ವಿಡಿಯೋ | ಗ್ರಾಪಂ ಅಧ್ಯಕ್ಷರನ್ನು ಕಚೇರಿಯೊಳಗೆ ಕೂಡಿ ಬೀಗ ಹಾಕಿ ಆಕ್ರೋಶ

ಪ್ರತಿನಿತ್ಯ ಮೈಲಿಗಟ್ಟಲೆ ಪ್ರಯಾಣ ಮಾಡಿ ನೀರು ತರಬೇಕಾದ ಪರಿಸ್ಥಿತಿ. ಕುಡಿಯುವ ನೀರಿಗಾಗಿ ಸುಮಾರು ಎರಡು ವರ್ಷಗಳಿಂದ ಈ ಗ್ರಾಮಸ್ಥರು ಗೋಳಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಿಲ್ಲ ಎನ್ನುವುದು ಗದಗದ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮಸ್ಥರ ಗೋಳು

ಪ್ರತಿನಿತ್ಯ ಮೈಲಿಗಟ್ಟಲೆ ಪ್ರಯಾಣ ಮಾಡಿ ನೀರು ತರಬೇಕಾಗಿದೆ. ಕುಡಿಯೋ ನೀರಿಗಾಗಿ ಸುಮಾರು ಎರಡು ವರ್ಷಗಳಿಂದ ಈ ಗ್ರಾಮಸ್ಥರು ಗೋಳಾಡುತ್ತಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಿಲ್ಲ ಎನ್ನುವುದು ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮಸ್ಥರ ಗೋಳು. ಎರಡು ವರ್ಷದಿಂದ ತಮ್ಮೂರಿನ ನೀರಿನ ಸಮಸ್ಯೆ ನೀಗದ ಕಾರಣ ಇಂದು ಗ್ರಾಮಸ್ಥರೆಲ್ಲ ಸಂಘಟಿತರಾಗಿ, ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರನ್ನು ಕೂಡಿ, ಗ್ರಾಮ ಪಂಚಾಯತಿ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರ ಬವಣೆ ನೀಗಿಸಲು ಈ ತನಕ ಗ್ರಾಮ ಪಂಚಾಯತಿ ಪರ್ಯಾಯ ವ್ಯವಸ್ಥೆ ಕಂಡುಕೊಂಡಿಲ್ಲ. ಹೀಗಾಗಿ ಈ ಗ್ರಾಮಸ್ಥರು ಕುಡಿಯೋ ನೀರಿಗಾಗಿ ಕಿಲೋಮೀಟರ್ ದೂರ ಪ್ರಯಾಣಿಸಬೇಕಿದೆ. ದೂರದಲ್ಲಿರೋ ಪರಿಚಿತರ ಹೊಲ, ಗದ್ದೆಗಳಿಗೆ ಹೋಗಿ ಕುಡಿಯೋ ನೀರು ತರುವಂತಾಗಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ವೃದ್ಧರು ಪ್ರತಿದಿನ ಅನುಭವಿಸುವ ಸಂಕಷ್ಟಕ್ಕೆ ಗ್ರಾಮ ಪಂಚಾಯತಿ ಕಣ್ಣು ತೆರೆದು ನೋಡಿಲ್ಲ. ಇದರಿಂದ ರೋಸಿಹೋದ ಲಕ್ಕಲಕಟ್ಟಿ ಗ್ರಾಮಸ್ಥರು, ಪಂಚಾಯತಿ ಎದುರು ಟೈರ್‌ಗೆ ಬಿಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಜೊತೆಗೆ, ಪಂಚಾಯತಿ ಎದುರಿಗೆ ಖಾಲಿ ಕೊಡಗಳೊಂದಿಗೆ ಗ್ರಾಮಸ್ಥರು ಧರಣಿ ಕುಳಿತರು. ಪ್ರತಿಭಟನೆ ಮೂಲಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಸದಸ್ಯರ ವಿರುದ್ಧ ಘೋಷಣೆ ಕೂಗಿ ಕಿಡಿಕಾರಿದರು. ಸ್ಥಳಕ್ಕೆ ಡಿಸಿ, ತಹಶೀಲ್ದಾರ್ ಬರುವಂತೆ ಪಟ್ಟು ಹಿಡಿದರು.

ಇದನ್ನೂ ಓದಿ : ವಿಡಿಯೋ | 20 ದಿನದಿಂದ ಸಿಗದ ಕುಡಿಯುವ ನೀರು, ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ

ಕಳೆದ ಎರಡು ವರ್ಷಗಳಿಂದ ಲಕ್ಕಲಕಟ್ಟಿ ಗ್ರಾಮಸ್ಥರು ನೀರಿಗಾಗಿ ನರಳಾಡುತ್ತಿದ್ದಾರೆ. ಆದರೆ ಗ್ರಾಮಸ್ಥರ ಗೋಳಾಟ ಮಾತ್ರ ಯಾರಿಗೂ ಕಾಣುತ್ತಿಲ್ಲ. ಸ್ಥಳಿಯರ ಸಿಟ್ಟು ಇನ್ನಷ್ಟು ತಾರಕಕ್ಕೆ ಏರುವ ಮುನ್ನ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಇದಕ್ಕೊಂದು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ.

ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ, ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ
ನಿವೃತ್ತಿ ವೇತನಕ್ಕೆ ಆಗ್ರಹಿಸಿ ಸೀಮೆಎಣ್ಣೆ ವಿತರಕರಿಂದ ಬೀದರ್‌ನಲ್ಲಿ ಹೋರಾಟ 
ಬಾಲಕಿ ಮೇಲಿನ ಅತ್ಯಾಚಾರ, ಕೊಲೆಗೆ ಖಂಡನೆ; ಬೀದರ್‌ನಲ್ಲಿ ಪ್ರತಿಭಟನೆ
Editor’s Pick More