61

ದಿನೇಶ್ ಹೊಳ್ಳ

ಮೊಡೆಂಕಾಪು, ಬಂಟ್ವಾಳ ತಾಲೂಕು

ಹೊಳ್ಳ ಓದಿದ್ದು ಪಾಲಿಟೆಕ್ನಿಕ್ ಆದರೂ ಕೈ ಹಿಡಿದದ್ದು ಚಿತ್ರಕಲೆ. ಚಿತ್ರ ಬಿಡಿಸಲೆಂದು ಪಶ್ಚಿಮಘಟ್ಟಗಳಿಗೆ ಚಾರಣ ಹೋಗುತ್ತಿದ್ದವರು. ಅಲ್ಲಿ ನಡೆಯುತ್ತಿದ್ದ ಬೇಟೆ, ಅರಣ್ಯ ಒತ್ತುವರಿ ಮುಂತಾದ ಪರಿಸರ ನಾಶ ಕೃತ್ಯಗಳನ್ನು ಕಂಡು ಮನನೊಂದು, ಹೋರಾಟಕ್ಕಿಳಿದರು. ನೇತ್ರಾವತಿ ತಿರುವು ಯೋಜನೆಯ ಸಾಧಕ- ಬಾಧಕಗಳನ್ನು ಅರಿಯಲು ನದಿ ಮೂಲಗಳನ್ನೆಲ್ಲಾ ಹುಡುಕಿ ಅಲೆದರು. ಈ ಯೋಜನೆ ದಕ್ಷಿಣ ಕನ್ನಡಕ್ಕೆ ಹೇಗೆ ಮಾರಕ ಎಂಬುದನ್ನು ಜನರಿಗೆ ಸಾರಿ ಹೇಳಿದರು. ೨೦೧೪ರಲ್ಲಿ ಸಹ್ಯಾದ್ರಿ ಸಂಚಯ ಸಂಘಟನೆ ಕಟ್ಟಿ, ಯೋಜನೆ ವಿರುದ್ಧ ಹಲವು ಬಗೆಯ ಜನಾಂದೋಲನಗಳನ್ನು ರೂಪಿಸುತ್ತಿದ್ದಾರೆ. ಒಂದೆರಡು ದಶಕಗಳ ಹೋರಾಟ ಅವರನ್ನು ಪರಿಸರ ತಜ್ಞ, ಲೇಖಕನನ್ನಾಗಿಯೂ ರೂಪಿಸಿದೆ.