ತಾಯಿ ಮತ್ತು ಮಗಳ ನಡುವಿನ ಆರ್ದ್ರ ಭಾವಲೋಕವನ್ನು ಕಟ್ಟಿಕೊಡುವ ಕಿರುಚಿತ್ರ

ಕನ್ನಡದ ಜನಪ್ರಿಯ ನಟ ಸುದೀಪ್ ಅವರ ಸೋದರಿ ಸಂಬಂಧಿ ಸಂಚಿತ್‌ ಸಂಜೀವ್ ನಿರ್ದೇಶಿಸಿರುವ ಈ ಚಿತ್ರ, ತಾಯಿ ಮತ್ತು ಮಗಳ ನಡುವಿನ ಸಂಬಂಧ ಮತ್ತು ಪರಸ್ಪರವಾಗಿ ಹಂಬಲಿಸುವ ಕತೆಯನ್ನು ಬಿಚ್ಚಿಡುತ್ತದೆ. ಸ್ವತಂತ್ರವಾಗಿ ಬದುಕುತ್ತಿರುವ ಮಗಳು, ಒಂಟಿಯಾಗಿರುವ ತಾಯಿಯ ಭಾವಲೋಕವನ್ನು ಆರ್ದ್ರವಾಗಿ ಕಟ್ಟಿಕೊಡುತ್ತದೆ. ಕತ್ತಲೆ ಮತ್ತು ಬೆಳಕಿನಲ್ಲಿ ಚಿತ್ರಿತವಾಗಿರುವ ಇಲ್ಲಿನ ದೃಶ್ಯಗಳು ತಾಯಿ ಮಗಳ ಮನೋಲೋಕದ ತಾಕಲಾಟಗಳನ್ನು ಬಿಚ್ಚಿಡುವಂತಿವೆ. ತಾಯಿಯಾಗಿ ಸುಧಾ ಬೆಳವಾಡಿ, ಮಗಳಾಗಿ ಶ್ರದ್ಧಾ ಶ್ರೀನಾಥ್‌ ನಟಿಸಿದ್ದಾರೆ. ಅಭಿಷೇಕ್‌ ಎಸ್ ಎನ್ ಸಂಗೀತ ನೀಡಿದ್ದಾರೆ.

ಸ್ಟೀಫೆನ್‌ ಹಾಕಿಂಗ್‌ ಬದುಕು ಮತ್ತು ವಿಜ್ಞಾನ ಕುರಿತ ಪಿಬಿಎಸ್‌ ಸಾಕ್ಷ್ಯಚಿತ್ರ
ಹಾಕಿಂಗ್‌ ಅವರ ‘ಬ್ರೀಫ್‌ ಹಿಸ್ಟರಿ ಆಫ್‌ ಟೈಮ್‌’ ಆಧರಿಸಿದ ಬಿಬಿಸಿ ಸಾಕ್ಷ್ಯಚಿತ್ರ
ಇಪ್ಪತ್ತು ವರ್ಷಗಳ ವೃತ್ತಿ ಬದುಕನ್ನು ಚಿತ್ರಿಸುವ ಡಿಯರ್‌ ಬ್ಯಾಸ್ಕೆಟ್‌ಬಾಲ್‌
Editor’s Pick More