ಟೋಲ್‌ ವಸೂಲಿ ವಿರೋಧಿಸಿ ಶಾಸಕ ಖೇಣಿ ನೇತೃತ್ವದಲ್ಲಿ ರೈತರ ಪ್ರತಿಭಟನೆ

ಬೀದರ್‌ನ ರಾಷ್ಟ್ರೀಯ ಹೆದ್ದಾರಿ ೯ರ ಮಂಗಲಗಿ ಬಳಿ ಇತ್ತೀಚಿಗೆ ಆರಂಭವಾಗಿರುವ ಟೋಲ್‌ ನಾಕದಲ್ಲಿ ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅಲ್ಲಿನ ರೈತರು, ಸಾರ್ವಜನಿಕರು ಶಾಸಕ ಅಶೋಕ್‌ ಖೇಣಿ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು

ಬೀದರ್‌ನ ರಾಷ್ಟ್ರೀಯ ಹೆದ್ದಾರಿ ೯ರ ಮಂಗಲಗಿ ಬಳಿ ಇತ್ತೀಚಿಗೆ ಆರಂಭವಾಗಿರುವ ಟೋಲ್‌ ನಾಕದಲ್ಲಿ ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುವುದನ್ನು ವಿರೋಧಿಸಿ ಅಲ್ಲಿನ ರೈತರು, ಸಾರ್ವಜನಿಕರು ಶಾಸಕ ಅಶೋಕ್‌ ಖೇಣಿ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು

ಟೋಲ್ ನಾಕಾ ೭ರ ಬಳಿ ಜಮಾಯಿಸಿದ ಸಾವಿರಾರು ಜನರು ಅವೈಜ್ಞಾನಿಕ ಟೋಲ್‌ ಸಂಗ್ರಹದ ವಿರುದ್ಧ ಹರಿಹಾಯ್ದರು. ಇನ್ನು ರಸ್ತೆಯೇ ನಿರ್ಮಾಣವಾಗಿಲ್ಲ, ಆಗಲೇ ಹಣ ವಸೂಲಿ ಮಾಡುತ್ತಿದ್ದಾರೆ. ರೈತರು ಕಬ್ಬು ಸಾಗಣೆ ಮಾಡುವ ಲಾರಿ, ಟ್ರ್ಯಾಕ್ಟರ್‌ಗೆ ಸುಂಕ ವಸೂಲಿ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಹಠಾತ್‌ ನಿರ್ಮಾಣವಾಗಿರುವ ಟೋಲ್‌ನಿಂದ ಸ್ಥಳೀಯರಿಗೆ ತೊಂದರೆಯಾಗಿದೆ. ಇದು ಕಬ್ಬು ಕಟಾವು ಸಮಯ. ಕಬ್ಬು ಸಾಗಣೆ ವಾಹನಗಳಿಗೂ ಟೋಲ್‌ ಚಾರ್ಜ್‌ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಸಮಸ್ಯೆಯಾಗಿದೆ. ಈ ಎಲ್ಲ ಸಮಸ್ಯೆಗಳು ಬಗೆಹರಿಯದಿದ್ದರೆ ಉಗ್ರ ಹೋರಾಟ ಮಾಡಲಾಗುವುದು” ಎಂದು ಶಾಸಕ ಅಶೋಖ್‌ ಖೇಣಿ ಎಚ್ಚರಿಕೆ ನೀಡಿದರು.

ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ, ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ
ನಿವೃತ್ತಿ ವೇತನಕ್ಕೆ ಆಗ್ರಹಿಸಿ ಸೀಮೆಎಣ್ಣೆ ವಿತರಕರಿಂದ ಬೀದರ್‌ನಲ್ಲಿ ಹೋರಾಟ 
ಬಾಲಕಿ ಮೇಲಿನ ಅತ್ಯಾಚಾರ, ಕೊಲೆಗೆ ಖಂಡನೆ; ಬೀದರ್‌ನಲ್ಲಿ ಪ್ರತಿಭಟನೆ
Editor’s Pick More