ಮಹಾತ್ಮ ಬದುಕನ್ನು ಕಟ್ಟಿಕೊಡುವ ಐದೂವರೆ ಗಂಟೆ ಸಾಕ್ಷ್ಯಚಿತ್ರ

ಮಹಾತ್ಮಗಾಂಧಿ ಅವರು ಅಗಾಧವಾಗಿ ಬದುಕಿದವರು. ಸ್ವಾತಂತ್ರ್ಯಹೋರಾಟ ಒಂದೆಡೆಯಾದರೆ, ಸತ್ಯದೊಂದಿಗೆ ಅನ್ವೇಷಣೆ, ಅದಕ್ಕಾಗಿ ತಮ್ಮನ್ನು ಮತ್ತು ತಮ್ಮ ಜೀವನವನ್ನು ಪ್ರಯೋಗಕ್ಕೆ ಒಡ್ಡಿಕೊಂಡಿದ್ದು ಇನ್ನೊಂದೆಡೆ. ರಾಜಕೀಯ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸದಾ ಶ್ರಮಿಸುತ್ತಿದ್ದ ಗಾಂಧೀಜಿ ಅವರ ಬದುಕು ಅಸಂಖ್ಯರನ್ನು ಪ್ರಭಾವಿಸಿದೆ. ಅಂಥ ಬದುಕನ್ನು ವಿಠಲ್‌ಭಾಯಿ ಜವೇರಿ ಅವರು ಐದೂವರೆ ಗಂಟೆಗಳ ದೀರ್ಘ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದಾರೆ. ದಿ ಗಾಂಧಿ ನ್ಯಾಷನಲ್‌ ಮೆಮೊರಿಯಲ್‌ ಫಂಡ್‌ ಮತ್ತು ಭಾರತ ಸರ್ಕಾರದ ಚಲನಚಿತ್ರ ವಿಭಾಗದ ಸಹಕಾರದೊಂದಿಗೆ ನಿರ್ಮಾಣವಾದ ಸಾಕ್ಷ್ಯಚಿತ್ರವಿದು.

ಶಾಲಾ ದಿನಗಳನ್ನು ನೆನಪಿಸುವ ಹೆಡ್‌ಮಾಸ್ಟರ್‌ ವಾಮನ್‌ ರಾವ್‌
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
ಸೆಪ್ಟೆಂಬರ್‌ 11ರ ಅವಳಿ ಕಟ್ಟಡ ದಾಳಿ ಹಿಂದಿನ ಸಂಚು ಬಿಚ್ಚಿಡುವ ‘ಜೈಗೈಸ್ಟ್‌’
Editor’s Pick More