ರಾಜ್ಯಸಭಾ ಉಪಸಭಾಪತಿಯಾಗಿ ಹರಿವಂಶ್ ನಾರಾಯಣ ಸಿಂಗ್ ಆಯ್ಕೆ

೨೦೧೯ರ ಲೋಕಸಭಾ ಚುನಾವಣೆ ಮುನ್ನ ವಿರೋಧ ಪಕ್ಷಗಳು ಒಗ್ಗಟ್ಟು ಸಾಧಿಸಬಲ್ಲವೇ ಎನ್ನುವುದಕ್ಕೆ ಮೊದಲ ಪರೀಕ್ಷೆಯಾಗಿತ್ತು ಈ ರಾಜ್ಯಸಭಾ ಚುನಾವಣೆ. ಈ ಪರೀಕ್ಷೆಯಲ್ಲಿ ವಿಪಕ್ಷಗಳು ವಿಫಲವಾದಂತಾಗಿವೆ. ರಾಜ್ಯಸಭಾ ಉಪಸಭಾಪತಿಯಾಗಿ ಎನ್‌ಡಿಎ ಅಭ್ಯರ್ಥಿ ಆಯ್ಕೆಯಾಗಿದ್ದಾರೆ

ರಾಜ್ಯಸಭಾ ಉಪಸಭಾಪತಿಯಾಗಿ ಎನ್‌ಡಿಎ ಅಭ್ಯರ್ಥಿ ಹಾಗೂ ಜೆಡಿಯು ಸಂಸದರಾಗಿರುವ ಹರಿವಂಶ್ ನಾರಾಯಣ ಸಿಂಗ್ ಅವರು ಆಯ್ಕೆಯಾಗಿದ್ದಾರೆ. ಸಿಂಗ್ ಅವರಿಗೆ ೨೪೫ ಮತಗಳ ಪೈಕಿ ೧೨೫ ಮತಗಳು, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವಿಪಕ್ಷಗಳ ಅಭ್ಯರ್ಥಿಯಾದ ಬಿ ಕೆ ಹರಿಪ್ರಸಾದ್ ಅವರಿಗೆ ೧೦೫ ಮತಗಳು ದೊರೆತಿವೆ.

ರಾಜ್ಯಸಭೆಯ ೨೪೫ ಸದಸ್ಯ ಬಲದಲ್ಲಿ ೨೩೦ ಮತಗಳು ಚಲಾವಣೆಯಾಗಿವೆ. ೨೦೧೯ರ ಲೋಕಸಭಾ ಚುನಾವಣೆ ಮುನ್ನ ವಿರೋಧ ಪಕ್ಷಗಳು ಒಗ್ಗಟ್ಟು ಸಾಧಿಸಿಬಲ್ಲವೇ ಎನ್ನುವುದಕ್ಕೆ ಮೊದಲ ಪರೀಕ್ಷೆಯಾಗಿತ್ತು ಈ ಚುನಾವಣೆ. ಈ ಪರೀಕ್ಷೆಯಲ್ಲಿ ವಿರೋಧಪಕ್ಷಗಳು ವಿಫಲವಾದಂತಾಗಿವೆ. ಗೆಲ್ಲಲು ಬೇಕಿದ್ದದು ೧೧೯ ಮತ. ಇದನ್ನು ಸಾಧಿಸಲು ಮೋದಿ ಮತ್ತು ಅಮಿತ್ ಶಾ ಸಕ್ರಿಯವಾಗಿ ವಿರೋಧ ಪಕ್ಷಗಳ ಮತ ಗಳಿಕೆಗೆ ಪ್ರಯತ್ನಿಸಿದರು.

ಇದನ್ನೂ ಓದಿ : ರಾಜ್ಯಸಭಾ ಚುನಾವಣೆ: ಮರು ಮತದಾನ ವಿಷಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಜಟಾಪಟಿ

ಖುದ್ದಾಗಿ ಮೋದಿಯವರೇ ನವೀನ್ ಪಟ್ನಾಯಕ್ ಅವರ ಜೊತೆ ಫೋನಿನಲ್ಲಿ ಮಾತಾಡಿದರು ಎನ್ನಲಾಗಿದೆ. ಅಕಾಲಿದಳ ಮತ್ತು ಶಿವಸೇನೆ ಸದಸ್ಯರು ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ಸೂಚಿಸಿದರು. ವಿರೋಧ ಪಕ್ಷ ಕಾಂಗ್ರೆಸ್‌ಗೆ ೧೧೦ ಮತಗಳು ಬೀಳಬೇಕಿತ್ತು. ಡಿಎಂಕೆಯ ಇಬ್ಬರು ತೃಣಮೂಲ ಕಾಂಗ್ರೆಸ್ ಮತ್ತು ವೈಎಸ್‌ ಆರ್ ಕಾಂಗ್ರೆಸ್‌ನ ಇಬ್ಬರು ಗೈರು ಹಾಜರಾದರು. ಆಪ್‌ ಹಾಗೂ ಪಿಡಿಪಿ ಸದಸ್ಯರು ಗೈರಾಗಿದ್ದರು. ಪರಿಣಾಮ, ವಿರೋಧ ಪಕ್ಷದ ಅಭ್ಯರ್ಥಿ ಸೋಲಬೇಕಾಯಿತು. ಹೀಗಾಗಿ, ರಾಜ್ಯಸಭಾ ಉಪಸಭಾಪತಿ ಸ್ಥಾನ ವಿರೋಧ ಪಕ್ಷದಿಂದ ಆಡಳಿತ ಪಕ್ಷದ ಬೆಂಬಲಿಗರಿಗೆ ಹೋದಂತಾಗಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More