ಜಿಎಸ್‌ಟಿಗೆ ವರ್ಷ | ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಕುರಿತು ವಿಶ್ಲೇಷಣೆಗಳು

ತೆರಿಗೆ ವ್ಯವಸ್ಥೆಯಲ್ಲಿ ಐತಿಹಾಸಿಕ ಬದಲಾವಣೆ ತಂದಿರುವ ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದು ವರ್ಷ ಪೂರೈಸಿದೆ. ಈ ಹೊಸ ಪದ್ಧತಿಯಿಂದಾದ ಬದಲಾವಣೆ ಮತ್ತು ಪರಿಣಾಮಗಳನ್ನು ಇಲ್ಲಿರುವ ಲೇಖನಗಳು ವಿಶ್ಲೇಷಿಸಿವೆ

ತೆರಿಗೆ ವ್ಯವಸ್ಥೆಯಲ್ಲಿ ಐತಿಹಾಸಿಕ ಬದಲಾವಣೆ ತಂದಿರುವ ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದು ಒಂದು ವರ್ಷವಾಗುತ್ತಿದೆ. ಅತ್ಯಂತ ಸಂಕೀರ್ಣವಾದ ಜಿಎಸ್ಟಿ ವ್ಯವಸ್ಥೆ ಏಕೀಕೃತ ತೆರಿಗೆ ವ್ಯವಸ್ಥೆಯಾಗಿಲ್ಲ. ಹಾಗಾಗಿ ಸುಧಾರಿಸುವ ಅಗತ್ಯವಿದೆ. ಜಿಎಸ್‌ಟಿ ಸಾಧಕ-ಬಾಧಕಗಳ ಸರಣಿಯ ಮೊದಲ ಕಂತು ಇಲ್ಲಿದೆ

ಸರಕು ಮತ್ತು ಸೇವಾ ತೆರಿಗೆ ಜಾರಿಯ ಆರಂಭಿಕ ಲೋಪಗಳು, ಇದುವರೆಗಿನ ರಗಳೆಗಳೇನೇ ಇರಲಿ, ನೂತನ ವ್ಯವಸ್ಥೆಯಿಂದ ಜನಸಾಮಾನ್ಯರಿಗೆ ಒಂದಷ್ಟು ಅನುಕೂಲವಾಗಿದೆ. ತೆರಿಗೆ ದರ ಇಳಿಕೆ, ಉತ್ಪಾದಕತೆ ಹೆಚ್ಚಳ, ತೆರಿಗೆ ವಂಚನೆಗೆ ತಡೆ, ಭ್ರಷ್ಟಾಚಾರ ನಿಗ್ರಹ ಭಾಗಶಃ ಸಾಧ್ಯವಾಗಿದೆ

ಜಿಎಸ್ಟಿ ಜಾರಿಗೆ ಬಂದು ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅದರ ಸಾಫಲ್ಯ-ವೈಫಲ್ಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ವಿಶ್ವಬ್ಯಾಂಕ್ ತನ್ನ ಅರ್ಧವಾರ್ಷಿಕ ಭಾರತ ಅಭಿವೃದ್ಧಿ ವರದಿಯಲ್ಲಿ ಜಿಎಸ್ಟಿ ಸಂಕೀರ್ಣತೆ ಕುರಿತು ಪ್ರಸ್ತಾಪಿಸಿದೆ. ತೆರಿಗೆ ಹಂತಗಳ ಜೊತೆ ತೆರಿಗೆ ದರವೂ ಹೆಚ್ಚು ಎಂದಿದೆ

“ಸರಕು ಮತ್ತು ಸೇವಾ ತೆರಿಗೆ ಜಾರಿಗೆ ತಂದು 220 ದಿನಗಳು ಕಳೆದಿವೆ. ಆದರೆ, ಹೊಸ ತೆರಿಗೆ ಸುಧಾರಣೆ ವ್ಯವಸ್ಥೆಯಿಂದ ತೆರಿಗೆದಾರರಿಗೆ ಅನುಕೂಲಕ್ಕಿಂತ ಅನನಕೂಲವೇ ಹೆಚ್ಚಾಗುತ್ತಿದೆ. ತೆರಿಗೆ ವಿವರ ಸಲ್ಲಿಕೆ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ,” ಬಾಂಬೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ

ಸಂಕಲನ | ಸಲಿಂಗ ಪ್ರೇಮ ಅಪರಾಧವಲ್ಲ ಎಂಬ ತೀರ್ಪು ಕುರಿತ ವರದಿ, ವಿಶ್ಲೇಷಣೆಗಳು
ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು
ಸಂಕಲನ | ನೋಟು ಅಮಾನ್ಯ ವೈಫಲ್ಯಕ್ಕೆ ಕನ್ನಡಿ ಹಿಡಿದ ಆರ್‌ಬಿಐ ಅಂಕಿ-ಅಂಶ
Editor’s Pick More