ಸಂಕಲನ | ನೋಟು ಅಮಾನ್ಯ ವೈಫಲ್ಯಕ್ಕೆ ಕನ್ನಡಿ ಹಿಡಿದ ಆರ್‌ಬಿಐ ಅಂಕಿ-ಅಂಶ

ನೋಟು ಅಮಾನ್ಯ ಕುರಿತ ಅಂಕಿ-ಅಂಶ ಹೊರಬಂದಿದ್ದು, ರದ್ದಾದ ನೋಟುಗಳ ಪೈಕಿ ಶೇ.೯೯.೩ರಷ್ಟು ಬ್ಯಾಂಕ್‌ಗಳಿಗೆ ಮರಳಿದೆ. ಹಾಗಾಗಿ ಅಮಾನ್ಯದಿಂದಾಗಿ ಆರ್ಥಿಕತೆ ಅಭಿವೃದ್ಧಿ ಆಗುತ್ತದೆ ಇತ್ಯಾದಿ ನಿರೀಕ್ಷೆಗಳು ಹುಸಿಯಾಗಿವೆ. ಈ ಕುರಿತು ‘ದಿ ಸ್ಟೇಟ್’ ಪ್ರಕಟಿಸಿದ ವಿಶ್ಲೇಷಣೆಗಳು ಇಲ್ಲಿವೆ 

ಅಪನಗದೀಕರಣದಿಂದ ದೇಶದ ಆರ್ಥಿಕತೆ ಅಭಿವೃದ್ಧಿ ಆಗುತ್ತದೆ, ತೆರಿಗೆ ಸಂಗ್ರಹ ಮತ್ತು ವ್ಯಾಪ್ತಿ ವಿಸ್ತಾರ, ಪ್ರಾಮಾಣಿಕ ತೆರಿಗೆ ರಾಷ್ಟ್ರವಾಗಿ ಉದಯಿಸುತ್ತದೆ ಎಂಬ ನಿರೀಕ್ಷೆಗಳು ಹುಸಿಯಾಗಿವೆ. ಹಾಗಾದರೆ ನಿಜವಾಗಿಯೂ ಆಗಿದ್ದೇನು? ಇಲ್ಲಿದೆ, ದೇಶದ ಆರ್ಥಿಕ ಪರಿಸ್ಥಿತಿಯ ವಸ್ತುಸ್ಥಿತಿ ಬಿಂಬಿಸುವ ಅಂಕಿ-ಅಂಶಗಳು

ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತಿತರರು ನೋಟು ಅಪಮೌಲ್ಯವನ್ನು ಸಮರ್ಥಿಸಿಕೊಂಡರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರೋಧಿಸಿದರು. ದೇಶದ ಪ್ರಮುಖ ಅರ್ಥಶಾಸ್ತ್ರಜ್ಞರಲ್ಲಿ ಈ ಕುರಿತು ಭಿನ್ನಮತ ಇದ್ದೇ ಇದೆ. ಕೆಲವರಿಗೆ ಇದು ಹಿತ ಎನಿಸಿದರೆ ಹಲವರಿಗೆ ಅಹಿತ ಎನಿಸಿದೆ

ನೋಟು ರದ್ದತಿಯಿಂದ ಆದ ನಷ್ಟದ ಅಂಕಿ-ಅಂಶ ಒಟ್ಟು ಮಾಡಿದರೆ ಅತಿದೊಡ್ಡ ಹಗರಣವೊಂದು ಎದುರಾಗುತ್ತಿತ್ತು. 2ಜಿ ಹಗರಣದಲ್ಲಿ ನಷ್ಟ ಆಗಿದೆ ಎನ್ನಲಾಗಿದ್ದು 1.76 ಲಕ್ಷ ಕೋಟಿ. ನೋಟು ರದ್ದತಿ ನಷ್ಟಕ್ಕೆ ಬಂದರೆ ೨ಜಿಯ 1.76ರ ಪಕ್ಕ ಹತ್ತಕ್ಕಿಂತ ಹೆಚ್ಚು ಸೊನ್ನೆ ಸೇರಿಸಬೇಕಾಗುತ್ತದೇನೋ!

ನೋಟ್‌ ಬ್ಯಾನ್‌ ಕ್ರಮವನ್ನು ಖೋಟಾನೋಟು, ಭಯೋತ್ಪಾದನೆಯ ವಿರುದ್ಧದ ಸಮರ ಎಂದೇ ಬಿಂಬಿಸಿಕೊಂಡು ಬರಲಾಗಿತ್ತು. ಆದರೆ ಮಧ್ಯದಾರಿಗೆ ಬಂದಾಗ ಎಡುವುತ್ತಿದ್ದೇವೆ ಎನಿಸಿ, ಹಣದುಬ್ಬರದ ವಿರುದ್ಧದ ಹೋರಾಟ ಎಂದರು. ಈಗ ನಗದುರಹಿತ ಆರ್ಥಿಕತೆಯೇ ಅದರ ಉದ್ದೇಶ ಎನ್ನುತ್ತಿದ್ದಾರೆ!

ಬರದಿಂದ ತತ್ತರಿಸಿದ್ದ ದಾಲ್ ಮಿಲ್‌ಗಳು ಇನ್ನೇನು ಚೇತರಿಸಿಕೊಂಡವು ಎಂಬ ಹಂತದಲ್ಲೇ ನೋಟು ರದ್ದತಿ ಆಯಿತು. ಇದು ಬೇಳೆ ಉದ್ಯಮಕ್ಕೆ ಭಾರಿ ಆಘಾತ ನೀಡಿತು. ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡಿನ ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸಿದ್ದ ಕಲಬುರಗಿಗೆ ಇದರಿಂದಾಗಿ ಭಾರಿ ಹೊಡೆತ ಬಿದ್ದಿದೆ

ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ ರಿಚರ್ಡ್‌ ಥೇಲರ್ ಅವರು ನೋಟು ಅಪನಗದೀಕರಣದ ಬಗ್ಗೆ ಮಾಡಿದ್ದ ಟ್ವೀಟ್‌, ಭಾರತದಲ್ಲಿ ಇಲ್ಲಿಯವರೆಗೂ ಸಾಕಷ್ಟು ಸದ್ದು ಮಾಡಿತ್ತು. ನೋಟು ಅಪನಗದೀಕರಣದ ಬಗ್ಗೆ ಥೇಲರ್ ಅವರ ನಿಜವಾದ ನಿಲುವೇನು ಎಂಬುದಕ್ಕೆ ಇಲ್ಲಿದೆ ಉತ್ತರ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಿರ್ದೇಶಕರಾಗಿರುವ ಅಹ್ಮದಾಬಾದಿನ ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಿಗೆ 2016ರ ನ.8ರಂದು ಅಮಾನ್ಯಗೊಂಡ ನೋಟುಗಳು ಅಧಿಕ ಪ್ರಮಾಣದಲ್ಲಿ ಜಮಾ ಆಗಿವೆ. ಆರ್‌ಟಿಐನಿಂದ ಈ ಸ್ಫೋಟಕ ಮಾಹಿತಿ ಹೊರಬಂದಿದೆ. ಈ ಕುರಿತ ‘ದಿ ವೈರ್’ ವರದಿಯ ಭಾವಾನುವಾದ ಇಲ್ಲಿದೆ

ಸಂಕಲನ | ಸಲಿಂಗ ಪ್ರೇಮ ಅಪರಾಧವಲ್ಲ ಎಂಬ ತೀರ್ಪು ಕುರಿತ ವರದಿ, ವಿಶ್ಲೇಷಣೆಗಳು
ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು
ಗಿರೀಶ್‌ ಕಾರ್ನಾಡ್‌ ವಿಡಿಯೋ ಸಂದರ್ಶನ | ನಾನೇಕೆ ‘ರಾಕ್ಷಸ ತಂಗಡಿ’ ಬರೆದೆ?
Editor’s Pick More