ಸಂಕಲನ | ರಾಜ್ಯ ರೈತರ ಸಾಲಮನ್ನಾ ವಿವಿಧ ಆಯಾಮಗಳ ವಿಶ್ಲೇಷಣಾ ಲೇಖನಗಳು

ಅಧಿಕಾರ ಹಿಡಿಯುವ ಹಿನ್ನೆಲೆಯಲ್ಲಿ ಚುನಾವಣೆಗೂ ಮುನ್ನ ರಾಜಕೀಯ ಪಕ್ಷಗಳು ಸಾಲ ಮನ್ನಾ ಕುರಿತು ಮಾತನಾಡಿದ್ದವು. ಈಗ ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡ ಮೇಲೆ ಈ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಸಾಲ ಮನ್ನಾ ಮಾಡುವ ಮುಂದಿರುವ ಸವಾಲು ಮತ್ತು ಸಾಧ್ಯತೆಗಳನ್ನು ಇಲ್ಲಿನ ಬರಹಗಳು ವಿಶ್ಲೇಷಿಸಿವೆ

ರೈತರ ಸಾಲ ಮನ್ನಾ ಮಾಡುವ ಒತ್ತಡಕ್ಕೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಸಿಲುಕಿದೆ. ನಷ್ಟದ ಸರಮಾಲೆಯಿಂದ ಕಂಗಾಲಾಗಿರುವ ರೈತರಿಗೆ ನೆರವಾಗುವುದು ಅನಿವಾರ್ಯವಾದರೂ, ಸುಮಾರು ೫೩ ಸಾವಿರ ಕೋಟಿ ರುಪಾಯಿ ಸಾಲ ಮನ್ನಾ ಮಾಡುವುದು ಹೇಗೆ? ಆರ್ಥಿಕ ತಜ್ಞರ ನಿಲುವು ಇಲ್ಲಿದೆ

ಉದ್ಯಮಿಗಳ ಸಾಲವನ್ನು ನಿಷ್ಕ್ರಿಯವೆಂದು ಘೋಷಿಸುವ ರಾಷ್ಟ್ರೀಕೃತ ಬ್ಯಾಂಕುಗಳಿಗೇಕೆ ರಾಜ್ಯ ಸರ್ಕಾರ ಸಹಾಯ ಮಾಡಬೇಕೆಂಬ ವಾದ ಮುನ್ನೆಲೆಗೆ ಬಂದಿದೆ. ಇಲ್ಲಿನ ರಾಷ್ಟ್ರೀಕೃತ ಬ್ಯಾಂಕುಗಳಿಗೆ ವಂಚಿಸಿರುವ ಉದ್ಯಮಿಗಳ ಒಟ್ಟು ಸಾಲ ರಾಜ್ಯ ರೈತರ ಸಾಲದ ಅರ್ಧದಷ್ಟಿದೆ ಎಂಬುದು ಗಮನಾರ್ಹ ಅಂಶ!

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು ನಾಡಿನಲ್ಲಿ ಶಾಂತಿ, ಸಹಭಾಳ್ವೆ ಹಾಗೂ ನೆಮ್ಮದಿ ನೆಲೆಸುವ ನೆಟ್ಟಿನಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಅವರ ಪತ್ರಿಕಾಗೋಷ್ಠಿಯ ಪ್ರಮುಖ ಅಂಶಗಳನ್ನು ಇಲ್ಲಿ ಕೊಡಲಾಗಿದೆ

ಸಹಕಾರಿ ಬ್ಯಾಂಕ್‌ಗಳ ೮,೧೨೫ ಕೋಟಿ ರೂ. ಸಾಲ ಮನ್ನಾ ಮಾಡಿ, ಅದನ್ನು ಸರಿದೂಗಿಸಲು ಸಿಎಂ ಸಿದ್ದರಾಮಯ್ಯ ಹೆಣಗುತ್ತಿದ್ದಾರೆ. ಇದರ ನಡುವೆ ಅಧಿಕಾರಕ್ಕೆ ಬಂದರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಮಾಡುವುದಾಗಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇದು ಕಾರ್ಯಸಾಧುವೇ?

ರಾಜ್ಯದ ರೈತರು ಪಡೆದಿರುವ ೧,೨೧,೬೧೭ ಕೋಟಿ ರು. ಕೃಷಿ ಸಾಲ ವಿವರವನ್ನು ಗುರುವಾರ ಪ್ರಕಟಿಸಿದ್ದೆವು. ಇದೀಗ ರಾಷ್ಟ್ರೀಕೃತ, ಖಾಸಗಿ, ಸಹಕಾರಿ, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಬೆಳೆ, ಚಿನ್ನಾಭರಣ ಸಾಲ ಮತ್ತು ಮಧ್ಯಮಾವಧಿ, ದೀರ್ಘಾವಧಿ ರೂಪದಲ್ಲಿ ನೀಡಿರುವ ಸಾಲ ವಿವರ ಇಲ್ಲಿದೆ

ರೈತರ ಸಾಲ ಮನ್ನಾ ವಿಚಾರದಲ್ಲಿ ಸಮ್ಮಿಶ್ರ ಸರ್ಕಾರ ಈವರೆಗೂ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಇದರ ಬೆನ್ನಲ್ಲೇ ರಾಷ್ಟ್ರೀಕೃತ, ಗ್ರಾಮೀಣ, ಖಾಸಗಿ, ಸಹಕಾರ ಬ್ಯಾಂಕ್‌ ಮತ್ತು ಸಹಕಾರ ಸಂಘಗಳಲ್ಲಿ ಹೊರ ಬಾಕಿ ಇರುವ ಸಾಲ ಮೊತ್ತದ ವಿವರ ಮುನ್ನೆಲೆಗೆ ಬಂದಿವೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ

ಕೃಷಿ ಕ್ಷೇತ್ರಕ್ಕೆ ಈ ಸಲದ ಕೇಂದ್ರ ಬಜೆಟ್‌ನಲ್ಲಿ ಆದ್ಯತೆ ಸಿಕ್ಕಿದೆ. ಆದರೆ, ರೈತರ ಸಾಲ ಮನ್ನಾ ಮಾಡದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದ ದೇಶದ ವಿವಿಧ ರಾಜ್ಯಗಳಲ್ಲಿ ಮುಂದೆ ಬರಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ವ್ಯತಿರಿಕ್ತ ಪರಿಣಾಮ ಎದುರಾಗುವ ಸಂಭವವಿದೆ

ರೈತರ ಸಾಲ ಮನ್ನಾ ಮಾಡಲೇಬೇಕಾದ ನೈತಿಕ ಜವಾಬ್ದಾರಿ ಹೊತ್ತಿರುವ ಸಿಎಂ ಕುಮಾರಸ್ವಾಮಿ ಅವರಿಗೆ ಪರ್ಯಾಯ ಮಾರ್ಗವಾಗಿ ಸಿದ್ದರಾಮಯ್ಯ ಅವರ ‘ರೈತ ಬೆಳಕು’ ಯೋಜನೆ ಇದೆ. ವ್ಯವಸ್ಥಿತವಾಗಿ ಜಾರಿ ಮಾಡಿದರೆ ಈ ಯೋಜನೆ ರೈತರ ಜೊತೆಗೆ ರಾಜ್ಯದ ಅಭಿವೃದ್ಧಿಗೂ ಪೂರಕ

ಸಿಎಂ ಕುಮಾರಸ್ವಾಮಿಯವರು ನಮ್ಮ ರಾಜ್ಯದ ಕೃಷಿಯಲ್ಲಿ ಇಸ್ರೇಲ್ ಕೃಷಿ ಯೋಜನೆಗಳನ್ನು ಜಾರಿಗೆ ತರಲಿದ್ದಾರಂತೆ. ಈ ಮೂಲಕ ರಾಜ್ಯ ಕೃಷಿಯನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸಲಿದ್ದಾರಂತೆ. ಇದೆಲ್ಲವೂ ಓಕೆ, ನಮ್ ಸಾಲ ಮನ್ನಾ ಯಾವಾಗ್‌ ಮಾಡ್ತೀರಾ ಅಂತ ರೈತರು ಕೇಳುತ್ತಿದ್ದಾರೆ. ಆದರೆ...

ನಮ್ಮ ಪಕ್ಷ ಅಧಿಕಾರಕ್ಕೆ ಬಂದ ೨೪ ಗಂಟೆಗಳಲ್ಲಿ ಸಾಲ ಮನ್ನಾ ಮಾಡುತ್ತೇನೆಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಕುಮಾರಸ್ವಾಮಿಯವರು ಇಂದು ಯಾವ ರೀತಿ ರೈತನ ಸಾಲ ಮನ್ನಾ ಮಾಡಬೇಕೆಂಬ ಗೊಂದಲದಲ್ಲಿದ್ದಾರೆ. ಈ ಗೊಂದಲಕ್ಕೆ ಕಾರಣ ಏನು ಎಂಬುದು ಇಂದಿನ ‘ಮುದ್ದಿ ಕಿ ಬಾತ್‌’

ಸಂಕಲನ | ಸಲಿಂಗ ಪ್ರೇಮ ಅಪರಾಧವಲ್ಲ ಎಂಬ ತೀರ್ಪು ಕುರಿತ ವರದಿ, ವಿಶ್ಲೇಷಣೆಗಳು
ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು
ಸಂಕಲನ | ನೋಟು ಅಮಾನ್ಯ ವೈಫಲ್ಯಕ್ಕೆ ಕನ್ನಡಿ ಹಿಡಿದ ಆರ್‌ಬಿಐ ಅಂಕಿ-ಅಂಶ
Editor’s Pick More