ಬಿಜೆಪಿ ಕುರಿತು ಹೇಳಿಕೆ; ಪ್ರಕಾಶ್ ರೈ ಕಾರಿಗೆ ಬಿಜೆಪಿ ಕಾರ್ಯಕರ್ತರ ಮುತ್ತಿಗೆ

ಬಿಜೆಪಿಯನ್ನು ಟೀಕಿಸಿದ ಕಾರಣಕ್ಕಾಗಿ ನಟ ಪ್ರಕಾಶ್ ರೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು, ಕಲಬುರಗಿಯಲ್ಲಿ ರೈ ಅವರ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಬಳಿಕ ಪೊಲೀಸ್ ಭದ್ರತೆಯಲ್ಲಿ ಪ್ರಕಾಶ್ ರೈ ಅವರನ್ನು ಸುರಕ್ಷಿತವಾಗಿ ಕಳುಹಿಸಿಕೊಡಲಾಯಿತು

ಬಿಜೆಪಿಯನ್ನು ಟೀಕಿಸಿದ ಕಾರಣಕ್ಕಾಗಿ ನಟ ಪ್ರಕಾಶ್ ರೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಆ ಪಕ್ಷದ ಕಾರ್ಯಕರ್ತರು, ಕಲಬುರಗಿಯಲ್ಲಿ ಪ್ರಕಾಶ್ ರೈ ಅವರ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಅಂಬೇಡ್ಕರ್ ಜಯಂತಿ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಕಲಬುರಗಿಗೆ ಆಗಮಿಸಿದ ಪ್ರಕಾಶ್ ರೈ ಅವರ ಕಾರನ್ನು ಗುಲ್ಬರ್ಗಾ ಕ್ಲಬ್ ಬಳಿ ತಡೆದ ಪ್ರತಿಭಟನಾಕಾರರು, ಘೋಷಣೆಗಳನ್ನು ಕೂಗಿದರು. ಪ್ರಕಾಶ್ ರೈ ಅವರು ಮೋದಿ ವಿರುದ್ಧ ಪ್ರಚೋದನಕಾರಿಯಾಗಿ ಮಾತನಾಡುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ದೂರಿದರು. “ಬಿಜೆಪಿ ಕ್ಯಾನ್ಸರ್ ಇದ್ದಂತೆ, ಅದಕ್ಕೆ ಮತ ಹಾಕಬೇಡಿ ಎಂದು ರೈ ಹೇಳಿದ್ದಾರೆ,” ಎಂಬುದು ಪ್ರತಿಭಟನಾನಿರತರ ಆಕ್ರೋಶವಾಗಿತ್ತು. ನಂತರ ಪೊಲೀಸರು ಮಧ್ಯಪ್ರವೇಶಿಸಿ, ಪ್ರಕಾಶ್ ರೈ ಅವರನ್ನು ಕರೆದೊಯ್ದರು.

ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ, ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ
ನಿವೃತ್ತಿ ವೇತನಕ್ಕೆ ಆಗ್ರಹಿಸಿ ಸೀಮೆಎಣ್ಣೆ ವಿತರಕರಿಂದ ಬೀದರ್‌ನಲ್ಲಿ ಹೋರಾಟ 
ಬಾಲಕಿ ಮೇಲಿನ ಅತ್ಯಾಚಾರ, ಕೊಲೆಗೆ ಖಂಡನೆ; ಬೀದರ್‌ನಲ್ಲಿ ಪ್ರತಿಭಟನೆ
Editor’s Pick More