ಪ್ಯಾರಾ ಸ್ಪೋರ್ಟ್ಸ್ ತಾರೆಗಳಿಗಾಗಿ ಹೊಸ ವೆಬ್‌ಸೈಟ್ ಆರಂಭಿಸಿದ ಮುಂಬೈ ಹುಡುಗಿ

ದೈಹಿಕವಾಗಿ ಸದೃಢರಾಗಿರುವ ಕ್ರೀಡಾಪಟುಗಳಷ್ಟೇ ಕ್ರೀಡೆಯ ವಾರಸುದಾರರಲ್ಲ ಎಂಬುದನ್ನು ವಿಕಲಾಂಗ ಕ್ರೀಡಾಪಟುಗಳು ತಮ್ಮ ಅನುಪಮ, ಅಸಮ ಸಾಧನೆಯಿಂದ ಸಮೃದ್ಧಗೊಳಿಸಿದ್ದಾರೆ. ಇವರೆಲ್ಲರ ಸಾಧನೆ ಮತ್ತು ಬದುಕಿನ ಮೇಲೆ ಬೆಳಕು ಚೆಲ್ಲಲು ಶುರುವಾಗಿದೆ ಹೊಸ ಜಾಲತಾಣ

ಎಚ್ ಎನ್ ಗಿರೀಶ್, ಮರಿಯನ್ ತಂಗವೇಲು, ದೀಪಾ ಮಲಿಕ್, ದೇವೇಂದ್ರ ಜಝಾರಿಯಾರಂಥ ಪ್ಯಾರಾಲಿಂಪಿಯನ್’ಗಳಿಗೆ ಇದು ಸಿಹಿ ಸುದ್ದಿ.

ಇಲ್ಲೀವರೆಗೆ ಪ್ಯಾರಾ ಸ್ಪೋರ್ಟ್ಸ್ ಕುರಿತ ಮಾಹಿತಿಗಾಗಿ ಅಧಿಕೃತ ವೆಬ್’ಸೈಟ್ ಭಾರತದಲ್ಲಿ ಲಭ್ಯವಿರಲಿಲ್ಲ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾವೆಷ್ಟೇ ಅಮೋಘ ಪ್ರದರ್ಶನ ನೀಡಿದರೂ, ಪ್ಯಾರಾ ಅಥ್ಲೀಟ್ ಗಳು ಕ್ರೀಡಾಪ್ರಿಯರ ಗಮನ ಸೆಳೆಯುವಲ್ಲಿ ವಿಫಲವಾಗುತ್ತಿದ್ದರು. ಆದರೆ, ಮುಂಬೈನಲ್ಲಿ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ, ಫುಟ್ಬಾಲ್ ಪಟುವೂ ಆಗಿರುವ 17ರ ಹರೆಯದ ಸಾಚಿ ಮುನೋಟ್ ಎಂಬ ಯುವತಿ ಐಡಿಯಾಟೆಲ್ಯಾಬ್ಸ್ ಎಂಬ ಡಿಜಿಟಲ್ ಮಾರ್ಕೆಟಿಂಗ್ ಕಂಪನಿಯ ನೆರವಿನೊಂದಿಗೆ ಈ ಕೊರಗನ್ನು ನೀಗಿಸಿದ್ದಾಳೆ.

ಮುನೋಟ್ ಇತ್ತೀಚೆಗಷ್ಟೇ www.thenationspride.com ವೆಬ್’ಸೈಟ್’ಗೆ ಚಾಲನೆ ನೀಡಿದ್ದು, ಇದರಲ್ಲಿ ಪ್ಯಾರಾಥ್ಲೀಟ್’ಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಒದಗಿಸಲಿದೆ ಎಂದು ‘ಸ್ಪೋರ್ಟ್ಸ್ ಫ್ಲಾಶಷ್' ವರದಿ ಮಾಡಿದೆ.

ಸಾಚಿ ಮುನೋಟ್
ಪ್ಯಾರಾಥ್ಲೀಟ್’ಗಳಿಗೆಂದೇ ಪ್ರತ್ಯೇಕ ವೆಬ್ ತಾಣವೊಂದು ಅಸ್ತಿತ್ವಕ್ಕೆ ಬಂದಿರುವುದು ನನ್ನಲ್ಲಿ ರೋಮಾಂಚನ ತರಿಸಿದೆ. ಪ್ಯಾರಾ ಸ್ಪೋರ್ಟ್ಸ್ ಕುರಿತು ಹೆಚ್ಚು ತಿಳಿಯಲು ಈ ವೆಬ್ ನೆರವಾಗಿದೆ.
ದೇವೇಂದ್ರ ಜಝಾರಿಯಾ, ಜಾವೆಲಿನ್ ಪಟು
ಪ್ಯಾರಾಥ್ಲೀಟ್ ಗಳ ಸಾಧನೆ ಇಲ್ಲವೇ ಕ್ರೀಡೆಯ ಕುರಿತ ಅವಗಣನೆಯಿಂದ ನನಗೆ ತೀವ್ರ ನಿರಾಸೆಯಾಗಿತ್ತು. ಇದುವೇ ಪ್ಯಾರಾಥ್ಲೀಟ್ ಗಳಿಗೆ ಡಿಜಿಟಲ್ ವೇದಿಕೆಯೊಂದನ್ನು ಸಜ್ಜುಗೊಳಿಸಲು ನನ್ನನ್ನು ಪ್ರೇರೇಪಿಸಿತು.
ಸಾಚಿ ಮುನೋಟ್, ವೆಬ್ ಸಂಸ್ಥಾಪಕಿ  
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More