ಎಲ್ಲ ಕಷ್ಟಗಳನ್ನು ಹೀರಿ ಹೂ ಅರಳಿಸುವ ಬೇರಿನಂತೆ ಅಮ್ಮ

ತಾಯಿ-ಮಗಳ ಕತೆ ಇದು. ಮಗಳಿಗೆ ಯಾವ ಕೊರತೆ ಕಾಡದಂತೆ ನೋಡಿಕೊಳ್ಳುವ ತಾಯಿ. ಓದಿ ವೈದ್ಯಳಾಗಬೇಕೆಂಬ ಆಸೆಯ ಮಗಳು. ಮಗಳ ಆಸೆಯನ್ನು ಈಡೇರಿಸುವುದಕ್ಕೆ ಎಲ್ಲ ಕೆಲಸಗಳನ್ನು ಮಾಡುತ್ತಾ, ಅವಳ ಏಳಿಗೆಯನ್ನು ನೋಡುವುದರಲ್ಲೇ ತಾಯಿಗೆ ಸಂತೋಷ. ಬೆಳೆದ ಮಗಳು, ತಾಯಿಯ ಎಲ್ಲ ತ್ಯಾಗಗಳನ್ನು ನೆನಪಿಸಿಕೊಳ್ಳುತ್ತಾಳೆ, ಕೃತಜ್ಞಳಾಗುತ್ತಾಳೆ. ಸಚಿನ್‌ ಬಸ್ರೂರು ನಿರ್ದೇಶಿರುವ ಈ ಕಿರುಚಿತ್ರ ಸರಳವಾದ ಕಥೆಯನ್ನೇ ಆಪ್ತವಾಗಿ ಕಟ್ಟಿಕೊಡುವ ಯತ್ನ ಮಾಡಿದೆ. ತಾಯಿಯ ತ್ಯಾಗದ ಗುಣವನ್ನು ಒಂಬತ್ತು ನಿಮಿಷಗಳ ಕಿರುಚಿತ್ರದಲ್ಲಿ ಸೆರೆಹಿಡಿಯುವ ಪ್ರಯತ್ನ ಮಾಡಿದ್ದಾರೆ. ತಾಯಿಯಾಗಿ ಸಂಜನಿ ಶೆಟ್ಟಿ, ಮಗಳಾಗಿ ಶ್ಲಾಘಾ ಅವರ ನಟನೆ ಚೆನ್ನಾಗಿದೆ. ಸಚಿನ್‌ ಅವರದ್ದೇ ಸಂಗೀತವಿದ್ದು, ಆಪ್ತವಾಗಿದೆ.

ಮಕ್ಕಳ ಎಲ್ಲ ಹುಡುಗಾಟಿಕೆಗಳನ್ನು ತಿಳಿದೂ ಪೊರೆಯುವ ತಾಯಿ
ತಾಳ್ಮೆ ಕಳೆದುಕೊಂಡ ಕ್ಷಣದ ಅವಾಂತರವನ್ನು ಚಿತ್ರಿಸುವ ಭಾರತೀಪುರ ಕ್ರಾಸ್‌
ಸಮಾನತೆಯ ಆಶಯಗಳನ್ನು ಜಗತ್ತಿಗೆ ನೀಡಿದ ಕಾರ್ಲ್‌ ಮಾರ್ಕ್ಸ್‌
Editor’s Pick More