ಸಹಿಷ್ಣುತೆ ವೃದ್ಧಿಗೆ ಆಗ್ರಹಿಸಿ ಬೀದಿಗಿಳಿದ ಲೇಖಕರು, ಕಲಾವಿದರು

ದೇಶದಲ್ಲಿ ಸಹಿಷ್ಣುತೆ ಹೆಚ್ಚಾಗಬೇಕು ಎಂದು ಆಗ್ರಹಿಸಿ, ಕಲಾವಿದರು ಹಾಗೂ ಲೇಖಕರು ಸೆಪ್ಟೆಂಬರ್ 2ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ ‘ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದಕ್ಕಾಗಿ ದೇಣಿಗೆ ಸಂಗ್ರಹ ಕಾರ್ಯ ನಡೆಯುತ್ತಿದೆ

ದೇಶದಲ್ಲಿ ಸಹಿಷ್ಣುತೆ ಹೆಚ್ಚಾಗಬೇಕು ಎಂದು ಆಗ್ರಹಿಸಿ, ಕಲಾವಿದರು ಹಾಗೂ ಲೇಖಕರು ಸೆಪ್ಟೆಂಬರ್ 2ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ ‘ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ’ ಹಮ್ಮಿಕೊಂಡಿದ್ದಾರೆ. ಕಾರ್ಯಕ್ರಮದ ಖರ್ಚುವೆಚ್ಚಕ್ಕಾಗಿ ಲೇಖಕರು ಹಾಗೂ ಕಲಾವಿದರು, ಬೆಂಗಳೂರಿನ ಎಂ ಜಿ ರಸ್ತೆಯಲ್ಲಿ ಪುಸ್ತಕ ಹಾಗೂ ಕೈಮಗ್ಗದ ಬಟ್ಟೆಗಳನ್ನು ಮಾರಾಟ ಮಾಡುವ ಮೂಲಕ ದೇಣಿಗೆ ಸಂಗ್ರಹ ಆರಂಭಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್. ದೊರೆಸ್ವಾಮಿ, ಲೇಖಕರಾದ ವಿಜಯಮ್ಮ, ಅಗ್ರಹಾರ ಕೃಷ್ಣಮೂರ್ತಿ, ಮೂಡ್ನಾಕೂಡು ಚಿನ್ನಸ್ವಾಮಿ, ಪ್ರಸನ್ನ, ಜಿ ಎನ್ ನಾಗರಾಜ್ ಮತ್ತಿತರರು ದೇಣಿಗೆ ಸಂಗ್ರಹ ಮಾಡಿದರು.

ಗ್ರಾಮಸೇವಾ ಸಂಘದ ಸಹಯೋಗದೊಂದಿಗೆ ಸೆಪ್ಟೆಂಬರ್ 2ರಂದು ನಡೆಯಲಿರುವ ‘ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ'ದಲ್ಲಿ ಸೆಕ್ಯೂಲರ್ ವಾದ, ರಾಷ್ಟ್ರೀಯತೆ, ಲೇಖಕ-ಕಲಾವಿದರ ಜವಾಬ್ದಾರಿಗಳು, ವಸುಧೈವ ಕುಟುಂಬಕಂ ವಿಚಾರಗಳ ಕುರಿತ ನಿಲುವಳಿಗಳು ಚರ್ಚಿತವಾಗಲಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ, ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ
ನಿವೃತ್ತಿ ವೇತನಕ್ಕೆ ಆಗ್ರಹಿಸಿ ಸೀಮೆಎಣ್ಣೆ ವಿತರಕರಿಂದ ಬೀದರ್‌ನಲ್ಲಿ ಹೋರಾಟ 
ಬಾಲಕಿ ಮೇಲಿನ ಅತ್ಯಾಚಾರ, ಕೊಲೆಗೆ ಖಂಡನೆ; ಬೀದರ್‌ನಲ್ಲಿ ಪ್ರತಿಭಟನೆ
Editor’s Pick More