ನಗರದ ಹೆಣ್ಣಿನ ಅಂತರಂಗದ ಪ್ರಶ್ನೆಗಳನ್ನು ಎತ್ತಿ ಹಿಡಿವ ಅಂಜಲಿ

ಕ್ಯಾಬ್ವೊಂದನ್ನು ಹತ್ತುವ ನಗರದ ಹೆಣ್ಣು ಮಗಳೊಬ್ಬಳು, ಕುಡಿದು, ಸಿಗರೇಟು ಸೇದುತ್ತಾ, ಭವಿಷ್ಯ, ಒಂಟಿತನ, ಸಮಾಜ ಚೌಕಟ್ಟುಗಳ ಕುರಿತು ಡ್ರೈವರ್ನೊಂದಿಗೆ ಹರಟುತ್ತಾಳೆ. ಕ್ಯಾಬ್ ಇಳಿದ ಮೇಲೆ ಆಕೆ ಏನಾಗುತ್ತಾಳೆ? ಆ ಡ್ರೈವರ್ ಮನಸ್ಸಿನಲ್ಲಿ ಯಾವ ಭಾವಗಳು ಹರಿದಾಡುತ್ತವೆ?

ವಿವೇಕ್ ಆರಗ ಮತ್ತು ಕಾರ್ತಿಕ್ ರಾವ್ ಜಂಟಿಯಾಗಿ ನಿರ್ದೇಶಿಸಿರುವ ಅಂಜಲಿ, ನಗರದಲ್ಲಿರುವ ದುಡಿಯುವ ಒಂಟಿ ಮಹಿಳೆಯ ತೊಳಲಾಟಗಳನ್ನು ಬಿಚ್ಚಿಡುತ್ತದೆ. ಹೆಣ್ಣಿನ ಬಗ್ಗೆ ಸಮಾಜ ಸೃಷ್ಟಿಸಿರುವ ಚೌಕಟ್ಟುಗಳು, ಸಹಜವಾಗಿ ವ್ಯಕ್ತವಾಗಿಬಿಡುವ ಅಭಿಪ್ರಾಯಗಳನ್ನು ಚರ್ಚಿಸುತ್ತದೆ. ಹೆಚ್ಚು ಓದಿರದ ಕ್ಯಾಬ್ ಡ್ರೈವರ್, ಅತಿ ವಿದ್ಯಾವಂತನಿಂದ ತನ್ನ ಅಕ್ಕ ಅನುಭವಿಸಿದ ಶೋಷಣೆ ಮತ್ತು ಆಕೆಯ ಸಾವನ್ನು ನೆನಪಿಸಿಕೊಳ್ಳುವ ಯುವತಿ ಸಾವಿನ ಕುರಿತು ಮಾತನಾಡುತ್ತಾಳೆ.

ಬದುಕಿನ ಪಾಠ ಕಲಿತ ಡ್ರೈವರ್ ನೀಡುತ್ತಾ ಹೋಗುವ ಸಮಾಧಾನಗಳಿಂದ ನಿರಾಳ ಆದಂತೆ ಕಾಣುವ ಆ ಯುವತಿ ಆಮೇಲೆ ಏನಾಗುತ್ತಾಳೆ? ಡ್ರೈವರ್ ಆಕೆಯನ್ನು ಮತ್ತೆ ನೋಡುತ್ತಾನೆ ಎಂಬುದನ್ನು ಚಿತ್ರ ನೋಡಿ ತಿಳಿಯಬೇಕು. ಸರಳವಾದ ನಿರೂಪಣೆ ಚಿತ್ರವನ್ನು ನೋಡಿಸಿಕೊಳ್ಳುತ್ತದೆ.

ಚಿತ್ರದುದ್ದಕ್ಕೂ ಕನ್ನಡದ ಪ್ರಸಿದ್ಧ ಕವಿತೆಗಳನ್ನು ಬಳಸಿಕೊಂಡಿದ್ದು ಚಿತ್ರ ನೋಡುವ ಅನುಭವವನ್ನು ಆಪ್ತಗೊಳಿಸುತ್ತದೆ. ಕ್ಯಾಬ್ ಡ್ರೈವರ್ ಆಗಿ ಅಜಯ್ ರಾಜ್, ಯುವತಿಯಾಗಿ ನಾಗಶ್ರೀ ಉತ್ತಮವಾಗಿ ನಟಿಸಿದ್ದಾರೆ. ಅಭಿಷೇಕ್ ಅಯ್ಯಂಗಾರ್ ಚಿತ್ರ ಕತೆ ಬರೆದಿದ್ದು, ವಿವೇಕ್ ಆರಗ ಛಾಯಾಗ್ರಹಣ ಮಾಡಿದ್ದಾರೆ. ಅಭಿಷೇಕ್ ನಾರಾಯಣ್ ಸಂಗೀತ ಆಪ್ತವಾಗಿದೆ.

ಶಾಲಾ ದಿನಗಳನ್ನು ನೆನಪಿಸುವ ಹೆಡ್‌ಮಾಸ್ಟರ್‌ ವಾಮನ್‌ ರಾವ್‌
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
ಮಹಾತ್ಮ ಬದುಕನ್ನು ಕಟ್ಟಿಕೊಡುವ ಐದೂವರೆ ಗಂಟೆ ಸಾಕ್ಷ್ಯಚಿತ್ರ
Editor’s Pick More