ಗೋ ಬ್ಯಾಕ್ ಮೋದಿ; ಟ್ವಿಟ್ಟರ್‌ನಲ್ಲಿ ಪ್ರಧಾನಿ ವಿರುದ್ಧ ತಮಿಳರ ಆಕ್ರೋಶ

ಡಿಫೆನ್ಸ್ ಎಕ್ಸ್‌ಪೋಗಾಗಿ ಉದ್ಘಾಟನೆಗಾಗಿ ಚೆನ್ನೈಗೆ ಆಗಮಿಸಿದ ಪ್ರಧಾನಿಗೆ ಸಿಕ್ಕಿದ್ದು ಕಪ್ಪು ಬಾವುಟದ ಸ್ವಾಗತ. ಟ್ವಿಟ್ಟರ್‌ನಲ್ಲೂ #GoBackModi ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದ್ದು, ನಿರ್ವಹಣಾ ಮಂಡಳಿ ರಚಿಸಲು ಸಾಧ್ಯವಿಲ್ಲ ಎಂದಾದರೆ ತಮಿಳುನಾಡಿಗೆ ಬರಲೇಬೇಡಿ ಎಂಬಿತ್ಯಾದಿ ಆಕ್ರೋಶ ವ್ಯಕ್ತವಾಗಿದೆ

‘ಡಿಫೆನ್ಸ್ ಎಕ್ಸ್ ಪೋ 2018’ರ ಉದ್ಘಾಟನೆಗಾಗಿ ಚೆನ್ನೈಗೆ ಆಗಮಿಸಿದ ಪ್ರಧಾನಿಗೆ ಸಿಕ್ಕಿದ್ದು ಕಪ್ಪು ಬಾವುಟದ ಸ್ವಾಗತ ಹಾಗೂ ಗೋ ಬ್ಯಾಕ್ ಮೋದಿ ಎಂಬ ಘೋಷಣೆಗಳು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಮಿಳುನಾಡಿಗೆ ಆಗಮಿಸಿದ್ದ ವೇಳೆ ಕಾವೇರಿ ನಿರ್ವಣಾ ಮಂಡಳಿ ರಚಿಸುವಂತೆ ತಮಿಳುನಾಡಿನ ಅನೇಕ ಸಂಘಟನೆಗಳು ಮೋದಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಭಾರಿ ವಿರೋಧ ವ್ಯಕ್ತಪಡಿಸಿವೆ. ಅಷ್ಟೇ ಅಲ್ಲದೆ, ಕಾವೇರಿ ನಿರ್ವಹಣಾ ಮಂಡಳಿ ವಿಚಾರದಲ್ಲಿ ಮೌನ ವಹಿಸಿರುವ ಪ್ರಧಾನಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ಭುಗಿಲೆದ್ದಿದ್ದು, 'ಗೋ ಬ್ಯಾಕ್ ಮೋದಿ' ಎಂಬ ಧಿಕ್ಕಾರ ಪ್ರತಿಧ್ವನಿಸುತ್ತಿದೆ.

ಡಿಎಂಕೆ ನಾಯಕರಾದ ಕರುಣಾನಿಧಿ, ಕನ್ನಿಮೋಳಿ ಸೇರಿದಂತೆ ತಮಿಳುನಾಡಿನ ರಾಜಕೀಯ ನಾಯಕರು ಕೂಡ ಕಪ್ಪು ಬಟ್ಟೆ ತೊಟ್ಟು ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾವೇರಿ ನಿರ್ವಹಣಾ ಮಂಡಳಿ ರಚಿಸುವಲ್ಲಿ ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದ ಆಕ್ರೋಶ ವ್ಯಕ್ತಪಡಿಸಿರುವ ತಮಿಳುನಾಡಿನ ಜನ, ಪ್ರಧಾನಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಟ್ವಿಟ್ಟರ್‌ನಲ್ಲೂ #GoBackModi ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದ್ದು, “ಕಾವೇರಿ ಜಲ ನಿರ್ವಹಣಾ ಮಂಡಳಿ ರಚಿಸಲು ಸಾಧ್ಯವಿಲ್ಲ ಎಂಬುದು ಖಚಿತವಾದರೆ ತಮಿಳುನಾಡಿಗೆ ಬರಬೇಡಿ, ನಮ್ಮೊಂದಿಗೆ ರಾಜಕೀಯ ಬೇಡ, ನಮ್ಮ ತಾಳ್ಮೆ ಪರೀಕ್ಷಿಸಬೇಡಿ, ನೀವು ತಮಿಳುನಾಡಿಗೆ ಏನನ್ನೂ ಮಾಡಿಲ್ಲ. ನೀವು ಪ್ರಧಾನಿ ಹುದ್ದೆಗೆ ಲಾಯಕ್ಕಿಲ್ಲ. ಮತ್ತೆ ಚಹಾ ಮಾರಲು ಆರಂಭಿಸಿ,” ಎಂಬಿತ್ಯಾದಿ ಆಕ್ರೋಶಗಳು ವ್ಯಕ್ತವಾಗಿದೆ.

ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ, ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ
ನಿವೃತ್ತಿ ವೇತನಕ್ಕೆ ಆಗ್ರಹಿಸಿ ಸೀಮೆಎಣ್ಣೆ ವಿತರಕರಿಂದ ಬೀದರ್‌ನಲ್ಲಿ ಹೋರಾಟ 
ಬಾಲಕಿ ಮೇಲಿನ ಅತ್ಯಾಚಾರ, ಕೊಲೆಗೆ ಖಂಡನೆ; ಬೀದರ್‌ನಲ್ಲಿ ಪ್ರತಿಭಟನೆ
Editor’s Pick More