ರೈತರ ಪ್ರತಿಭಟನೆಯಲ್ಲಿ ಭಾಗವಹಿಸಲು ಮುಂದಾದ ಯೋಗೇಂದ್ರ ಯಾದವ್ ಪೊಲೀಸರ ವಶಕ್ಕೆ

ಸೇಲಂ-ಚೆನ್ನೈ ಮಾರ್ಗದ ಅಷ್ಟಪಥ ಹೆದ್ದಾರಿ ವಿರೋಧಿಸಿ ತಮಿಳುನಾಡಿನಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ ಸ್ವರಾಜ್ ಅಭಿಯಾನ್ ಮುಖ್ಯಸ್ಥ ಯೋಗೇಂದ್ರ ಯಾದವ್‌ ಅವರನ್ನು ತಮಿಳುನಾಡಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ

ಸೇಲಂ-ಚೆನ್ನೈ ಮಾರ್ಗದಲ್ಲಿ ನಿರ್ಮಾಣ ಆಗುತ್ತಿರುವ ಅಷ್ಟಪಥ ಹೆದ್ದಾರಿ ವಿರೋಧಿಸಿ ತಮಿಳುನಾಡಿನಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮುಂದಾದ ಸ್ವರಾಜ್ ಅಭಿಯಾನ್ ಮುಖ್ಯಸ್ಥ ಹಾಗೂ ಆಮ್ ಆದ್ಮಿ ಪಕ್ಷದ ಮಾಜಿ ನಾಯಕ ಯೋಗೇಂದ್ರ ಯಾದವ್‌ ಅವರನ್ನು ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿ ಶನಿವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

“ಅಷ್ಟಪಥ ಹೆದ್ದಾರಿ ನಿರ್ಮಾಣ ಪ್ರಸ್ತಾವನೆ ವಿರೋಧಿಸಿ ನಡೆಯುತ್ತಿರುವ ಚಳವಳಿಗೆ ಸಿಕ್ಕಿದ್ದ ಆಹ್ವಾನದ ಮೇರೆಗೆ ನಾವು ರೈತರನ್ನು ಭೇಟಿ ಮಾಡಲು ಬಂದಿದ್ದೆವು. ಆದರೆ, ಪೊಲೀಸರು ನಮ್ಮನ್ನು ತಡೆದು ನಮ್ಮ ಮೊಬೈಲ್ ಕಿತ್ತುಕೊಂಡು ಪೊಲೀಸ್ ವಾಹನಕ್ಕೆ ತಳ್ಳಿದ್ದಾರೆ,” ಎಂದು ಯೋಗೆಂದ್ರ ಯಾದವ್ ಟ್ವೀಟ್ ಮಾಡಿದ್ದಾರೆ.

“ತಿರು ಅಣ್ಣಾಮಲೈನ ಕಲೆಕ್ಟರ್ ಕುಂದಾಸಾಮಿ ಅವರೊಂದಿಗೆ ಅಷ್ಟಪಥ ಹೆದ್ದಾರಿಗಾಗಿ ನಡೆಸುವ ಭೂಸ್ವಾಧೀನ ಮತ್ತು ದೂರುಗಳ ಕುರಿತಂತೆ ಚರ್ಚಿಸಿದ್ದೆ. ಈ ವಿಚಾರದಲ್ಲಿ ಪೊಲೀಸರ ಹಸ್ತಕ್ಷೇಪವನ್ನು ಅವರು ನಿರಾಕರಿಸಿದ್ದರು. ಅದಾದ ಒಂದೇ ನಿಮಿಷದಲ್ಲಿ ಪೊಲೀಸರು ನನ್ನನ್ನು ಬಂಧಿಸಿದರು. ಎಸ್ಪಿ ಅವರು ರೈತರನ್ನು ಭೇಟಿ ಮಾಡಲು ಅವಕಾಶ ನೀಡಿಲ್ಲ,” ಎಂದು ಯೋಗೇಂದ್ರ ಯಾದವ್ ಆರೋಪಿಸಿದ್ದಾರೆ.

10,000 ಕೋಟಿ ರು. ವೆಚ್ಚದ ಸೇಲಂ-ಚೆನ್ನೈ ಷಟ್ಪಥ ಹೆದ್ದಾರಿ ವಿರುದ್ಧ ರೈತರು ಪ್ರತಿಭಟಿಸುತ್ತಿದ್ದಾರೆ. ಸ್ಥಳೀಯರು ಹಾಗೂ ರೈತರು ತಮ್ಮ ಭೂಮಿ ಕಳೆದುಕೊಳ್ಳುವ ಭಯದಿಂದ ಹೋರಾಡುತ್ತಿದ್ದರೆ, ಪರಿಸರವಾದಿಗಳು ಯೋಜನೆಗಾಗಿ ಮರಗಳನ್ನು ಕಡಿಯುವುದನ್ನು ವಿರೋಧಿಸುತ್ತಿದ್ದಾರೆ.

ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ, ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ
ನಿವೃತ್ತಿ ವೇತನಕ್ಕೆ ಆಗ್ರಹಿಸಿ ಸೀಮೆಎಣ್ಣೆ ವಿತರಕರಿಂದ ಬೀದರ್‌ನಲ್ಲಿ ಹೋರಾಟ 
ಬಾಲಕಿ ಮೇಲಿನ ಅತ್ಯಾಚಾರ, ಕೊಲೆಗೆ ಖಂಡನೆ; ಬೀದರ್‌ನಲ್ಲಿ ಪ್ರತಿಭಟನೆ
Editor’s Pick More