ಶಾಲಾ ದಿನಗಳನ್ನು ನೆನಪಿಸುವ ಹೆಡ್‌ಮಾಸ್ಟರ್‌ ವಾಮನ್‌ ರಾವ್‌

ಹೊಸ ಕೆಲಸಕ್ಕೆ ಸೇರಿದ ಯುವಕನೊಬ್ಬ ವಿದೇಶಕ್ಕೆ ತೆರಳುವ ಅವಕಾಶವನ್ನು ಪಡೆಯುತ್ತಾನೆ. ಎಸ್‌ಎಸ್‌ಎಲ್‌ಸಿ ಮಾರ್ಕ್ಸ್‌ ಕಾರ್ಡ್‌ಗಾಗಿ ತಾನು ಓದಿದ ಶಾಲೆಗೆ ಮರಳಬೇಕಾಗುತ್ತದೆ. ಆಗ ಶಾಲೆಯ ಹೆಡ್‌ಮಾಸ್ಟರ್‌ ನೆನಪಾಗುತ್ತಾರೆ. ತಾನು ಓದುತ್ತಿದ್ದ ಕಾಲದಲ್ಲಿ ನೋಡಿದ ಹೆಡ್‌ ಮಾಸ್ಟರ್‌, ವರ್ಷಗಳು ಕಳೆದ ಮೇಲೂ ಹಾಗೇ ಇರುವುದು, ಅವರ ಆರ್ಥಿಕ ಸ್ಥಿತಿ, ಶಾಲೆಯ ಸ್ಥಿತಿಗತಿಗಳನ್ನು ಗಮನಿಸುವುದು, ಅವರ ನಿವೃತ್ತಿಯ ಕ್ಷಣಗಳನ್ನು ಆಪ್ತವಾಗಿ ಕಟ್ಟಿಕೊಡುತ್ತದೆ ಗಿರೀಶ್‌ ಬಿಜ್ಜಳ್‌ ಅವರ ಈ ಕಿರುಚಿತ್ರ. ‘ಸಖತ್‌ ಸ್ಟುಡಿಯೋ’ ನಿರ್ಮಾಣದ ಈ ಚಿತ್ರದ ಒಂದು ಹಾಡನ್ನು ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಹಾಡಿದ್ದಾರೆ. ಅಜಿತ್‌ ಪದ್ಮನಾಭ್‌ ಹಿನ್ನೆಲೆ ಸಂಗೀತ, ಅಜಿತ್‌ ಸಿನಿಮಾಟೋಗ್ರಫಿ ಚೆನ್ನಾಗಿದೆ. ಶ್ರೀನಾಥ ಚಿತ್ತಾರ, ಗಿರೀಶ್‌ ಬಿಜ್ಜಳ, ಸಂಧ್ಯಾ, ಅಮರ್‌ನಾಥ್‌ , ನಾಗರಾಜ ಎಂ ಗವಿಸಿದ್ದಯ್ಯ ತಾರಾಗಣದಲ್ಲಿದ್ದಾರೆ.

ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
ಮಹಾತ್ಮ ಬದುಕನ್ನು ಕಟ್ಟಿಕೊಡುವ ಐದೂವರೆ ಗಂಟೆ ಸಾಕ್ಷ್ಯಚಿತ್ರ
ಸೆಪ್ಟೆಂಬರ್‌ 11ರ ಅವಳಿ ಕಟ್ಟಡ ದಾಳಿ ಹಿಂದಿನ ಸಂಚು ಬಿಚ್ಚಿಡುವ ‘ಜೈಗೈಸ್ಟ್‌’
Editor’s Pick More