಂತದೆ ಮೈಕ್ ಹಿಡಿದು ನಿಲ್ಲುತ್ತಿದ್ದ ಹುಡುಗನೊಬ್ಬ ಇಂದು ದೇಶದ ಪ್ರಧಾನಿಯಾಗಿದ್ದಾನೆ ಎಂಬ ಹೆಮ್ಮೆ ನನಗೂ ಇದೆ. ಆದ್ರೆ ನಾನು ಯಾರಿಂದ ಪ್ರಧಾನಿಯಾದೆ ಎಂಬ ಚಿಕ್ಕ ನೋಟವೂ ಕೂಡ ಅವನ ಕಣ್ಣಲ್ಲಿ ಕಾಣಿಸುವುದಿಲ್ಲ. ಅವನಲ್ಲಿ ದೇಶ ಪ್ರೇಮ ಅಗಾಧವಾಗಿದೆ ನಿಜಾ, ಆದರೆ ಪಕ್ಷದಲ್ಲಿದ್ದ ಹಿರಿಯರನ್ನ ಗೌರವಿಸೋ ಗುಣವಿಲ್ಲದವರಿಗೆ ಅದೆಷ್ಟು ದೇಶಪ್ರೇಮವಿದ್ದರೆ ಏನು? ಗಂಗೆಯನ್ನು ಶುದ್ಧ ಮಾಡುತ್ತೇನೆಂದು ಹೇಳಿಕೊಂಡರು. ಆದರೆ ನನ್ನ ಕಣ್ಣೋಳಗಿನ ನೋವಿನ ಗಂಗೆಯನ್ನ ಅರಿಯದಾದರು. 

ರಾಹುಲ್ ಗಾಂಧಿ ಅವರು ಮೊನ್ನೆ ಒಂದು ಮಾತು ಹೇಳಿದರು. ನರೇಂದ್ರ ಮೋದಿಯವರು ತಮ್ಮ ಪಕ್ಷದ ಹಿರಿಯರನ್ನ ಗೌರವಿಸುತ್ತಿಲ್ಲವೆಂದು. ರಾಹುಲ್ ಗಾಂಧಿಯವರು ನನ್ನ ಬಗ್ಗೆಯೇ ಹೇಳಿದ ಮಾತಿದು ಎಂದು ನನಗೆ ಗೊತ್ತು. ಅವರು ಹೇಳಿದ ಆ ಮಾತನ್ನ ನಾನು ಮೆಚ್ಚುತ್ತೇನೆ. ಯಾಕೆಂದ್ರೆ ನಮ್ಮ ಪಕ್ಷದಲ್ಲಿದ್ದ ಯಾರಿಗೂ ಆ ಮಾತು ಹೇಳುವ ಧೈರ್ಯವಿಲ್ಲ. ಆ ಧೈರ್ಯವನ್ನ ರಾಹುಲ್ ಮಾಡಿದ್ದಕ್ಕೆ ಧನ್ಯವಾದಗಳು. ರಾಹುಲ್ ಗಾಂಧಿಯವರ ಆ ಮಾತು ಕೇಳಿ ನನಗೆ ಹಳೆಯದೆಲ್ಲ ನೆನಪಾಗುತ್ತಿದೆ.

ಹಳೆಯದನ್ನೆಲ್ಲ ನೆನಪು ಮಾಡಿಕೊಳ್ಳುತ್ತಾ ಕೂತಿರುವಾಗ ನನಗೆ ಸಢನ್‌ ಆಗಿ ನನೆಪಾಗೋದು ಮಾನ್ಯ ಯಡಿಯೂರಪ್ಪನವರು. ಯಾಕೆಂದ್ರೆ ನನ್ನಂತೆ ಕರ್ನಾಟಕದಲ್ಲಿ ಸೈಡ್‌ಲೈಲ್‌ ಲಿಸ್ಟ್‌ನಲ್ಲಿರೋ ವ್ಯಕ್ತಿ ಅವರು. ಯಡಿಯೂರಪ್ಪನವರು ಅಂದ ತಕ್ಷಣ ಅವರು ಹೇಳಿದ ಒಂದು ಮಾತು ನೆನಪಾಯ್ತು. ಅವರು ಹೇಳಿದ್ದು, `ಪುಟ್ಟಣ್ಣ ಕಣಗಾಲ್’ ಎಂಬ ಒಬ್ಬ ಫೇಮಸ್‌ ಡೈರೆಕ್ಟರ್ ಬಗ್ಗೆ. ಅವರು ನಿರ್ಮಿಸಿದ `ಮಾನಸ ಸರೋವರ’ ಎಂಬ ಸಿನಿಮಾದಲ್ಲಿ ಒಂದು ಹಾಡಿದೆಯಂತೆ. `ನೀನೇ ಸಾಕಿದ ಗಿಣಿ, ನಿನ್ನ ಮುದ್ದಿನ ಗಿಣಿ, ಹದ್ದಾಗಿ ಕುಕ್ಕಿತಲ್ಲೂ ನಿನ್ನ ಹದ್ದಾಗಿ ಕುಕ್ಕಿತಲೂ’ ಅಂತ. ಈ ಹಾಡನ್ನ ಹೇಳಿದ ಯಡಿಯೂರಪ್ಪನವರು ಇದರ ಅರ್ಥವನ್ನೂ ವಿವರಿಸಿದ್ದರು. ನನ್ನ ಸದ್ಯದ ಪರಿಸ್ಥಿತಿಗೆ ಈ ಹಾಡು ತುಂಬಾನೇ ಹೋಲಿಕೆಯಾಗುತ್ತೆ. ಈ ಹಾಡು ನನಗಾಗಿಯೇ ರಚಿಸಿದಂತೆ ಅನ್ನಿಸುತ್ತಿದೆ.

ಏ ಕ್ಯಾ ಹೇ ಮೋದಿ ಮೋದಿ ಮೋದಿ, ಎ ನಾಮ್ ಸುನ್ಕರ್ ಥಕ್‌ ಗಯಾ ಮೈ. ೨೦೦೨ ರಲ್ಲಿ ಮೋದಿಯವರ ವಿರುದ್ಧ ಎಲ್ಲರೂ ತಿರುಗು ಬಿದ್ದಿದ್ದರು. ನನ್ನ ಗೆಳೆಯ ವಾಜಪೇಯಿ ಅವರು ಕೂಡ. ಆದರೆ ಆ ಸಮಯದಲ್ಲಿ ಮೋದಿ ಬೆಂಬಲಕ್ಕೆ ನಿಂತ ಏಕೈಕ ವ್ಯಕ್ತಿ ನಾನೊಬ್ಬನೆ. ದೇಶವೇ ಗಮನಿಸಬೇಕಾದ ಘಟನೆ ಅದಾಗಿದ್ದರಿಂದ ಒಂದು ಗಟ್ಟಿ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಅದಕ್ಕಾಗಿ ಮೋದಿ ರಾಜಿನಾಮೆ ಕೊಡಿಸಿ ಬಿಡೋಣ ಎಂಬ ತೀರ್ಮಾನಕ್ಕೆ ಎಲ್ಲರೂ ಬಂದಿದ್ದರು. ಆದ್ರೆ ಆಗ ಮೋದಿಯವರ ಬೆಂಬಲಕ್ಕೆ ನಿಂತಿದ್ದು ನಾನು. ಅಂದು ಗೋವಾಗೆ ಹೋಗುತ್ತಿರುವಾಗ ಪ್ಲೈಟ್‌ನಲ್ಲಿ ವಾಜಪೇಯಿ ಕೇಳಿದ ಆ ಮಾತಿಗೆ ನಾನು ಹೂ ಅಂದಿದ್ದರೆ ಇಂದು ಈ ಪರಸ್ಥಿತಿ ನನಗೆ ಬರ್ತಿರಲಿಲ್ಲ. `ಏ ಬಾತ್ ಸಹಿ ಹೈ, ಏ ಬಾತ್ ಸಚ್ಚಿ ಹೈ. ಏ `ಮನ್ ಕಿ ಬಾತ್’ ನಹೀ ಹೈ, ಎ `ದಿಲ್ ಕಿ ಬಾತ್’ ಹೈ

ಇಂದು ನನ್ನ ಪಕ್ಷ ಅಧಿಕಾರದಲ್ಲಿದೆ ನಿಜ. ಹಾಗಂತ ಅದಕ್ಕೆಲ್ಲ ಮೋದಿ ಅವರೇ ಕಾರಣವಾ? ೨೦೧೪ ರಲ್ಲಿ ಜನ ಬಿಜೆಪಿಯನ್ನ ಬೆಂಬಲಿಸಿದ್ದಾರೆ ನಿಜಾ, ಅದಕ್ಕೆಲ್ಲ ಮೋದಿ ಅವರೇ ಕಾರಣವಾ? ಹಗಲು ರಾತ್ರಿಯನ್ನದೆ ಎಷ್ಟೋ ವರ್ಷಗಳ ಕಾಲ ಕಷ್ಟ ಪಟ್ಟು ದೇವಸ್ಥಾನ ಗುಡಿ ಕೆತ್ತಿದವರು ನಾವು. ಆ ಸಂದರ್ಭದಲ್ಲಿ ಅದೆಷ್ಟು ಉಳಿ ಏಟುಗಳನ್ನ ತಿಂದ್ದೇವೆ? ಅದೆಷ್ಟು ಕಲ್ಲು ಚೂರುಗಳು ನಮ್ಮ ಮೈ ಗಾಯ ಮಾಡಿವೆ? ಗುಡಿ ರೆಡಿಯಾದ್ಮೇಲೆ ಗೋಡೆಗೆ ಬಣ್ಣ ಹಚ್ಚುವವನಂತೆ ಬಂದು ಕಳಸವನ್ನೇರಿ ಕೂತ. ನಿನ್ನ ಆ ಕಳಸದ ಸಿಂಹಾಸನಕ್ಕೆ ಕಾರಣ ಯಾರೆಂಬುವುದನ್ನು ಮರೆತೆಯಾ? ಒಟ್ಟಿನಲ್ಲಿ ಅಂದು ನಾನೇ ಮಾಡಿದ ತಪ್ಪಿಗಾಗಿ ಇಂದು ನನಗೆನೇ ಕಪ್ಪಾ ಕೊಡುತ್ತಿವೆ. ಅದು ಯಾವ ಕಪ್ಪ? ಬರಿಗೈ ಕಪ್ಪಾ, ತಟ್ಟೆ ಮುಂದಿದ್ದರೂ ತುತ್ತು ತಿನ್ನಲಾಗದ ಕಪ್ಪ.

ಕಾಂಗ್ರೆಸ್ ಅಂತ ಕಾಂಗ್ರೆಸ್‌ ಕೂಡ ಪ್ರಣಬ್ ಮುಖರ್ಜಿ ಅವರಿಗೆ ಕೊನೆಗೆ ಒಂದ ಉನ್ನತ ಸ್ಥಾನ ಮಾನ ನೀಡಿ ಗೌರವ ನೀಡಿತು. ಆದ್ರೆ ನಮ್ಮ ಪಕ್ಷ ನನಗೇನು ಮಾಡಿತು? ಅಂದು ಮಾಡಿದ ಯಾತ್ರೆಗಳೆಲ್ಲ ನನಗೀಗ ತೀರ್ಥಯಾತ್ರೆಗಳಾಗಿ ಬಿಟ್ಟವಾ? ೨೦೧೪ರ ಲೋಕಸಭೆ ಚುನವಣಾ ಸಂದರ್ಭದಲ್ಲಿ ನಾನೇ ಪ್ರಧಾನಿ ಅಭ್ಯರ್ಥಿಯಾಗುತ್ತೇನೆಂದು ಪಟ್ಟು ಹಿಡಿಯಬೇಕಿತ್ತ ಎಂದು ಈಗನ್ನಿಸುತ್ತಿದೆ. ಆಗ ಅದೂ ಇಲ್ಲ ಈಗ ಪ್ರಣಬ್‌ ನಂತ್ರ ರಾಷ್ಟ್ರಪತಿ ನಾನೇ ಎಂದು ದೇಶವೇ ಕೂಗಿಕೊಳ್ಳುತ್ತಿತ್ತು. ಆದ್ರೆ ಅದು ಆಗದಾಯಿತು. ಇದೆಲ್ಲವೂ ಯಾರಿಂದ? ನಾನೇ ಸಾಕಿ ಬೆಳೆಸಿದ ಗಿಣಿಯಿಂದ ಅಲ್ಲವೆ!

ನಾನಂದು ಮಾತನಾಡಲು ನಿಂತದೆ ಮೈಕ್ ಹಿಡಿದು ನಿಲ್ಲುತ್ತಿದ್ದ ಹುಡುಗನೊಬ್ಬ ಇಂದು ದೇಶದ ಪ್ರಧಾನಿಯಾಗಿದ್ದಾನೆ ಎಂಬ ಹೆಮ್ಮೆ ನನಗೂ ಇದೆ. ಆದ್ರೆ ನಾನು ಯಾರಿಂದ ಪ್ರಧಾನಿಯಾದೆ ಎಂಬ ಚಿಕ್ಕ ನೋಟವೂ ಕೂಡ ಅವನ ಕಣ್ಣಲ್ಲಿ ಕಾಣಿಸುವುದಿಲ್ಲ. ಅವನಲ್ಲಿ ದೇಶ ಪ್ರೇಮ ಅಗಾಧವಾಗಿದೆ ನಿಜಾ, ಆದರೆ ಪಕ್ಷದಲ್ಲಿದ್ದ ಹಿರಿಯರನ್ನ ಗೌರವಿಸೋ ಗುಣವಿಲ್ಲದವರಿಗೆ ಅದೆಷ್ಟು ದೇಶಪ್ರೇಮವಿದ್ದರೆ ಏನು? ಗಂಗೆಯನ್ನು ಶುದ್ಧ ಮಾಡುತ್ತೇನೆಂದು ಹೇಳಿಕೊಂಡರು. ಆದರೆ ನನ್ನ ಕಣ್ಣೋಳಗಿನ ನೋವಿನ ಗಂಗೆಯನ್ನ ಅರಿಯದಾದರು. ಆ ಕಡೆ ಗಂಗೆ ಶುದ್ಧಿಯೂ ಆಗಲಿಲ್ಲ, ನನ್ ಕಣ್ಣೀರ ಗಂಗೆಗೂ ಬೆಲೆ ಸಿಗಲಿಲ್ಲ. ಮನ್ ಕಿ ಬಾತ್ ಎಂದು ಗುನುಗುವವರಿಗೆ ನನ್ನ ದಿಲ್ ಕಿ ಬಾತ್ ಕೇಳಿಸದಾಯಿತು. ಇದು ನಾನೇ ಸಾಕಿದ ಗಿಣಿ, ನನನ್ನೇ ಕುಕ್ಕುತ್ತಿದೆ.

ಇದನ್ನೂ ಓದಿ : ದೇವೇಗೌಡ ಸೀಕ್ರೆಟ್ ಡೈರಿ| ಯಾರ್ರೀ ಅಮಿತ್ ಶಾ? ಅವನಲ್ಲ, ನಿಜವಾದ `ಚಾಣಕ್ಯ’ ನಾನು

ಹೇಳಿಕೊಳ್ಳಲು ತುಂಬಾ ಇದೆ. ಆದ್ರೆ ಕೇಳುವ ಕಿವಿಗಳು ಬೇಕಲ್ಲ. ಕೇಳ ಬಯಸುವ ಕಿವಿಗಳು ಈಗ ಕೆಲಸ ಮಾಡುತ್ತಿಲ್ಲ. ನನ್ನ ಕಣ್ಣೀರಿಗೆ ಕಣ್ಣೀರಾಗುವ ಕಣ್ಣುಗಳು ಈಗ ಮಂಜಾಗಿವೆ. ಕುಗ್ಗಿದ್ದಾಗ ನನ್ ಬೆನ್ ತಟ್ಟಿ ಮತ್ತೆ ಪುಟಿದೇಳುವಂತೆ ಮಾಡುವ ಆ ಶಕ್ತಿ ಇಂದು ನಿಶಕ್ತವಾಗಿ ಆಸ್ಪತ್ರೆ ಬೆಡ್ ಮೇಲೆ ಮಲಗಿದೆ. ನನ್ನ ಗುರುತೂ ಹಿಡಿಯದಂತಹ ಪರಸ್ಥಿತಿ. ಇರಲಿ, ಇದೆಲ್ಲವನ್ನೂ ಸಹಿಸಿಕೊಂಡೇ ಇದ್ದೇನೆ. ಈಗ ನಾನು ಏನೇ ಹೇಳಿಕೊಂಡರೂ ಪ್ರಯೋಜನವಿಲ್ಲ. ಗೆಳೆಯ ಆಸ್ಪತ್ರೆಯಲ್ಲಿದ್ದಾನೆ. ಹೋಗಿ ಅವನನ್ನಾದರೂ ನೋಡಿಕೊಂಡು ಬರುತ್ತೇನೆ.

ಉಪಚುನಾವಣೆಗೂ ಮುನ್ನ ದೇವೇಗೌಡ, ಸಿದ್ದರಾಮಯ್ಯ ರವಾನಿಸಿದ ಸಂದೇಶವೇನು?
ಶಿವಮೊಗ್ಗ ಲೋಕಸಭಾ ಉಪ ಚುನಾವಣೆ | ಒಲ್ಲದ ಮದುವೆ ಕಣದಲ್ಲಿ ಬಳುವಳಿಗಳ ಮೇಲಾಟ!
ಲಿಂಗಾಯತ ಧರ್ಮ ಕುರಿತ ಸಚಿವ ಡಿಕೆಶಿ ಕ್ಷಮಾಪಣೆ ಹಿಂದಿನ ಒಳಗುಟ್ಟುಗಳೇನು?
Editor’s Pick More