ಆಸ್ಟ್ರೇಲಿಯಾ ಓಪನ್‌ಗೆ ಸೆರೆನಾ ವಿಲಿಯಮ್ಸ್, ಸ್ವೆಟ್ಲಾನ ಕುಜ್ನೆಟ್ಸೋವಾ ಅನುಮಾನ

೨೦೧೮ರ ಆಸ್ಟ್ರೇಲಿಯಾ ಓಪನ್‌ ಸಂಘಟಕರ ಪಾಲಿಗೆ ಈ ಸುದ್ದಿ ಅಪ್ರಿಯ. ವಿಶ್ವದ ಮಾಜಿ ನಂ.೧ ಆಟಗಾರ್ತಿ ಹಾಗೂ ೨೩ ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳ ಒಡತಿ ಸೆರೆನಾ ವಿಲಿಯಮ್ಸ್ ಅಲ್ಲದೆ, ೧೨ನೇ ಶ್ರೇಯಾಂಕಿತೆ ಸ್ವೆಟ್ಲಾನ ಕುಜ್ನೆಟ್ಸೊವಾ ಕೂಡ ಪ್ರತಿಷ್ಠಿತ ಟೂರ್ನಿಯಲ್ಲಿ ಆಡುವುದು ಅನುಮಾನವೆನಿಸಿದೆ

ಈ ಋತುವಿನ ಮೊದಲ ಗ್ರಾಂಡ್‌ಸ್ಲಾಮ್ ಟೂರ್ನಿಯಾದ ಆಸ್ಟ್ರೇಲಿಯಾ ಓಪನ್‌ನಲ್ಲಿ ಗೆಲುವು ಸಾಧಿಸಿ ವೃತ್ತಿಬದುಕಿನ ೨೩ನೇ ಗ್ರಾಂಡ್‌ಸ್ಲಾಮ್ ಪ್ರಶಸ್ತಿ ಗೆದ್ದಾಗ ಸೆರೆನಾ ೨ ತಿಂಗಳ ಗರ್ಭಿಣಿಯಾಗಿದ್ದರು. ಸೆಪ್ಟೆಂಬರ್‌ನಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದ ಸೆರೆನಾ, ಮುಂದಿನ ಜನವರಿಯಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ಓಪನ್‌ನಲ್ಲಿ ಆಡುವ ಗುರಿ ಹೊತ್ತಿದ್ದರು. ಅಂದಹಾಗೆ, ೨೦೧೮ರ ಆಸ್ಟ್ರೇಲಿಯಾ ಓಪನ್ ಟೆನಿಸ್ ಪಂದ್ಯಾವಳಿಯು ಜನವರಿ ೧೫ರಿಂದ ೨೮ರವರೆಗೆ ಮೆಲ್ಬೋರ್ನ್‌ನಲ್ಲಿ ಜರುಗಲಿದೆ.

''೨೦೧೮ಕ್ಕೆ ಸೆರೆನಾ ಸಿದ್ಧತೆ ನಡೆಸಿದ್ದು, ಮತ್ತೆ ಟೆನಿಸ್ ಆಡಲು ಆಕೆಯ ದೇಹಸ್ಥಿತಿ ಹೇಗೆ ಸ್ಪಂದಿಸುತ್ತದೆ ಎಂಬುದರ ಆಧಾರದ ಮೇಲೆ ಆಕೆ ಅಂಗಣಕ್ಕಿಳಿಯುವುದು ನಿರ್ಧಾರವಾಗಲಿದೆ. ಶೀಘ್ರವೇ ಫ್ಲೋರಿಡಾಗೆ ನಾನು ತೆರಳಲಿದ್ದೇನೆ,'' ಎಂದು ೩೬ರ ಹರೆಯದ ಕೃಷ್ಣಸುಂದರಿಯ ಅಮೆರಿಕ ಕೋಚ್ ಪ್ಯಾಟ್ರಿಕ್ ಮುರಟೊಗೊಲು ತಿಳಿಸಿದ್ದಾರೆ.

ವಿಕ್ಟೋರಿಯಾ ಅಜರೆಂಕಾ
ಇದನ್ನೂ ಓದಿ : ಜಹೀರ್ ಖಾನ್ ಮದುವೆ ಪಾರ್ಟಿಯಲ್ಲಿ ಅನುಷ್ಕಾ-ಕೊಹ್ಲಿ ಡ್ಯಾನ್ಸ್ ಕಂಡಿರಾ!

ಕುಜ್ನೆಟ್ಸೊವಾಗೆ ಗಾಯ: ರಷ್ಯಾದ ಹಿರಿಯ ಆಟಗಾರ್ತಿ ಕುಜ್ನೆಟ್ಸೊವಾ ಮುಂಗೈ ಮಣಿಕಟ್ಟಿಗೆ ತಗಲಿರುವ ಗಾಯದಿಂದಾಗಿ ಆಸ್ಟ್ರೇಲಿಯಾ ಓಪನ್‌ನಲ್ಲಿ ಆಡುವುದು ಅನುಮಾನವಾಗಿದೆ. “ನನ್ನ ಮುಂಗೈ ಮಣಿಕಟ್ಟಿಗೆ ಎರಡು ಗಾಯಗಳಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಸದ್ಯ ಗಾಯದ ಲಕ್ಷಣ ವೀಕ್ಷಿಸಿರುವ ವೈದ್ಯರು ಇಂಥದ್ದೇ ಪೆಟ್ಟು ಬಿದ್ದಿದೆ ಎಂದು ಹೇಳಲಾಗುತ್ತಿಲ್ಲ. ಹೀಗಾಗಿ ಆಸ್ಟ್ರೇಲಿಯಾ ಓಪನ್‌ನಲ್ಲಿ ಆಡುವುದು ಬಹುತೇಕ ಅನುಮಾನ,'' ಎಂದು ರಷ್ಯಾದ ಸ್ಥಳೀಯ ಪತ್ರಿಕೆಯೊಂದಕ್ಕೆ ಕುಜ್ನೆಟ್ಸೋವಾ ಹೇಳಿದ್ದಾರೆ.

ಅಜರೆಂಕಾ ಸಿದ್ಧ: ಇತ್ತ ಜುಲೈ ತಿಂಗಳಿನಿಂದ ಟೆನಿಸ್ ಅಂಗಣಕ್ಕೆ ಇಳಿಯದ ಬೆಲಾರಸ್ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ, ಜನವರಿಯಲ್ಲಿ ನಡೆಯಲಿರುವ ಎಎಸ್‌ಬಿ ಕ್ಲಾಸಿಕ್ ಪಂದ್ಯಾವಳಿಯೊಂದಿಗೆ ಟೆನಿಸ್ ಅಂಗಣಕ್ಕೆ ಹಿಂದಿರುಗಲು ಮುಂದಾಗಿದ್ದಾರೆ. ಆದರೆ, ಕೋಚ್ ಮೈಕಲ್ ಜೋಯ್ಸಿ ಅವರೊಂದಿಗಿನ ಕೋಚಿಂಗ್ ಸಖ್ಯ ಮುಂದಿನ ವರ್ಷದಿಂದ ಮುರಿದುಬೀಳಲಿದೆ.

ಕೊಹ್ಲಿ, ಮೀರಾ ಬಾಯಿ ಚಾನುಗೆ ಖೇಲ್ ರತ್ನ; ಕನ್ನಡಿಗ ಬೋಪಣ್ಣಗೆ ಅರ್ಜುನ
ಚೀನಾ ಓಪನ್ ಬ್ಯಾಡ್ಮಿಂಟನ್: ಎಂಟರ ಘಟ್ಟ ತಲುಪಿದ ಶ್ರೀಕಾಂತ್, ಸಿಂಧು
ಏಷ್ಯಾ ಕಪ್ | ಮನೀಶ್ ಪಾಂಡೆ ಪ್ರಚಂಡ ಕ್ಯಾಚ್‌ಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್
Editor’s Pick More