ಮಕ್ಕಳ ಎಲ್ಲ ಹುಡುಗಾಟಿಕೆಗಳನ್ನು ತಿಳಿದೂ ಪೊರೆಯುವ ತಾಯಿ

ಮಕ್ಕಳೆಂದ ಮೇಲೆ ಅವರ ಆಸೆಗಳಿಗೆ, ಸಂತೋಷಗಳಿಗೆ, ಬಯಕೆಗಳಿಗೆ ಮಿತಿ ಇರುವುದಿಲ್ಲ. ಆದರೆ ಅದನ್ನು ತಂದೆ-ತಾಯಿ ಎದುರು ಹೇಳಿ ಮಾಡುವಷ್ಟು ಧೈರ್ಯವೂ ಇರುವುದಿಲ್ಲ. ಆದರೆ ತಾಯಿಗೆ ಎಲ್ಲವೂ ತಿಳಿಯುತ್ತಿರುತ್ತದೆ ಎನ್ನುತ್ತದೆ ಈ ಕಿರುಚಿತ್ರ. ತನ್ನ ಖುಷಿಗೋಸ್ಕರ ಸುಳ್ಳು ಹೇಳಿ ತಾಯಿಯಿಂದ ಹಣ ಪಡೆಯುವ ಮಗ, ಮೋಜು ಮಾಡಬೇಕೆಂದುಕೊಂಡಿರುತ್ತಾನೆ. ಆದರೆ ದಾರಿ ಮಧ್ಯೆ ನಡೆದ ಘಟನೆಯೊಂದು ಅವನ ಮನಸ್ಸನ್ನು ಪರಿವರ್ತಿಸುತ್ತದೆ. ತಾಯಿಯ ದೊಡ್ಡ ಗುಣ ಅರ್ಥವಾಗುತ್ತದೆ. ಸಂತೋಷ್ ಜಿ ಗೋಪಾಲ್‌ ನಿರ್ದೇಶನ ಈ ಚಿತ್ರ ತಾಯಂದಿರ ದಿನಕ್ಕೆಂದೇ ಸಿದ್ಧವಾಗಿದೆ. ಗಿಮ್ಮಿಕ್‌ ಕೀಸ್‌ ನಿರ್ಮಿಸಿರುವ ಚಿತ್ರದಲ್ಲಿ ಅರುಣಾ ಬಾಲ್‌ರಾಜ್‌, ಮಾತಿ ಸರದೇಶಪಾಂಡೆ, ಅಭಿಮನ್ಯು ಪ್ರಜ್ಞಲ್‌, ಮಂಜುನಾಥ್‌, ದಿವ್ಯಶ್ರೀ, ದೀಪಕ್‌ ಯಾದವ್‌, ಸಿದ್ಧಾರ್ಥ್‌ ವರ್ಮಾ ನಟಿಸಿದ್ದಾರೆ.

ಎಲ್ಲ ಕಷ್ಟಗಳನ್ನು ಹೀರಿ ಹೂ ಅರಳಿಸುವ ಬೇರಿನಂತೆ ಅಮ್ಮ
ತಾಳ್ಮೆ ಕಳೆದುಕೊಂಡ ಕ್ಷಣದ ಅವಾಂತರವನ್ನು ಚಿತ್ರಿಸುವ ಭಾರತೀಪುರ ಕ್ರಾಸ್‌
ಸಮಾನತೆಯ ಆಶಯಗಳನ್ನು ಜಗತ್ತಿಗೆ ನೀಡಿದ ಕಾರ್ಲ್‌ ಮಾರ್ಕ್ಸ್‌
Editor’s Pick More