ಸಂಕಲನ | ಸಲಿಂಗ ಪ್ರೇಮ ಅಪರಾಧವಲ್ಲ ಎಂಬ ತೀರ್ಪು ಕುರಿತ ವರದಿ, ವಿಶ್ಲೇಷಣೆಗಳು

ದಶಕಗಳ ಸುದೀರ್ಘ ಹೋರಾಟದ ಬಳಿಕ ಸಲಿಂಗ ಪ್ರೇಮಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಸಲಿಂಗ ಪ್ರೇಮಿಗಳು ಸಮಾಜದಲ್ಲಿ ಇತರರಂತೆಯೇ ಸಮಾನ ಗೌರವ, ಅವಕಾಶಗಳನ್ನು ಪಡೆದುಕೊಳ್ಳುವುದಕ್ಕೆ ಕಾನೂನು ಅಡ್ಡಿಯಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ಸ್ಪಷ್ಟಪಡಿಸಿದೆ

ಸಲಿಂಗಪ್ರೇಮವನ್ನು ಶಿಕ್ಷಾರ್ಹ ಅಪರಾಧವನ್ನಾಗಿಸಿದ್ದ ಬ್ರಿಟಿಷರ ಕಾಲದ ಐಪಿಸಿ ಸೆಕ್ಷನ್‌ ೩೭೭ಕ್ಕೆ ಸುಪ್ರೀಂ ಕೋರ್ಟ್ ವಿದಾಯ ಹೇಳಿದೆ. ಆ ಮೂಲಕ, ವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ವಿಭಿನ್ನ ನೆಲೆ ರಕ್ಷಿಸುವಲ್ಲಿ ಮಹತ್ವದ ಹೆಜ್ಜೆ ಇರಿಸಿದೆ. ಆ ಮೂಲಕ ಸಲಿಂಗಿಗಳ ಘನತೆಯ ಬಾಳಿಗೆ ಮಹತ್ವದ ಮುನ್ನುಡಿ ಬರೆದಿದೆ

ಸೆಕ್ಷನ್ 377 ಅನ್ನು ರದ್ದು ಮಾಡಿ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಸಲಿಂಗಿಗಳು ದೇಶಾದ್ಯಂತ ಸಂಭ್ರಮ ಆಚರಿಸುತ್ತಿದ್ದಾರೆ. ಆದರೆ, ಈ ತೀರ್ಪಿಗೆ ಮೊದಲು ದೇಶದಲ್ಲಿ ಸಲಿಂಗ ಪ್ರೇಮಕ್ಕೆ ಸಂಬಂಧಿಸಿದ ಸಾಕಷ್ಟು ಚರ್ಚೆಗಳು ನಡೆದಿವೆ. ಸಲಿಂಗಿಗಳು ವಿವಾದಕ್ಕೂ ಈಡಾಗಿದ್ದಾರೆ.

ಸಲಿಂಗ ಪ್ರೇಮಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ಎಲ್‌ಜಿಬಿಟಿ ಸಮುದಾಯವನ್ನು ನಿರಾಳವಾಗಿಸಿದೆ. ಈ ಪ್ರೇಮ ಸಂಬಂಧಕ್ಕೆ ಸಾಂವಿಧಾನಿಕ ಸಮ್ಮತಿ ಸಿಕ್ಕಿದೆಯಾದರೂ ಸಮಾಜವೂ ಮುಕ್ತವಾಗಿ ಸ್ವೀಕರಿಸುವುದೇ ಎಂಬುದನ್ನು ಕಾದು ನೋಡಬೇಕಿದೆ. ಅಂತರ್ಧರ್ಮೀಯ ಗಂಡು-ಹೆಣ್ಣಿನ ನಡುವಿನ ಪ್ರೇಮವನ್ನೇ ಲವ್‌ ಜಿಹಾದ್‌ ಎಂದು ಕರೆಯುವ ಸಾಂಪ್ರದಾಯಿಕ ಮನಸ್ಥಿತಿ ಇರುವ ಈ ಹೊತ್ತಿನಲ್ಲಿ ಗಂಡು-ಗಂಡು ಮತ್ತು ಹೆಣ್ಣು-ಹೆಣ್ಣಿನ ಪ್ರೇಮವನ್ನು ಅಂತಃಕರಣದಿಂದ ನೋಡುವಂತಾಗಬೇಕಿದೆ ಎಂದು ವಿಶ್ಲೇಷಿಸುತ್ತಾರೆ ಸುಗತ ಶ್ರೀನಿವಾಸರಾಜು.

ಸಲಿಂಗಪ್ರೇಮವೂ ಸಹಜವೆಂದು, ಸಲಿಂಗಪ್ರೇಮಿಗಳಿಗೆ ಎಲ್ಲರಂತೆ ಹಕ್ಕುಗಳು ಲಭಿಸಬೇಕೆಂದು ಕಳೆದ ಎರಡು ದಶಕಗಳಿಂದ ಹೋರಾಟಗಳು ನಡೆಯುತ್ತಲೇ ಇವೆ. ಇಂದು ಸೆಕ್ಷನ್‌ ೩೭೭ ಕುರಿತು ಸುಪ್ರೀಂನ ಮಹತ್ವದ ತೀರ್ಪು ಹೊರಬೀಳುವಲ್ಲಿ ಸುದೀರ್ಘ ಹೋರಾಟ ಮತ್ತು ಹೋರಾಟಗಾರರ ಶ್ರಮವಿದೆ.

ಸಲಿಂಗ ಪ್ರೇಮ ಶಿಕ್ಷಾರ್ಹ ಅಪರಾಧ ಅಲ್ಲವೆಂದು ಸುಪ್ರೀಂ ಕೋರ್ಟ್‌ ತೀರ್ಪಿತ್ತಿದೆ. ಮನುಷ್ಯನ ಲೈಂಗಿಕ ಆಯ್ಕೆ ಮೂಲಭೂತ ಹಕ್ಕು ಎಂದು ಸುಪ್ರೀಂ ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರು, ಸಾಮಾಜಿಕ ಕಾರ್ಯಕರ್ತರು ‘ದಿ ಸ್ಟೇಟ್‌’ ಜೊತೆ ಸಂತಸ ಹಂಚಿಕೊಂಡಿದ್ದಾರೆ.

ಆಧಾರ್‌ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರದ ನಿಲುವು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕದ ನಿವೃತ್ತ ನ್ಯಾ.ಕೆ ಎಸ್‌ ಪುಟ್ಟಸ್ವಾಮಿ ೨೦೧೨ರಲ್ಲಿ ಪಿಐಎಲ್‌ ಸಲ್ಲಿಸಿದ್ದರು. ಆಧಾರ್‌ ಕಡ್ಡಾಯಗೊಳಿಸುವ ಕ್ರಮ ಖಾಸಗಿ ಹಕ್ಕಿಗೆ ವಿರುದ್ಧವಾದ ನಿಲುವು ಎಂದು ೨೦೧೭ರ ಆಗಸ್ಟ್‌ ೨೪ರಂದು ಸುಪ್ರೀಂ ಕೋರ್ಟ್‌ ಚಾರಿತ್ರಿಕ ತೀರ್ಪು ಪ್ರಕಟಿಸಿತ್ತು. ಇದೇ ತೀರ್ಪನ್ನು ಆಧರಿಸಿ ಸಲಿಂಗಕಾಮದ ಪರವಾಗಿ ಗುರುವಾರ ಸರ್ವೋಚ್ಚ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಇದರ ಕುರಿತು ೯೩ ವರ್ಷದ ಪುಟ್ಟಸ್ವಾಮಿ ಅವರು ‘ದಿ ಸ್ಟೇಟ್‌’ ಜೊತೆ ಮಾತನಾಡಿದ್ದಾರೆ.

ಸಲಿಂಗ ಪ್ರೇಮದ ಬಗ್ಗೆ ಮಡಿವಂತಿಕೆ ಇನ್ನೂ ಇದೆ. ಅದು ಸಾಹಿತ್ಯ, ಸಿನಿಮಾದಲ್ಲೂ ಕಾಣಿಸುತ್ತದೆ. ೩೭೭ನೇ ಕಾಯ್ದೆ ಕುರಿತು ಮಹತ್ವದ ತೀರ್ಪು ಹೊರಬೀಳುತ್ತಿರುವ ಹೊತ್ತಿನಲ್ಲಿ ಕನ್ನಡ ಸಾಹಿತ್ಯ, ಸಿನಿಮಾದಲ್ಲಿ ಸಲಿಂಗ ಪ್ರೇಮ ಕಥಾವಸ್ತುವಾಗಿ ಹೇಗೆ ಬಳಕೆಯಾಗಿದೆ ಎಂಬುದರತ್ತ ಇಣುಕುನೋಟ.

ದುಷ್ಟರನ್ನು ಶಿಕ್ಷಿಸುವ ದೇವರು ಪ್ರಾಣಿಯ ತಲೆಯನ್ನೇ ಹೊತ್ತು ಬಂದರೂ ನಂಬಿ ಪೂಜಿಸುತ್ತೇವೆ. ಅಂತಹ ಐತಿಹ್ಯ, ಪುರಾಣಗಳ ಕಾಲ್ಪನಿಕ ಪಾತ್ರಗಳನ್ನೇ ನಂಬುವ ನಾವು, ನಮ್ಮ ನಡುವೆಯೇ ಬದುಕುತ್ತಿರುವ ಕೆಲವರನ್ನು ಕಾಲ್ಪನಿಕ ಪಾತ್ರಗಳಂತೆ ನಡೆಸಿಕೊಳ್ಳುತ್ತಿದ್ದೇವೆ. ಏಕೆ? ಹೇಗೆ? ವಿಡಿಯೋ ನೋಡಿ.

ಮರಾಠಿಯ ‘ಮಿತ್ರಾಚಿ ಗೋಶ್ಟಾ’, ಹಿಂದಿಯ ‘ಫೈರ್‌’ ಸಲಿಂಗಿಗಳ ಕುರಿತ ಸಿನಿಮಾಗಳಿಗೆ ನಾಂದಿ ಹಾಡಿದವು. ನಂತರ ಹಿಂದಿ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಸಲಿಂಗಿ, ದ್ವಿಲಿಂಗಿ, ಲಿಂಗ ಪರಿವರ್ತನೆ ಮಾಡಿಕೊಂಡ ಸಮುದಾಯದ ಮೇಲೆ ಬೆಳಕು ಚೆಲ್ಲುವ ಹಲವು ಸಿನಿಮಾಗಳು ತಯಾರಾಗಿವೆ.

ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು
ಸಂಕಲನ | ನೋಟು ಅಮಾನ್ಯ ವೈಫಲ್ಯಕ್ಕೆ ಕನ್ನಡಿ ಹಿಡಿದ ಆರ್‌ಬಿಐ ಅಂಕಿ-ಅಂಶ
ಗಿರೀಶ್‌ ಕಾರ್ನಾಡ್‌ ವಿಡಿಯೋ ಸಂದರ್ಶನ | ನಾನೇಕೆ ‘ರಾಕ್ಷಸ ತಂಗಡಿ’ ಬರೆದೆ?
Editor’s Pick More