ಶ್ರೀಲಂಕಾ ಕ್ರಿಕೆಟ್‌ನಲ್ಲಿ ಎದುರಾಯಿತೇ ಸಮರ್ಥ ನಾಯಕರ ಕೊರತೆ?

ಡಿಸೆಂಬರ್ ೧೦ರಿಂದ ಆರಂಭವಾಗಲಿರುವ ಭಾರತ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಆಲ್ರೌಂಡರ್ ತಿಸ್ಸಾರ ಪೆರೇರಾ ಆಯ್ಕೆಯಾಗಿದ್ದಾರೆ. ೨೮ರ ಹರೆಯದ ಉಪುಲ್ ತರಂಗ ಸಾರಥ್ಯದಲ್ಲಿ ಮೂರು ಸರಣಿಗಳಲ್ಲಿ ವೈಟ್‌ವಾಶ್ ಅನುಭವಿಸಿದ ನಂತರ ಶ್ರೀಲಂಕಾ ಕ್ರಿಕೆಟ್ ಆಯ್ಕೆಸಮಿತಿ ಈ ನಿರ್ಧಾರ ತಳೆದಿದೆ

ಆಲ್ರೌಂಡ್ ಆಟಗಾರ ತಿಸ್ಸಾರ ಪೆರೇರಾಗೆ ಭಾರತ ವಿರುದ್ಧದ ಸೀಮಿತ ಓವರ್‌ಗಳ ಸರಣಿಯ ಸಾರಥ್ಯ ವಹಿಸಲಾಗಿದೆ. ಈಗಾಗಲೇ ಮೂರು ಟೆಸ್ಟ್ ಪಂದ್ಯ ಸರಣಿಯಲ್ಲಿ ಮೊದಲನೆಯದ್ದನ್ನು ಅದೃಷ್ಟವಶಾತ್ ಡ್ರಾ ಮಾಡಿಕೊಂಡ ಲಂಕಾ, ನಾಗ್ಪರುದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ ೨೦೯ ರನ್ ಅಂತರದಿಂದ ಸೋತಿತ್ತು.

ಏತನ್ಮಧ್ಯೆ, ಈ ಋತುವಿನಲ್ಲಿ ಶ್ರೀಲಂಕಾ ತಂಡವನ್ನು ಮುನ್ನಡೆಸುತ್ತಿರುವ ಏಳನೇ ಆಟಗಾರ ಪೆರೇರಾ. ಮ್ಯಾಥ್ಯೂಸ್, ಲಸಿತ್ ಮಾಲಿಂಗಾ, ರಂಗನಾ ಹೆರಾತ್, ದಿನೇಶ್ ಚಂಡೀಮಲ್ ಹಾಗೂ ಚಾಮರ ಕಪುಗಡೇರಾ ಒಂದಲ್ಲ ಒಂದು ಬಗೆಯ ಕ್ರಿಕೆಟ್ ಪ್ರಕಾರದಲ್ಲಿ ಲಂಕಾ ತಂಡದ ಸಾರಥ್ಯ ಹೊತ್ತಿದ್ದರು.

ಇದನ್ನೂ ಓದಿ : ಲಂಕಾ ಏಕದಿನ ಸರಣಿ ಕೊಹ್ಲಿಗೆ ವಿಶ್ರಾಂತಿ, ರೋಹಿತ್‌ ಶರ್ಮಾಗೆ ಸಾರಥ್ಯ

ತಂಡದಲ್ಲಿ ಅತ್ಯಂತ ಅನುಭವಿ ಆಟಗಾರ ಎನಿಸಿರುವ ಆಂಜೆಲೊ ಮ್ಯಾಥ್ಯೂಸ್ ಕಳೆದ ವರ್ಷ ನಾಯಕತ್ವದಿಂದ ಕೆಳಗಿಳಿದ ಬಳಿಕ, ಶ್ರೀಲಂಕಾ ಸಮರ್ಥ ನಾಯಕನ ಕೊರತೆಯನ್ನು ಎದುರಿಸುತ್ತಿದೆ. ಹೀಗಾಗಿ ಟೆಸ್ಟ್ ಹಾಗೂ ಏಕದಿನ ಪಂದ್ಯಾವಳಿಗೆ ಪ್ರತ್ಯೇಕ ನಾಯಕರನ್ನು ಶ್ರೀಲಂಕಾ ಕ್ರಿಕೆಟ್ ನೇಮಿಸಿತ್ತು. ಅದರಂತೆ, ದಿನೇಶ್ ಚಂಡೀಮಲ್ ಅವರನ್ನು ಟೆಸ್ಟ್ ಪ್ರಕಾರಕ್ಕೆ ನಾಯಕನನ್ನಾಗಿಸಿ ಉಪುಲ್ ತರಂಗಾ ಅವರನ್ನು ಏಕದಿನ ಕ್ರಿಕೆಟ್‌ ಸಾರಥಿಯನ್ನಾಗಿಸಲಾಗಿತ್ತು. ತರಂಗಾ ಆಯ್ಕೆಯ ಬಗ್ಗೆ ಅಪಸ್ವರ ಎದ್ದಿತಲ್ಲದೆ, ಮಾಜಿ ಕ್ರಿಕೆಟಿಗ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಸನತ್ ಜಯಸೂರ್ಯ ಅವರ ಈ ನಿರ್ಧಾರವನ್ನು ಪ್ರಶ್ನಿಸಲಾಗಿತ್ತು.

ಅಂದಹಾಗೆ, ಶ್ರೀಲಂಕಾ ಟಿ೨೦ ತಂಡದ ೯ನೇ ನಾಯಕ ಎನಿಸಿರುವ ಪೆರೇರಾ, ಶ್ರೀಲಂಕಾ ಏಕದಿನ ತಂಡದ ೨೨ನೇ ನಾಯಕನಾಗಿದ್ದಾರೆ. ಇತ್ತೀಚೆಗೆ ಇದೇ ಪೆರೇರಾ ನಾಯಕತ್ವದಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನದ ವಿರುದ್ಧ ಆಡಿತ್ತು. ಆದರೆ, ಭದ್ರತಾ ಕಾರಣದಿಂದಾಗಿ ಉಪುಲ್ ತರಂಗ, ಲಸಿತ್ ಮಾಲಿಂಗ, ನಿರೋಷಾ ಡಿಕ್ವೆಲ್ಲಾ ಹಾಗೂ ಚಾಮರ ಕಪುಗಡೇರಾ ಪಾಕ್‌ಗೆ ತೆರಳಿರಲಿಲ್ಲ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More