ರಿಹರ್ಸಲ್ | ರಂಗಕ್ಕೆ ಬರಲು ಸಜ್ಜಾಗಿರುವ ಪಾರ್ಶ್ವ ಸಂಗೀತ

ಮೈಸೂರಿನ ‘ರಂಗವಲ್ಲಿ’ ರಂಗ ತಂಡ ಪ್ರಸ್ತುತ ಪಡಿಸುತ್ತಿರುವ ಶ್ರೀನಿವಾಸ ವೈದ್ಯರ ಬರಹಗಳನ್ನಾಧರಿಸಿದ ನಾಟಕ ‘ಪಾರ್ಶ್ವ ಸಂಗೀತ’ ೧೯೪೦ರಿಂದ ಇತ್ತೀಚಿನವರೆಗಿನ, ಕಾಲಾತೀತವಾಗಿ ಉಳಿದಿರುವ ಅದ್ಭುತ ಹಿಂದಿ ಚಿತ್ರಗೀತೆಗಳೊಂದಿಗಿನ ನಂಟನ್ನು ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುತ್ತದೆ 

ಶ್ರೀನಿವಾಸ ವೈದ್ಯರ ಬರಹಗಳನ್ನಾಧರಿಸಿದ ನಾಟಕ 'ಪಾರ್ಶ್ವ ಸಂಗೀತ' ರಂಗಕ್ಕೆ ಬರಲು ಸಜ್ಜಾಗಿದೆ. ಮೈಸೂರಿನ 'ರಂಗವಲ್ಲಿ' ರಂಗ ತಂಡ ಪ್ರಸ್ತುತ ಪಡಿಸುತ್ತಿರುವ ಈ ನಾಟಕದ ಪರಿಕಲ್ಪನೆ ಮತ್ತು ನಿರ್ದೇಶನ ಪ್ರಶಾಂತ್ ಹಿರೇಮಠ ಅವರದ್ದು. ೧೯೪೦ರಿಂದ ಇತ್ತೀಚಿನವರೆಗಿನ, ಕಾಲಾತೀತವಾಗಿ ಉಳಿದಿರುವ ಅದ್ಭುತ ಹಿಂದಿ ಚಿತ್ರಗೀತೆಗಳೊಂದಿಗಿನ ನಂಟನ್ನು ನಿರೂಪಕನ ಮೂಲಕ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುವುದು ಈ ನಾಟಕದ ವಿಶೇಷ.

ಮೈಸೂರಿನ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಜೂ. ೨೩ ರ ಸಂಜೆ ೭ಕ್ಕೆ ಮೊದಲ ಪ್ರದರ್ಶನವಿದೆ. ನಂತರ, ಇದೇ ಮಂದಿರದಲ್ಲಿ, ಜೂ. ೨೪, ೨೯ ಮತ್ತು ೩೦ ರಂದು ಅದೇ ಸಮಯಕ್ಕೆ ಮರುಪ್ರದರ್ಶನವಿದೆ. ನಾಟಕದ 'ರಿಹರ್ಸಲ್’ ಇಲ್ಲಿದೆ.

ನಾಟಕ ಪ್ರಸ್ತುತಿ: ರಂಗವಲ್ಲಿ, ಮೈಸೂರು. ರಂಗರೂಪ: ಬಿ ಪಿ ಅರುಣ್, ಸಂಗೀತ ನಿರ್ವಹಣೆ: ವಿಶ್ವಾಸ್ ಕೃಷ್ಣ, ಬೆಳಕು: ಕೃಷ್ಣಕುಮಾರ್ ನಾರ್ಣಕಜೆ, ವಿನ್ಯಾಸ: ಹೆಚ್ ಕೆ ದ್ವಾರಕಾನಾಥ್, ವಸ್ತ್ರವಿನ್ಯಾಸ: ನಂದಿನಿ ಕೆ ಆರ್, ಸಹ-ನಿರ್ದೇಶನ: ಮಹೇಶ್‌ಕುಮಾರ್, ಪರಿಕಲ್ಪನೆ, ನಿರ್ದೇಶನ: ಪ್ರಶಾಂತ್ ಹಿರೇಮಠ.

ತಾಲೀಮ್ | ಹಚ್ಚೇವು ಕನ್ನಡದ ದೀಪ
ರಿಹರ್ಸಲ್ | ಆದಿಮ ಮಕ್ಕಳಿಂದ ಹಕ್ಕಿಗೂಡು ನಾಟಕದ ತಾಲೀಮು
ರಿಹರ್ಸಲ್ | ಟಾಗೋರ್‌ ಅವರ ಅಭಿಸಾರಿಕೆ ನಾಟ್ಯ ಪ್ರಸ್ತುತಿಯ ತಾಲೀಮು
Editor’s Pick More