‘ಬಿಳೀ ಹೆಂಡ್ತಿ’ ಮುಹೂರ್ತ

ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಬಿಳೀ ಹೆಂಡ್ತಿ’ ಚಿತ್ರದ ಮುಹೂರ್ತ ಸಂದರ್ಭ. ಶಿಕ್ಷಣ ತಜ್ಞ, ವಿಚಾರವಾದಿ ಎಚ್‌ ನರಸಿಂಹಯ್ಯ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದ್ದರು. ನಿರ್ದೇಶಕ ಪುಟ್ಟಣ್ಣ, ನಿರ್ಮಾಪಕ ಮುದ್ದುಕೃಷ್ಣ, ನಟ ಲೋಕನಾಥ್‌ ಚಿತ್ರದಲ್ಲಿದ್ದಾರೆ. ಮ ನಾ ಮೂರ್ತಿ ಅವರ ಕಾದಂಬರಿಯನ್ನು ಆಧರಿಸಿದ ಈ ಚಿತ್ರಕ್ಕೆ ವಿಜಯ ಭಾಸ್ಕರ್ ಸಂಗೀತ ಸಂಯೋಜಿಸಿದ್ದಾರೆ. ಇಂದು (ಜ.31) ಎಚ್‌ ನರಸಿಂಹಯ್ಯನವರು ಅಗಲಿದ ದಿನ.

ಭವಾನಿ ಲಕ್ಷ್ಮೀನಾರಾಯಣ
ಪ್ರಗತಿ ಅಶ್ವತ್ಥ ನಾರಾಯಣ
Editor’s Pick More