ಸಂಕಲನ | ಅಟಲ್‌ ಬಿಹಾರಿ ವಾಜಪೇಯಿ ಕುರಿತ ವಿಡಿಯೋ, ಫೋಟೊ, ಬರಹಗಳು

ಮಾಜಿ ಪ್ರಧಾನ ಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ಅವರು ಗುರುವಾರ ನಿಧನರಾದರು. ಈ ಸಂದರ್ಭದಲ್ಲಿ ಅವರ ರಾಜಕೀಯ ಜೀವನ, ಅವರ ಅಧಿಕಾರಾವಧಿಯ ನೆನಪುಗಳು ಮತ್ತು ವೈಯಕ್ತಿಕ ಬದುಕಿನ ಸಂಗತಿಗಳನ್ನು ಇಲ್ಲಿನ ವಿಡಿಯೋ, ಫೋಟೊ, ಬರಹಗಳು ಕಟ್ಟಿಕೊಡುತ್ತವೆ

ಮಾತು ಮತ್ತು ಮೌನದ ಭಾಷೆಯ ಮೂಲಕ ಭಾರತೀಯ ರಾಜಕಾರಣ ಮತ್ತು ಸಂಸದೀಯ ಪಟುತ್ವದ ಇತಿಹಾಸದಲ್ಲಿ ತಮ್ಮದೇ ವೈಶಿಷ್ಟ್ಯ ಮೆರೆದ ಅಟಲ್ ಬಿಹಾರಿ ವಾಜಪೇಯಿ ಎಂಬ ಕವಿಹೃದಯದ ರಾಜಕಾರಣಿ, ಇದೀಗ ಶಾಶ್ವತ ಮೌನಕ್ಕೆ ಜಾರಿದ್ದಾರೆ. ಅವರ ಹೆಜ್ಜೆಗುರುತಿನತ್ತ ಇಣುಕುನೋಟ ಇಲ್ಲಿದೆ

ವಾಜಪೇಯಿ ಅವರಲ್ಲಿದ್ದ ಸೂಕ್ಷ್ಮ ರಾಜಕಾರಣಿಗೆ ಪಕ್ಷ ತಮ್ಮ ‘ಉದಾರವಾದಿ ಚಹರೆ’ ಅವಲಂಬಿಸಬೇಕಾದ ಅನಿವಾರ್ಯತೆಗಳಿವೆ ಎಂಬ ಅರಿವು ಇತ್ತು. ಅದೇ ರೀತಿ, ರಾಜಕಾರಣದಲ್ಲಿ ತಾವು ಸಾಗಬೇಕಾದ ದೂರಕ್ಕೆ ಪಕ್ಷ ಪ್ರತಿಪಾದಿಸುವ ‘ಉಗ್ರ ಹಿಂದುತ್ವವಾದ’ ಬಲ’ ಅತ್ಯವಶ್ಯ ಎನ್ನುವುದೂ ತಿಳಿದಿತ್ತು

ವಾಜಪೇಯಿ ಅವರಿಗೆ ಕರುನಾಡ ತುಂಬ ಒಡನಾಡಿಗಳು. ಮಗುವಿನ ಮೃದುತ್ವ ಮತ್ತು ಖಡ್ಗದ ಕಠೋರತೆ ಎರಡನ್ನೂ ತಮ್ಮ ವ್ಯಕ್ತಿತ್ವದಲ್ಲಿ ಹೊಂದಿದ್ದ ಅವರಿಗೆ ಸಮನಾದ ನಾಯಕರು ಇನ್ನು ಬಿಜೆಪಿಯಲ್ಲಿ ಹುಟ್ಟಿಬರುವುದು ಸಾಧ್ಯವಿಲ್ಲ ಎಂಬುದು ಅಟಲ್ ಅವರನ್ನು ಹತ್ತಿರದಿಂದ ಬಲ್ಲವರ ಮಾತು

ಆರ್ಥಿಕ ಉದಾರೀಕರಣದ ಫಲವನ್ನು ನಾವೆಲ್ಲ ಅನುಭವಿಸುತ್ತಿರುವ ಈ ಹೊತ್ತಿನಲ್ಲಿ ಅದನ್ನು ಬಿತ್ತಿದ ಪಿ ವಿ ನರಸಿಂಹ ರಾವ್, ಮನಮೋಹನ್ ಸಿಂಗ್ ಅವರಷ್ಟೇ ಮುಖ್ಯವಾಗಿ ಅದನ್ನು ಪೋಷಿಸಿ ಹೆಮ್ಮರವಾಗಲು ನೆರವಾದ ಅಟಲ್ ಬಿಹಾರಿ ವಾಜಪೇಯಿ ಅವರನ್ನು ನಿಜಕ್ಕೂ ನೆನೆಯಬೇಕಿದೆ

ಅಪೂರ್ವ ವಾಗ್ಮಿ ವಾಜಪೇಯಿ ಅವರು ಸಂವಾದದ ಮಹತ್ವವನ್ನು ಅರಿತಿದ್ದರು. ಸಮಕಾಲೀನ ಚಿಂತಕರು, ಮಾಧ್ಯಮಗಳು, ಚರ್ಚೆಗಳಿಂದ ಅವರೆಂದೂ ವಿಮುಖರಾದವರಲ್ಲ. ಅಧಿಕಾರ ಕಳೆದುಕೊಂಡ ಮೇಲೂ ವರ್ಚಸ್ಸಿನ ಮೆರಗು ಉಳಿಸಿಕೊಂಡಿದ್ದ ಅವರು ಮನ ಬಿಚ್ಚಿ ಮಾತನಾಡಿದ ೩ ಸಂದರ್ಶನ ಇಲ್ಲಿವೆ

ರಾಜಧರ್ಮ ವಿಚಾರದಲ್ಲಿ ನಿಷ್ಠುರವಾದಿಯಾದ ವಾಜಪೇಯಿ ಅವರು ಒಕ್ಕೂಟ ವ್ಯವಸ್ಥೆಯ ಪ್ರಬಲ ಪ್ರತಿಪಾದಕರಾಗಿದ್ದರು. ಕಾವೇರಿ, ಮಹದಾಯಿ ವಿವಾದಗಳಲ್ಲಿ ಮುತ್ಸದ್ಧಿತನ ಮೆರೆದಿದ್ದ ಅವರು, ಪ್ರಧಾನಿಯಾಗಿ ಮುಂದುವರಿಯುವ ವಿಚಾರದಲ್ಲಿ ದೇವೇಗೌಡರ ಬೆನ್ನಿಗೆ ನಿಲ್ಲಲು ನಿರ್ಧರಿಸಿದ್ದರಂತೆ!

ಮಾಜಿ ಪ್ರಧಾನಮಂತ್ರಿ ವಾಜಪೇಯಿ ಮದುವೆಯಾಗಿರಲಿಲ್ಲ. ಅದನ್ನವರು ಗೌಪ್ಯವಾಗಿ ಇಡಲಿಲ್ಲವಾದರೂ ಪತ್ರಕರ್ತೆ ಸಬಾ ನಕ್ವಿ ತಮ್ಮ ಪುಸ್ತಕದಲ್ಲಿ ವಾಜಪೇಯಿ ಅವರಿಗಿದ್ದ ಸಡಗರದ ಕುಟುಂಬ ಜೀವನದ ಬಗ್ಗೆ ಮಹತ್ವಪೂರ್ಣ ಒಳನೋಟ ನೀಡಿದ್ದಾರೆ. ಅದರ ಕೆಲವು ಆಯ್ದ ಭಾಗಗಳು ಇಲ್ಲಿವೆ

ಅಜಾತಶತ್ರುವೆಂದೇ ಹೆಸರಾಗಿದ್ದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಇನ್ನಿಲ್ಲ. 2009ರಲ್ಲಿ ಪಾರ್ಶ್ವವಾಯುಗೆ ತುತ್ತಾಗಿದ್ದ 93 ವರ್ಷದ ವಾಜಪೇಯಿ ಅವರು ಗುರುವಾರ ಸಂಜೆ 5 ಗಂಟೆ 5 ನಿಮಿಷಕ್ಕೆ ವಿಧಿವಶರಾದರೆಂದು ಏಮ್ಸ್‌ ಮೆಡಿಕಲ್ ಬುಲೆಟಿನ್ ತಿಳಿಸಿದೆ

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಸಂಕೀರ್ಣ ವ್ಯಕ್ತಿ. ನಾವಿಂದು ಅವರ ಉದಾರವಾದಿ ಗುಣವನ್ನು ಕೊಂಡಾಡುತ್ತಿದ್ದೇವೆ. ಆದರೆ ಅವರ ರಾಜಕೀಯ ಬದುಕನ್ನು ನೋಡುವಾಗ ಅವರು ಸಂಪ್ರದಾಯವಾದಿಯೋ, ಉದಾರವಾದಿಯೋ ಎಂಬ ಒಗಟು ಕಾಡುತ್ತದೆ. ಇಂದು ಬಿಜೆಪಿ ಅಧಿಕಾರದಲ್ಲಿರುವ ಸಂದರ್ಭದಲ್ಲಿ ನಾವು ಯಾವ ವಾತಾವರಣವನ್ನು ನೋಡುತ್ತಿದ್ದೇವೊ, ಅದು ವಾಜಪೇಯಿ ಅವರ ಕಾಲದಲ್ಲೂ ಇತ್ತು. ಹಗರಣಗಳಿದ್ದವು, ಖಂದಹಾರ್‌ನಂತಹ ಘಟನೆ ನಡೆಯಿತು, ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳು ನಡೆದವು, ಪತ್ರಿಕಾ ಸ್ವಾತಂತ್ರ್ಯ ಹರಣ ಸಂದರ್ಭಗಳು ಸೃಷ್ಟಿಯಾದವು. ಇಂಥ ಹಲವು ತಕರಾರುಗಳ ನಡುವೆಯೂ ನಡುವೆಯೂ ವಾಜಪೇಯಿ ತಮ್ಮ ವೈಯಕ್ತಿಕ ಬದುಕಿನ ಮೂಲಕ ಆಕರ್ಷಕವಾಗಿದ್ದರು ಎನ್ನುತ್ತಾರೆ ಸುಗತ ಶ್ರೀನಿವಾಸರಾಜು.

ಸಂಕಲನ | ಸಲಿಂಗ ಪ್ರೇಮ ಅಪರಾಧವಲ್ಲ ಎಂಬ ತೀರ್ಪು ಕುರಿತ ವರದಿ, ವಿಶ್ಲೇಷಣೆಗಳು
ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು
ಸಂಕಲನ | ನೋಟು ಅಮಾನ್ಯ ವೈಫಲ್ಯಕ್ಕೆ ಕನ್ನಡಿ ಹಿಡಿದ ಆರ್‌ಬಿಐ ಅಂಕಿ-ಅಂಶ
Editor’s Pick More