ಕೆಟ್ಟುನಿಂತ ರಾಣಿ ಚೆನ್ನಮ್ಮ ರೈಲು, ಪರೀಕ್ಷಾರ್ಥಿಗಳ ಪರದಾಟ, ಪ್ರತಿಭಟನೆ

ರಾಣಿ ಚನ್ನಮ್ಮ ರೈಲು ವಿಳಂಬ ಹಿನ್ನೆಲೆಯಲ್ಲಿ , ಡಿಎಆರ್ ಪರೀಕ್ಷೆ ಬರೆಯಲು ಬೆಂಗಳೂರು ಸೇರಿದಂತೆ ವಿವಿಧೆಡೆ ಆಗಮಿಸಬೇಕಿದ್ದ ವಿದ್ಯಾರ್ಥಿಗಳಿಗೆ ಅವಕಾಶ ಕೈ ತಪ್ಪಿಹೋಗಿದ್ದು, ಪರೀಕ್ಷಾರ್ಥಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ

ರಾಣಿ ಚನ್ನಮ್ಮ ರೈಲು ವಿಳಂಬದ ಹಿನ್ನೆಲೆಯಲ್ಲಿ, ಡಿಎಆರ್ ಪರೀಕ್ಷೆ ಬರೆಯಲು ಬೆಂಗಳೂರು ಸೇರಿದಂತೆ ವಿವಿಧೆಡೆ ಆಗಮಿಸಬೇಕಿದ್ದ ವಿದ್ಯಾರ್ಥಿಗಳಿಗೆ ಅವಕಾಶ ಕೈ ತಪ್ಪಿಹೋಗಿದ್ದು, ಪರೀಕ್ಷಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿ ರೈಲು ನಿಲ್ದಾಣದ ಮುಂಭಾಗ ಜಮಾಯಿಸಿದ ಪರೀಕ್ಷಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ನೇಮಕಾತಿ ಪರೀಕ್ಷೆ ಬರೆಯಲು ಬೆಳಗಾವಿ, ಧಾರವಾಡ ಜಿಲ್ಲೆಗಳಿಂದ ಬೆಂಗಳೂರು, ಚಿಕ್ಕಮಗಳೂರು, ತುಮಕೂರು ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಿಗೆ ತೆರಳಬೇಕಿದ್ದ ಪರೀಕ್ಷಾರ್ಥಿಗಳು ಭಾನುವಾರ ರಾಣಿ ಚೆನ್ನಮ್ಮ ರೈಲಿನಲ್ಲಿ ಪಯಣ ಬೆಳೆಸಿದ್ದರು. ರಾತ್ರಿ 10.30ಕ್ಕೆ ಬೆಂಗಳೂರು ತಲುಪಬೇಕಿದ್ದ ರೈಲು ಇಂದು ಮುಂಜಾನೆ 6 ಗಂಟೆಗೆ ಹುಬ್ಬಳ್ಳಿ ತಲುಪಿದ್ದರಿಂದ ಪರೀಕ್ಷಾರ್ಥಿಗಳು ಆಕ್ರೋಶಗೊಂಡಿದ್ದಾರೆ.

ಧಾರವಾಡ ಕುಂಬಾರಗಣವಿ ಬಳಿ ಗೂಡ್ಸ್ ರೈಲು ಕೆಟ್ಟು ನಿಂತ ಪರಿಣಾಮ, ರಾಣಿ ಚನ್ನಮ್ಮ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ಹೀಗಾಗಿ, ರೈಲಿಗಾಗಿ ಕಾದುಕುಳಿತಿದ್ದ ಪರೀಕ್ಷಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ, ತಾವು ತಲುಪಬೇಕಿದ್ದ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಸಾಧ್ಯವಾಗಲಿಲ್ಲ. ಹೀಗಾಗಿ, ಹುಬ್ಬಳ್ಳಿಯ ರೈಲು ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಿ, ತಮಗೆ ಪರೀಕ್ಷೆ ಬರೆಯಲು ಇನ್ನೊಂದು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ : ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್‌ ನೀಡಲು ಆಗ್ರಹಿಸಿ ತುಮಕೂರಲ್ಲಿ ಪ್ರತಿಭಟನೆ

ಪರೀಕ್ಷಾರ್ಥಿಗಳ ನೆರವಿಗೆ ದಾವಿಸಿದ ಹುಬ್ಬಳ್ಳಿ ಶಾಸಕ ಪ್ರಸಾದ್ ಅಬ್ಬಯ್ಯ, ಸಮಸ್ಯೆಯ ಕುರಿತಂತೆ ಸಿಎಂ ಗಮನಕ್ಕೆ ತಂದಿರುವುದಾಗಿ ತಿಳಿಸಿದರು. ಅಲ್ಲದೆ, ಪರೀಕ್ಷಾ ವಂಚಿತರಿಗೆ ಮತ್ತೊಂದು ಅವಕಾಶವನ್ನು ಕಲ್ಪಿಸಿಕೊಡುವುದಾಗಿ ಮುಖ್ಯಮಂತ್ರಿಗಳು ಭರವಸೆಯನ್ನು ನೀಡಿರುವುದಾಗಿ ತಿಳಿಸಿದ್ದಾರೆ.

ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ, ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ
ನಿವೃತ್ತಿ ವೇತನಕ್ಕೆ ಆಗ್ರಹಿಸಿ ಸೀಮೆಎಣ್ಣೆ ವಿತರಕರಿಂದ ಬೀದರ್‌ನಲ್ಲಿ ಹೋರಾಟ 
ಬಾಲಕಿ ಮೇಲಿನ ಅತ್ಯಾಚಾರ, ಕೊಲೆಗೆ ಖಂಡನೆ; ಬೀದರ್‌ನಲ್ಲಿ ಪ್ರತಿಭಟನೆ
Editor’s Pick More