ಯೋಗೇಂದ್ರ ಯಾದವ್ ಬಂಧನಕ್ಕೆ ಆಕ್ರೋಶ, ಮೈಸೂರಿನಲ್ಲಿ ಪ್ರತಿಭಟನೆ

ಚೆನ್ನೈ-ಸೇಲಂ ಅಷ್ಟಪಥ ಹೆದ್ದಾರಿ ನಿರ್ಮಾಣ ಯೋಜನೆ ವಿರೋಧಿಸುತ್ತಿರುವ ರೈತರನ್ನು ಭೇಟಿ ಮಾಡಿ ಚರ್ಚಿಸಲು ತೆರಳುತ್ತಿದ್ದ ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಅವರನ್ನು ಬಂಧಿಸಿರುವ ತಮಿಳುನಾಡು ಪೊಲೀಸರ ಕ್ರಮ ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆಯಿತು

ತಮಿಳುನಾಡಿನ ಚೆನ್ನೈ-ಸೇಲಂ ಅಷ್ಟಪಥ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣ ಯೋಜನೆಯನ್ನು ವಿರೋಧಿಸುತ್ತಿರುವ ರೈತರನ್ನು ಭೇಟಿ ಮಾಡಿ ಚರ್ಚಿಸಲು ತೆರಳುತ್ತಿದ್ದ ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಅವರನ್ನು ಚೇಗಂ ಪೊಲೀಸರು ಬಂಧಿಸಿದ್ದರು. ಇದನ್ನು ಖಂಡಿಸಿ ಸ್ವರಾಜ್ ಇಂಡಿಯಾ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಭಾನುವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು.

ಸಾಹಿತಿ ದೇವನೂರ ಮಹದೇವ, ಬಡಗಲಪುರ ನಾಗೇಂದ್ರ ಸೇರಿದಂತೆ ಅನೇಕ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಯೋಗೇಂದ್ರ ಯಾದವ್‌ ಅವರನ್ನು ಬಂಧಿಸಿರುವ ತಮಿಳುನಾಡು ಪೊಲೀಸರ ಕ್ರಮ ಖಂಡಿಸಿದರು

ಈ ಮಧ್ಯೆ ಪೊಲೀಸರ ಕ್ರಮ ಖಂಡಿಸಿ ಟ್ವೀಟ್ ಮಾಡಿದ್ದ ಯೋಗೇಂದ್ರ ಯಾದವ್, “ಅಷ್ಟಪಥ ಹೆದ್ದಾರಿ ನಿರ್ಮಾಣ ಪ್ರಸ್ತಾವನೆ ವಿರೋಧಿಸಿ ನಡೆಯುತ್ತಿರುವ ಚಳವಳಿಗೆ ಸಿಕ್ಕಿದ್ದ ಆಹ್ವಾನದ ಮೇರೆಗೆ ನಾವು ರೈತರನ್ನು ಭೇಟಿ ಮಾಡಲು ಬಂದಿದ್ದೆವು. ಆದರೆ, ಪೊಲೀಸರು ನಮ್ಮನ್ನು ತಡೆದು ನಮ್ಮ ಮೊಬೈಲ್ ಕಿತ್ತುಕೊಂಡು ಪೊಲೀಸ್ ವಾಹನಕ್ಕೆ ತಳ್ಳಿದ್ದಾರೆ,” ಎಂದಿದ್ದರು.

ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ, ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ
ನಿವೃತ್ತಿ ವೇತನಕ್ಕೆ ಆಗ್ರಹಿಸಿ ಸೀಮೆಎಣ್ಣೆ ವಿತರಕರಿಂದ ಬೀದರ್‌ನಲ್ಲಿ ಹೋರಾಟ 
ಬಾಲಕಿ ಮೇಲಿನ ಅತ್ಯಾಚಾರ, ಕೊಲೆಗೆ ಖಂಡನೆ; ಬೀದರ್‌ನಲ್ಲಿ ಪ್ರತಿಭಟನೆ
Editor’s Pick More