ಸಂಕಲನ | ನೊಬೆಲ್‌ ಪುರಸ್ಕೃತ ಲೇಖಕ ವಿ ಎಸ್‌ ನೈಪಾಲ್‌ ಕುರಿತ ಬರಹಗಳು

ಇತ್ತೀಚೆಗೆ ನಿಧನರಾದ ಖ್ಯಾತ ಇಂಗ್ಲಿಷ್‌ ಲೇಖಕ ವಿ ಎಸ್‌ ನೈಪಾಲ್‌ ಅವರ ಬದುಕು-ಬರಹ, ಭಾರತದೊಂದಿಗಿನ ನಂಟು, ಸಾಹಿತ್ಯಕ ಸಾಧನೆಗಳನ್ನು ಪರಿಚಯಿಸುವ ಲೇಖನಗಳ ಸಂಗ್ರಹ ಇಲ್ಲಿದೆ

ಟ್ರಿನಿಡಾಡ್‌ ಮೂಲದ ಲೇಖಕ ವಿ ಎಸ್‌ ನೈಪಾಲ್‌ ಈಗ ನೆನಪು. ಎಂಬತ್ತರ ದಶಕದಲ್ಲಿ ಮುಂಬೈನ ಭೂಗತ ಜಗತ್ತಿನ ಬಗ್ಗೆ ತಿಳಿಯಲು ಬಂದಿದ್ದಾಗ ಪತ್ರಕರ್ತ ಅಜಿತ್‌ ಪಿಳ್ಳೈ ಅವರನ್ನು ಮಾಫಿಯಾದ ಜನರ ಬಳಿಗೆ ಕರೆದೊಯ್ದಿದ್ದರು. ಆ ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ

ಸ್ವತಃ ಬರಿಗಾಲ ವಸಾಹತುಶಾಹಿ ಎಂದು ಬಣ್ಣಿಸಿಕೊಂಡು ಹಳ್ಳಿಗಾಡಿನ ಬಾಲ್ಯದಿಂದ ಇಂಗ್ಲೆಂಡಿನ ಉನ್ನತ ವರ್ಗಕ್ಕೆ ಪಯಣಿಸಿದ ನೈಪಾಲ್ ಅವರು ೨೦ನೇ ಶತಮಾನದ ಶ್ರೇಷ್ಠ ಬರಹಗಾರರಲ್ಲಿ ಒಬ್ಬರು. ಈ ಕುರಿತ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯ ಭಾವಾನುವಾದ ಇಲ್ಲಿದೆ

ವಿ ಎಸ್‌ ನೈಪಾಲರ ಬಗ್ಗೆ ಹಲವು ತಕರಾರುಗಳಿವೆ. ಆದರೆ ಲೇಖಕರಾಗಿ ಅವರನ್ನು ನಾವು ಉಪೇಕ್ಷೆ ಮಾಡಬಹುದೇ? ಶಿವರಾಮ ಕಾರಂತರಾಗಲಿ, ಗೋಪಾಲಕೃಷ್ಣ ಅಡಿಗರಾಗಲಿ, ಅವರ ರಾಜಕೀಯ ನಿಲುವಿನ ಕಾರಣಕ್ಕಾಗಿ ಒಂದು ತಲೆಮಾರಿನ ಕಣ್ಣು ತೆರೆಸುವ ವೈಚಾರಿಕ ಬರಹಗಳನ್ನು, ಕಾವ್ಯವನ್ನು ತಿರಸ್ಕರಿಸಲು ಸಾಧ್ಯವೇ? ಎಂದು ಕೇಳುತ್ತಾರೆ ಸುಗತ ಶ್ರೀನಿವಾಸರಾಜು

ನೊಬೆಲ್‌ ಪುರಸ್ಕೃತ ಸಾಹಿತಿ ನೈಪಾಲ್ ಭಾನುವಾರ‌ ನಿಧನರಾಗಿದ್ದಾರೆ. ಹಿಂದೆ, ಎಂ ಪಿ ಪ್ರಕಾಶ್‌ ಅವರು ಸಚಿವರಾಗಿದ್ದಾಗ ನೈಪಾಲ್‌ ಅವರನ್ನು ತಮ್ಮ ಮನೆಗೆ ಉಪಾಹಾರಕ್ಕೆ ಆಹ್ವಾನಿಸುತ್ತಾರೆ. ಈ ಸಂದರ್ಭವನ್ನು ನೈಪಾಲ್‌, ‘ಇಂಡಿಯಾ: ಎ ಮಿಲಿಯನ್‌ ಮ್ಯುಟನೀಸ್‌ ನೌ’ ಕೃತಿಯಲ್ಲಿ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ

ವಿವಾದಾತ್ಮಕ ಮಾತು ಮತ್ತು ಬರಹಗಳಿಂದ ಜಗತ್ತನ್ನು ಸೆಳೆದಿದ್ದ ಸರ್‌ ವಿದ್ಯಾಧರ ಸೂರಜ್‌ ಪ್ರಸಾದ್‌ ನೈಪಾಲ್‌ ಭಾನುವಾರ ಬೆಳಗ್ಗೆ ನಿಧನರಾದರು. ‘ಹೌಸ್‌ ಆಫ್‌ ಮಿಸ್ಟರ್‌ ಬಿಸ್ವಾಸ್‌’ ಸೇರಿದಂತೆ ಹಲವು ಮಹತ್ವದ ಕೃತಿಗಳನ್ನು ನೀಡಿದ ನೈಪಾಲ್‌ ಅವರಿಗೆ ಸಮಕಾಲೀನ ಲೇಖಕರು ನುಡಿ ನಮನ ಸಲ್ಲಿಸಿದ್ದಾರೆ

ಸಂಕಲನ | ಸಲಿಂಗ ಪ್ರೇಮ ಅಪರಾಧವಲ್ಲ ಎಂಬ ತೀರ್ಪು ಕುರಿತ ವರದಿ, ವಿಶ್ಲೇಷಣೆಗಳು
ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು
ಸಂಕಲನ | ನೋಟು ಅಮಾನ್ಯ ವೈಫಲ್ಯಕ್ಕೆ ಕನ್ನಡಿ ಹಿಡಿದ ಆರ್‌ಬಿಐ ಅಂಕಿ-ಅಂಶ
Editor’s Pick More