ಸಾಮಾಜಿಕ ಕಾಳಜಿಯ ಸಂದೇಶವನ್ನು ಥ್ರಿಲ್ಲರ್‌ ರೂಪದಲ್ಲಿ ಕಟ್ಟಿಕೊಡುವ ಮುಕುರ

ಒಂದು ಸಾಮಾಜಿಕ ಸಂದೇಶವನ್ನು ಸೃಜನಶೀಲವಾಗಿ ಹೇಳಿದಾಗ ಹೆಚ್ಚು ಜನರನ್ನು ಮತ್ತು ಹೆಚ್ಚು ಪರಿಣಾಮಕಾರಿಯಾಗಿ ತಲುಪುತ್ತದೆ. ಮುಕುರ ಅಂಥದ್ದೇ ಒಂದು ಪ್ರಯತ್ನ

ಸಸ್ಪೆನ್ಸ್, ಹಾರರ್ ಶೈಲಿಯ ಕಥಾ ಹಂದರವನ್ನು ಹೊಂದಿರುವ ಚಿತ್ರವಿದು. ಸಾರ್ವಜನಿಕ ಹಿತಾಸಕ್ತಿಯ ಎಷ್ಟೇ ಘೋಷಣೆಗಳು, ಹೋರ್ಡಿಂಗ್‌ಗಳಿದ್ದರೂ ಅವು ಜನರ ಮನಸ್ಸಿನಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ಸೃಜನಾತ್ಮಕವಾಗಿ ಕಟ್ಟಿಕೊಟ್ಟಾಗ ಅದು ಪ್ರಭಾವ ಬೀರಬಹುದು ಎಂಬ ನಂಬಿ ನಿರ್ದೇಶಕದ್ದು. ಹಾಗಾಗಿ ‘ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಬೇಡಿ’ ಎಂಬುದನ್ನು ಈ ಕಿರುಚಿತ್ರ ಕಟ್ಟಿಕೊಡುತ್ತದೆ.

ಕಾರು ಚಾಲನೆ ಮಾಡುವಾಗ ಮೊಬೈಲ್‍ನಲ್ಲಿ ಮಾತನಾಡುತ್ತಾ ಅಪಘಾತ ಮಾಡುವ ನಾಯಕ, ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ. ಆದರೆ ತನ್ನಿಂದ ಆದ ತಪ್ಪು ಪಾಪಪ್ರಜ್ಞೆಯಾಗಿ ಕಾಡಲಾರಂಭಿಸುತ್ತದೆ. ಟಿ.ವಿ.ಯಲ್ಲಿ, ದಿನಪತ್ರಿಕೆಗಳಲ್ಲಿ ಅಪಘಾತದ ಸುದ್ದಿಗಳನ್ನು ನೋಡಿದಾಗ ಅವನಲ್ಲಿ ಪಾಪಪ್ರಜ್ಞೆ ಹೆಚ್ಚುತ್ತದೆ.

ನಾಗೇಂದ್ರ ಕರೋಹಟ ಕತೆ ಬರೆದು ನಿರ್ದೇಶಿಸಿದ್ದಾರೆ. ಉಜ್ವಲ್ ಗೌಡ ಸಂಕಲಿಸಿದ್ದಾರೆ. ಛಾಯಾಗ್ರಹಣ ಶರತ್ ನಾಯಕ್, ಸಂಗೀತ ವಿಜಯ್ ರಾಜ್ ನೀಡಿದ್ದಾರೆ. ಆರಂಭ ತಂಡದ ಈ ನಿರ್ಮಾಣದಲ್ಲಿ ವಿನಯ್ ಪ್ರಸಾದ್, ರೋಹಿಣಿ ನಾಗೇಶ್, ಶ್ರೀಕಾಂತ್, ಪ್ರಣಯಮೂರ್ತಿ, ರಘುನಂದನ್, ಬೇಬಿ ಧೃತಿ ನಟಿಸಿದ್ದಾರೆ.

ಶಾಲಾ ದಿನಗಳನ್ನು ನೆನಪಿಸುವ ಹೆಡ್‌ಮಾಸ್ಟರ್‌ ವಾಮನ್‌ ರಾವ್‌
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
ಮಹಾತ್ಮ ಬದುಕನ್ನು ಕಟ್ಟಿಕೊಡುವ ಐದೂವರೆ ಗಂಟೆ ಸಾಕ್ಷ್ಯಚಿತ್ರ
Editor’s Pick More