ಚಿತ್ರರಂಗದಲ್ಲಿ ಸಮಾನತೆಗೆ ಆಗ್ರಹಿಸಿ ಕ್ಯಾನ್ ಚಿತ್ರೋತ್ಸವದಲ್ಲಿ ಪ್ರತಿಭಟನೆ 

ಏಳು ದಶಕಗಳ ಇತಿಹಾಸ ಹೊಂದಿರುವ ಕ್ಯಾನ್ ಚಿತ್ರೋತ್ಸವ ಇಂದು ಹೊಸದೊಂದು ಭಾಷ್ಯ ಬರೆಯಿತು. ಚಿತ್ರೋದ್ಯಮ ಕ್ಷೇತ್ರದಲ್ಲಿ ಸಮಾನತೆ ತರಬೇಕೆಂದು ನಟಿಯರಾದ ಸಲ್ಮಾ ಹಯೆಕ್, ಜನೆ ಫೊಂಡ ಸೇರಿದಂತೆ 80ಕ್ಕೂ ಹೆಚ್ಚು ಮಂದಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು

ಚಿತ್ರರಂಗದಲ್ಲಿನ ಲೈಂಗಿಕ ಕಿರುಕುಳದ ಕುರಿತಂತೆ ಧ್ವನಿ ಎತ್ತಿದ್ದ ಹಾಲಿವುಡ್ ಚಿತ್ರೋದ್ಯಮದಲ್ಲಿ ಇದೀಗ ಸಮಾನತೆಗಾಗಿ ಹೋರಾಟ ಆರಂಭವಾಗಿದೆ. ಕ್ಯಾನ್ ಚಿತ್ರೋತ್ಸವದಲ್ಲಿ ಮಹಿಳಾ ನಿರ್ದೇಶನದ ಚಿತ್ರಗಳ ಪ್ರದರ್ಶನಕ್ಕೆ ಹೆಚ್ಚು ಅವಕಾಶ ನೀಡಿಲ್ಲ ಎಂಬ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ, ಭಾನುವಾರ ಪ್ರತಿಷ್ಠಿತ ರೆಡ್ ಕಾರ್ಪೆಟ್ ಮೇಲೆ ನಿಂತ ಚಿತ್ರೋದ್ಯಮದ ಮಹಿಳಾ ಗಣ್ಯರು ಒಕ್ಕೊರಲಿನಿಂದ ಸಮಾನತೆಗಾಗಿ ಧ್ವನಿ ಎತ್ತಿದರು.

ಇದರಿಂದಾಗಿ, ಏಳು ದಶಕಗಳ ಇತಿಹಾಸ ಹೊಂದಿರುವ ಕ್ಯಾನ್ ಚಿತ್ರೋತ್ಸವ ಇಂದು ವಿಶೇಷ ಘಟನೆಗೆ ಸಾಕ್ಷಿಯಾದಂತಾಯಿತು. ಚಿತ್ರೋದ್ಯಮ ಕ್ಷೇತ್ರದಲ್ಲಿ ಸಮಾನತೆ ತರಬೇಕೆಂದು ನಟಿಯರಾದ ಸಲ್ಮಾ ಹಯೆಕ್ , ಕೇಟ್ ಬ್ಲಾನ್ಚೆಟ್, ನಿರ್ದೇಶಕರಾದ ಪೆಟ್ಟಿ ಜೆಂಕಿನ್ಸ್, ಫ್ರಾನ್ಸ್‌ನ ಅಗ್ನೆಸ್ ವರ್ದಾ ಸೇರಿದಂತೆ 80ಕ್ಕೂ ಹೆಚ್ಚು ಮಂದಿ ಚಿತ್ರರಂಗದ ಮಹಿಳಾ ನಿರ್ದೇಶಕಿಯರು, ನಿರ್ಮಾಪಕಿಯರು, ತಾರೆಯರು ಹಾಗೂ ಚಿತ್ರರಂಗದ ಮಹಿಳಾ ವೃತ್ತಿಪರರು ರೆಡ್ ಕಾರ್ಪೆಟ್ ಮೇಲೆ ನಿಂತುಕೊಂಡು ಪ್ರತಿಭಟನೆ ನಡೆಸಿದರು.

“ಚಿತ್ರೋದ್ಯಮದಲ್ಲಿ ಬದಲಾವಣೆ ಹಾಗೂ ಸುಧಾರಣೆ ತರಲು ಸಮಾನತೆಯ ಅಗತ್ಯವಿದೆ. ಹೀಗಾಗಿ ನಾವೆಲ್ಲಾ ಪ್ರತಿಭಟನೆ ನಡೆಸುತ್ತಿದ್ದೇವೆ,” ಎಂದು ನಟಿಯರು ಒಕ್ಕೊರಲಿನಿಂದ ಹೇಳಿದರು.

ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ, ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ
ನಿವೃತ್ತಿ ವೇತನಕ್ಕೆ ಆಗ್ರಹಿಸಿ ಸೀಮೆಎಣ್ಣೆ ವಿತರಕರಿಂದ ಬೀದರ್‌ನಲ್ಲಿ ಹೋರಾಟ 
ಬಾಲಕಿ ಮೇಲಿನ ಅತ್ಯಾಚಾರ, ಕೊಲೆಗೆ ಖಂಡನೆ; ಬೀದರ್‌ನಲ್ಲಿ ಪ್ರತಿಭಟನೆ
Editor’s Pick More