ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ

ಸ್ಮಿತಾ ಪಾಟೀಲ್‌, ಒಬ್ಬ ಬರಹಗಾರನ ಸಂವೇದನೆ, ಕಲಾವಿದನ ಸೃಜನಶೀಲತೆಯಿದ್ದ ನಟಿ. ಮರಾಠಿ ಹಾಗೂ ಹಿಂದಿ ಚಿತ್ರರಂಗದಲ್ಲಿ ತಮ್ಮ ಮನೋಜ್ಞ ನಟನೆಯ ಮೂಲಕ ಕಮರ್ಷಿಯಲ್‌ ಹಾಗೂ ಕಲಾತ್ಮಕ ಚಿತ್ರಗಳಲ್ಲಿ ತಮ್ಮ ಛಾಪು ಒತ್ತಿದವರು. ದೂರದರ್ಶನದಲ್ಲಿ ಸುದ್ದಿವಾಚಕಿಯಾಗಿ ವೃತ್ತಿ ಆರಂಭಿಸಿದ ಸ್ಮಿತಾ, ಶ್ಯಾಮ್‌ ಬೆನೆಗಲ್‌ ಅವರ ನಿರ್ದೇಶನದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಗೋವಿಂದ್‌ ನಿಹಲಾನಿ, ಸತ್ಯಜಿತ್‌ರೇ ಅವರಂಥ ಘಟಾನುಘಟಿಗಳ ನಿರ್ದೇಶನದಲ್ಲಿ ಹಲವು ಮಹತ್ವದ ಚಿತ್ರಗಳಲ್ಲಿ ನಟಿಸಿ ಹಲವು ಗೌರವ-ಪ್ರಶಸ್ತಿಗಳಿಗೆ ಭಾಜನರಾದರು. ಟಿ ಎಸ್ ನಾಗಾಭರಣ ನಿರ್ದೇಶನದ ‘ಅನ್ವೇಷಣೆ’ ಹೆಸರಿನ ಕನ್ನಡ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಅತಿ ಕಿರಿಯ ವಯಸ್ಸಿಗೆ ನಿಧನರಾದ ಸ್ಮಿತಾ ಪಾಟೀಲ್‌ ಬದುಕು ಆಧರಿಸಿ ಈ ಚಿತ್ರವೂ ಸಿದ್ಧವಾಗುತ್ತಿದೆ. ಭಾರತ ಸರ್ಕಾರದ ಫಿಲ್ಮ್‌ ಡಿವಿಷನ್‌ ಸ್ಮಿತಾ ಪಾಟೀಲ್‌ ನೆನಪಿನಲ್ಲಿ ಸಿದ್ಧಪಡಿಸಿದ ಕಿರು ಸಾಕ್ಷ್ಯಚಿತ್ರ ಇಲ್ಲಿದೆ.

ಶಾಲಾ ದಿನಗಳನ್ನು ನೆನಪಿಸುವ ಹೆಡ್‌ಮಾಸ್ಟರ್‌ ವಾಮನ್‌ ರಾವ್‌
ಮಹಾತ್ಮ ಬದುಕನ್ನು ಕಟ್ಟಿಕೊಡುವ ಐದೂವರೆ ಗಂಟೆ ಸಾಕ್ಷ್ಯಚಿತ್ರ
ಸೆಪ್ಟೆಂಬರ್‌ 11ರ ಅವಳಿ ಕಟ್ಟಡ ದಾಳಿ ಹಿಂದಿನ ಸಂಚು ಬಿಚ್ಚಿಡುವ ‘ಜೈಗೈಸ್ಟ್‌’
Editor’s Pick More