ರಾಜಸ್ಥಾನ ಜನರು ಬಿಜೆಪಿ ಶಾಸಕನನ್ನು ಓಡಿಸಿ ಹಲ್ಲೆ ಮಾಡಿದ್ದು ನಿಜವೇ?

ಎಸ್‌ಸಿ ಎಸ್ಟಿ ದೌರ್ಜನ್ಯ ಕಾಯಿದೆಗೆ ಸಂಬಂಧಿಸಿದಂತೆ ಕಳೆದ ಎಪ್ರಿಲ್‌ನಲ್ಲಿ ಭಾರತ್ ಬಂದ್‌ಗೆ ಕರೆ ನೀಡಲಾಗಿತ್ತು. ಆ ವೇಳೆ ಬಿಜೆಪಿ ನಾಯಕನ ಮೇಲೆ ಹಲ್ಲೆ ಮಾಡಲಾಗಿದೆ ಎನ್ನುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಅಸಲಿ ಕತೆ ಬೇರೆಯೇ ಇದೆ

ಪ್ರಜಾಪ್ರಭುತ್ವದಲ್ಲಿ ನಾಯಕರುಗಳ ಮೇಲೆ ಮತದಾರರು ಸಿಟ್ಟೇಳುವುದು ಸಾಮಾನ್ಯ. ಬಿಜೆಪಿ ನಾಯಕನ ಮೇಲೆ ಹಲ್ಲೆ ಮಾಡಲಾಗಿದೆ ಎನ್ನುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿರುವುದು ರಾಜಸ್ಥಾನದ ಬಿಜೆಪಿ ನಾಯಕ ಎಂದು ಹೇಳಲಾಗುತ್ತಿದೆ.

ನೂರಾರು ಜನರಿದ್ದ ಗುಂಪೊಂದು ಉದ್ರಿಕ್ತರಾಗಿ ಓಡಿಸಿಕೊಂಡು ಬಿಜೆಪಿ ನಾಯಕನ ಮೇಲೆ ದಾಳಿ ಮಾಡಿದ್ದು ಎಂದು ಹೇಳಲಾದ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ೭೦,೦೦೦ ಮಂದಿ ನೋಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ಹರಿಬಿಟ್ಟ ವ್ಯಕ್ತಿ, "ರಾಜಸ್ಥಾನದ ದೌಸಾದ ಬಿಜೆಪಿ ನಾಯಕ ವಿಧಾಯಕ್ ಶಂಕರ್ ಲಾಲ್ ಶರ್ಮಾ ಅವರನ್ನು ಜನರು ಹೊಡೆಯುತ್ತಿದ್ದು ಅಚ್ಚೇ ದಿನ್ ಆರಂಭವಾದಂತಿದೆ,” ಎಂದು ಬರೆದುಕೊಂಡಿದ್ದಾರೆ. ಆ ವಿಡಿಯೋ ತುಣುಕು ೨,೦೦೦ ಲೈಕ್ ಹಾಗೂ ೨,೩೦೦ ಶೇರ್ ಆಗಿದೆ. ಆದರೆ, ಅಲ್ಲಿ ಜನರು ಹಲ್ಲೆ ಮಾಡಿದ್ದು ಯಾರ ಮೇಲೆ ಎಂಬ ಅನುಮಾನದ ಮೇಲೆ ‘ಇಂಡಿಯಾ ಟುಡೆ’ ಸಂತ್ಯಾಂಶ ಬಹಿರಂಗಪಡಿಸಿದ್ದು, ವಿಡಿಯೋದಲ್ಲಿ ಮರೆಮಾಚಿದ ಅಂಶಗಳು ಮೇಲೆ ಬಂದಿವೆ.

ವಿಡಿಯೋದಲ್ಲಿರುವುದು ಬಿಳಿ ಕುರ್ತಾ ಹಾಗೂ ಪೈಜಾಮ್ ಧರಿಸಿರುವ ದೌಸಾದ ಹಿರಿಯ ಬಿಜೆಪಿಯ ಶಾಸಕರಲ್ಲ, ಗಂಗಾಪುರದ ಕಾಂಗ್ರೆಸ್‌ನ ಮಾಜಿ ಶಾಸಕ ಎಂಬುದು ತಿಳಿದುಬಂದಿದೆ. ಈ ಕುರಿತು ಬಿಜೆಪಿ ಶಾಸಕ ಮಾತಾಡಿದ್ದು, “ನನ್ನ ಹೆಸರಿನಲ್ಲಿ ಕಳೆದ ಎಪ್ರಿಲ್ ತಿಂಗಳಿನಿಂದ ವಿಡಿಯೋ ವೈರಲ್ ಆಗುತ್ತಿದೆ, ಆದರೆ ಅದರಲ್ಲಿರುವುದು ನಾನಲ್ಲ. ಅಲ್ಲದೆ, ಈ ಘಟನೆಯ ವಿರುದ್ಧ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೆವೆ. ನಮ್ಮ ಕಾರ್ಯಕರ್ತರು ಹೇಳುವಂತೆ ಆ ವಿಡಿಯೋ ಮಧೋಪುರ್ ಜಿಲ್ಲೆಯ ಗಂಗಾಪುರ ನಗರದ್ದು. ಆದರೆ ಅದರಲ್ಲಿರುವ ವ್ಯಕ್ತಿಯ ಬಗ್ಗೆ ಖಚಿತತೆ ಇಲ್ಲ,” ಎಂದಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಮುಸ್ಲಿಮರ ಪಕ್ಷ ಎಂಬ ರಾಹುಲ್ ಹೇಳಿಕೆ ಹಿಂದಿನ ಸತ್ಯಾಸತ್ಯತೆ ಏನು?

ಜನರು ತಮ್ಮ ಪ್ರತಿನಿಧಿಯ ಮೇಲೆ ಸಿಟ್ಟೇಳಲು ಬೇರೆ ಕಾರಣಗಳಿದ್ದು, ಅದರಲ್ಲಿರುವುದು ಗಂಗಾಪುರದ ಮಾಜಿ ಕಾಂಗ್ರೆಸ್ ನಾಯಕ ಎನ್ನಲಾಗಿದೆ. ೧೯೮೯ರ ಎಸ್‌ಸಿ ಎಸ್ಟಿ‌ ದೌರ್ಜನ್ಯ ಕಾಯಿದೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿಲುವಿಗೆ ಅಸಮಧಾನಗೊಂದು ಜನರು ಪ್ರತಿಭಟಿಸುತ್ತಿದ್ದ ವೇಳೆ, ಜನರು ಓಡಿಸಿಕೊಂಡು ಹೋಗುತ್ತಿರುವುದು ಗಂಗಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮ್‌ಕೇಶ್ ಮೀನಾ ಎಂದು ಗುರುತಿಸಲಾಗಿದೆ.

೨೦೦೯ರಲ್ಲಿ ಬಿಎಸ್‌ಪಿ ಪಕ್ಷದಿಂದ ಸ್ಪರ್ಧಿಸಿದ್ದ ಮೀನಾ, ಅಂದಿನ ಚುನಾವಣೆಯಲ್ಲಿ ಗೆದ್ದಿದ್ದರು. ಆದರೆ ಕೊನೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದರು. ಅಶೋಕ್ ಗೆಹ್ಲೋಟ್ ಸರ್ಕಾರದಲ್ಲಿ ಸಂಸತ್ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಎಪ್ರಿಲ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಜನರು ಹಲ್ಲೆ ಮಾಡಿದ ವಿಡಿಯೋ ಬಗ್ಗೆ ಮೀನಾ ಅವರು ಯಾವುದೇ ಹೇಳಿಕೆಯನ್ನು ನೀಡಿಲ್ಲ. ಎಸ್‌ಸಿ ಎಸ್ಟಿ ದೌರ್ಜನ್ಯ ಕಾಯಿದೆಗೆ ಸಂಬಂಧಿಸಿದಂತೆ ಕಳೆದ ಎಪ್ರಿಲ್ ನಲ್ಲಿ ಭಾರತ್ ಬಂದ್‌ಗೆ ಕರೆ ನೀಡಲಾಗಿತ್ತು ಆ ಸಂದರ್ಭದಲ್ಲಿ ನಡೆದ ಘಟನೆ ಎಂದು ಹೇಳಲಾಗಿದೆ. ಆಗ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ, ಗಂಗಾಪುರ್ ನಗರದಲ್ಲಿ ಕರ್ಫ್ಯೂ ಜಾರಿಯಾಗಿ, ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More