ಸೆಪ್ಟೆಂಬರ್‌ 11ರ ಅವಳಿ ಕಟ್ಟಡ ದಾಳಿ ಹಿಂದಿನ ಸಂಚು ಬಿಚ್ಚಿಡುವ ‘ಜೈಗೈಸ್ಟ್‌’

ಪೀಟರ್‌ ಜೋಸೆಫ್‌ ನಿರ್ದೇಶಿಸಿದ ಈ ಸಾಕ್ಷ್ಯಚಿತ್ರ ಧರ್ಮ, ರಾಜಕಾರಣ, ಭಯೋತ್ಪಾದನೆ, ಆರ್ಥಿಕ ನಿಯಂತ್ರಣ ಕುರಿತು ವಿವಿಧ ರೀತಿಯ ಸಂಚುಗಳನ್ನು ಬಿಚ್ಚಿಡುತ್ತದೆ. ಜೂನ್‌ ೨೦೦೭ರಲ್ಲಿ ಬಿಡುಗಡೆಯಾದ ಈ ಸಾಕ್ಷ್ಯಚಿತ್ರ ಬಹಳಷ್ಟು ಚರ್ಚೆ ಹುಟ್ಟುಹಾಕಿತ್ತು. ಸೆಪ್ಟೆಂಬರ್‌ ೧೧ರಂದು ವರ್ಲ್ಡ್‌ ಟ್ರೇಡ್‌ ಸೆಂಟರ್‌ ಮೇಲೆ ನಡೆದ ದಾಳಿಯನ್ನು ಕುರಿತು ಹಲವು ಹೊಸ ಸಂಗತಿಗಳನ್ನು ಇದು ಪ್ರಸ್ತಾಪಿಸುತ್ತದೆ. ದಾಳಿಯ ಹಿಂದೆ ನಡೆದಿರಬಹುದಾದ ಸಂಚಿನ ಸಾಧ್ಯತೆಗಳನ್ನು ಕುರಿತೂ ಚರ್ಚಿಸುತ್ತದೆ. ಎರಡು ಗಂಟೆಗಳ ಅವಧಿಯ ಈ ಸಾಕ್ಷ್ಯಚಿತ್ರ, ನಿರ್ಮಾಣದ ಕಾರಣಕ್ಕೂ ಹೆಚ್ಚು ಮೆಚ್ಚುಗೆ ಪಡೆದಿದೆ.

ಶಾಲಾ ದಿನಗಳನ್ನು ನೆನಪಿಸುವ ಹೆಡ್‌ಮಾಸ್ಟರ್‌ ವಾಮನ್‌ ರಾವ್‌
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
ಮಹಾತ್ಮ ಬದುಕನ್ನು ಕಟ್ಟಿಕೊಡುವ ಐದೂವರೆ ಗಂಟೆ ಸಾಕ್ಷ್ಯಚಿತ್ರ
Editor’s Pick More