ಹೆಣ್ಣಿನ ನಿಗೂಢವರಿಯದ ಅಸಹಾಯಕ ಗಂಡಿನ ಚಡಪಡಿಕೆ, ಅವ್ಯಕ್ತ

ಮತ್ತೊಂದಕ್ಕೆ ಕೈಚಾಚುವ, ಮೋಸ ಹೋದ ಹಾಗೂ ಅನಿವಾರ್ಯತೆಗಳ ಸುಳಿಯಲ್ಲಿ ಹೆಣ್ಣು ಇದ್ದಾಳೆ. ಆದರೆ ಒಂಟಿ ಗಂಡಸೊಬ್ಬ, ಹೆಣ್ಣಿನ ಭಿನ್ನ ಮುಖಗಳನ್ನು ನೋಡಿ ಹೇಗಾಗುತ್ತಾನೆ?

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್‌ ನಟಿಸಿರುವ ‘ಅವ್ಯಕ್ತ’ ಗಂಡು ಮತ್ತು ಹೆಣ್ಣಿನ ಸಂಬಂಧ ಕುರಿತ ಕುತೂಹಲ ಮತ್ತು ಅದರ ಹಿಂದೆ ಹಲವು ಮುಖಗಳ ಸತ್ಯಗಳು ಇರಬಹುದು ಎಂಬುದನ್ನು ಅನಾವರಣ ಮಾಡಲು ಯತ್ನಿಸುತ್ತದೆ.

ಅವಿವಾಹಿತ ಗಂಡೊಬ್ಬ ಅನಾಮಿಕ ಪತ್ರವೊಂದರ ಮೂಲಕ ಸೆಳೆದ ಹೆಣ್ಣಿನ ಹುಡುಕಾಟದಲ್ಲಿ ಮೂವರು ಮಹಿಳೆಯರನ್ನು ಭೇಟಿಯಾಗುವುದು, ಅವರ ಹಿನ್ನೆಲೆ, ವರ್ತಮಾನವನ್ನು ಅರಿತು ಚಡಪಡಿಸುವ ಗಂಡಸನ್ನು ಚಿತ್ರಿಸುತ್ತದೆ.

ಶಿವಕುಮಾರ್‌ ಮಾವಲಿ ಬರೆದ ಕಥೆಯನ್ನು ಸಾಸ್ವೆಹಳ್ಳಿ ಸತೀಶ್‌ ನಿರ್ದೇಶಿಸಿದ್ದಾರೆ. ವಿಶ್ವಜಿತ್‌ ರಾವ್ ಛಾಯಾಗ್ರಹಣ, ರಾಕಿಸೋನು ಸಂಗೀತ ನೀಡಿದ್ದಾರೆ.

ಸೆಪ್ಟೆಂಬರ್‌ 11ರ ಅವಳಿ ಕಟ್ಟಡ ದಾಳಿ ಹಿಂದಿನ ಸಂಚು ಬಿಚ್ಚಿಡುವ ‘ಜೈಗೈಸ್ಟ್‌’
ಮನುಕುಲದ ಕುತೂಹಲ ಹೊತ್ತು ಮಂಗಳನ ಅಂಗಳಕ್ಕಿಳಿದ ಕ್ಯೂರಿಯಾಸಿಟಿ
ನಮ್ಮೊಂದಿಗಿರುವ ನಾವಿರಬೇಕಾದ ಕ್ಷಣಗಳನ್ನು ನೆನಪಿಸುವ ‘ಮನನ’
Editor’s Pick More