ಗಂಗಾನದಿ ಉಳಿವಿಗೆ ಆಗ್ರಹಿಸಿ ಅಗರ್ವಾಲ್ ಪ್ರತಿಭಟನೆ 62ನೇ ದಿನಕ್ಕೆ

ಗಂಗಾನದಿ ಸ್ವಚ್ಚತೆ, ನದಿಪಾತ್ರ ಸಂರಕ್ಷಣೆ, ಆಣೆಕಟ್ಟು ಯೋಜನೆಗಳ ನಿಷೇಧಗಳ ಬೇಡಿಕೆಗೆ ಆಗ್ರಹಿಸಿ ಹಿರಿಯ ಪರಿಸರ ತಜ್ಞ, ಸಾಮಾಜಿಕ ಕಾರ್ಯಕರ್ತ ಜಿ ಡಿ ಅಗರ್ವಾಲ್ ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ 62ನೇ ದಿನಕ್ಕೆ ಕಾಲಿಟ್ಟಿದೆ, ಅವರಿಗೆ ವಿದ್ಯಾರ್ಥಿಗಳೂ ಸಾಥ್ ನೀಡಿದ್ದಾರೆ

ಗಂಗಾ ನದಿ ಸ್ವಚ್ಚತೆ, ನದಿಪಾತ್ರ ಸಂರಕ್ಷಣೆ, ಅಣೆಕಟ್ಟು ಯೋಜನೆಗಳ ನಿಷೇಧಗಳ ಬೇಡಿಕೆಗೆ ಆಗ್ರಹಿಸಿ ಹಿರಿಯ ಪರಿಸರ ತಜ್ಞ, ಸಾಮಾಜಿಕ ಕಾರ್ಯಕರ್ತ ಜಿ ಡಿ ಅಗರ್ವಾಲ್ ಹರಿದ್ವಾರದಲ್ಲಿ ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ 62ನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟಾದರೂ ಕೇಂದ್ರ ಸರ್ಕಾರ ನದಿ ಸಂರಕ್ಷಣೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಪರಿಸರ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳು ಇಂದು ದೇಶಾದ್ಯಂತ ಪ್ರತಿಭಟನೆ ಕೈಗೊಂಡಿದ್ದಾರೆ.

ಗಂಗಾ ನದಿ ಸಂರಕ್ಷಣೆಗೆ ಆಗ್ರಹಿಸಿ ಪರಿಸರ ತಜ್ಞ ಅಗರ್ವಾಲ್ ಸೇರಿದಂತೆ ಪರಿಸರ ಪ್ರೇಮಿಗಳು ಕಳೆದ 30 ವರ್ಷಗಳಿಂದ ಪ್ರತಿಭಟನೆಯನ್ನು ನಡೆಸುತ್ತಿದ್ದರೂ ಪ್ರಯೋಜನ ಮಾತ್ರ ಶೂನ್ಯ. ಹೀಗಾಗಿ, ಇಂದು  ದೇಶದ ಪವಿತ್ರ ನದಿಯ ಉಳಿವಿಗಾಗಿ, ದೇಶದ ನಾಗರಿಕರು, ವಿದ್ಯಾರ್ಥಿಗಳು ಇಂದು ದೇಶದ ವಿವಿಧೆಡೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಅಗರ್ವಾಲರ ಈ ಹೋರಾಟಕ್ಕೆ ಗ್ರಾಮ ಸೇವಾ ಸಂಘ ಕೂಡ ಬೆಂಬಲ ವ್ಯಕ್ತಪಡಿಸಿದೆ.

ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ, ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ
ನಿವೃತ್ತಿ ವೇತನಕ್ಕೆ ಆಗ್ರಹಿಸಿ ಸೀಮೆಎಣ್ಣೆ ವಿತರಕರಿಂದ ಬೀದರ್‌ನಲ್ಲಿ ಹೋರಾಟ 
ಬಾಲಕಿ ಮೇಲಿನ ಅತ್ಯಾಚಾರ, ಕೊಲೆಗೆ ಖಂಡನೆ; ಬೀದರ್‌ನಲ್ಲಿ ಪ್ರತಿಭಟನೆ
Editor’s Pick More