ಕಣಿವೆ ನಗರಿ ಕಾಶ್ಮೀರದಲ್ಲಿ ಧೋನಿಯನ್ನು ಸ್ವಾಗತಿಸಿದ ಬೂಮ್ ಬೂಮ್ ಅಫ್ರಿದಿ!

ಇತ್ತೀಚೆಗಷ್ಟೇ ಕಣಿವೆ ನಗರಿ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿಯನ್ನು ಬೂಮ್ ಬೂಮ್ ಅಫ್ರಿದಿ ಸ್ವಾಗತಿಸಿದ್ದಾರೆ! ಜಮ್ಮು ಮತ್ತು ಕಾಶ್ಮೀರದ ಕ್ರೀಡಾಂಗಣಕ್ಕೆ ರಾಂಚಿ ಕ್ರಿಕೆಟಿಗ ಕಾಲಿಡುತ್ತಿದ್ದಂತೆಯೇ, ನಿಜವಾಗಿಯೂ ಬೂಮ್ ಬೂಮ್ ಅಫ್ರಿದಿ ಅಲ್ಲಿದ್ದರೇ?

ಇತ್ತೀಚೆಗೆ ಭಾರತೀಯ ಸೇನೆಯು ಕಣಿವೆ ನಗರಿಯಲ್ಲಿ ಸೌಹಾರ್ದ ಕ್ರಿಕೆಟ್ ಪಂದ್ಯವೊಂದನ್ನು ಏರ್ಪಡಿಸಿತ್ತು. ಭಾರತೀಯ ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯಲ್ಲಿರುವ ಧೋನಿಯನ್ನು ಈ ಪಂದ್ಯಾವಳಿಯ ಮುಖ್ಯ ಅತಿಥಿಯನ್ನಾಗಿ ಆರಿಸಲಾಗಿತ್ತು.

ಈ ಕ್ರಿಕೆಟ್ ಪಂದ್ಯಾವಳಿ ಆಯೋಜನೆಯಾಗಿದ್ದು ಶ್ರೀನಗರಕ್ಕೆ ೩೫ ಕಿಮೀ ದೂರದಲ್ಲಿರುವ ಕುಂಜೆರ್ ಎಂಬಲ್ಲಿ. ಕ್ರೀಡಾಂಗಣಕ್ಕೆ ಧೋನಿ ಕಾಲಿಡುತ್ತಿದ್ದಂತೆಯೇ, ಅವರನ್ನು 'ಬೂಮ್ ಬೂಮ್ ಅಫ್ರಿದಿ' ಎಂಬ ಉದ್ಘೋಷ ಅಪ್ಪಳಿಸಿತು. ಒಡನೆಯೇ ಭದ್ರತಾ ಸಿಬ್ಬಂದಿ ಘೋಷಣೆ ಕೂಗುತ್ತಿದ್ದ ಅಭಿಮಾನಿಗಳನ್ನು ಸುಮ್ಮನಿರಿಸಲು ಮುಂದಾದರು. ಈ ಪ್ರಸಂಗ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ : ಪಾಕ್ ಪಂದ್ಯದೊಂದಿಗೆ ಆರಂಭವಾಗಲಿದೆ ಭಾರತದ ಕಾಮನ್ವೆಲ್ತ್ ಅಭಿಯಾನ

ಇಂಡೋ-ಪಾಕ್ ಕ್ರಿಕೆಟ್ ಕ್ರೇಜ್: ಧೋನಿಯನ್ನು ಎದುರುಗೊಳ್ಳುತ್ತಲೇ, “ಬೂಮ್ ಬೂಮ್ ಅಫ್ರಿದಿ,” ಎಂಬ ಘೋಷಣೆ ಮೊಳಗಿದ್ದುದರ ಹಿಂದೆ ಇಂಡೋ-ಪಾಕ್ ದ್ವಿಪಕ್ಷೀಯ ಕ್ರಿಕೆಟ್ ಕಲರವದ ಜೋಶ್ ಇದೆ. ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಫ್ರಿದಿ ವಿದಾಯ ಹೇಳಿದರೂ, ಅವರ ಬಿಡುಬೀಸಿನ ಬ್ಯಾಟಿಂಗ್ ಅಭಿಮಾನಿಗಳ ಮನದಲ್ಲಿ ಅಚ್ಚಹಸುರಾಗಿದೆ. ಅಂದಹಾಗೆ, ಆಫ್ರಿದಿ ಕೇವಲ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಮಾತ್ರವಲ್ಲ, ಚಮತ್ಕಾರಿ ಸ್ಪಿನ್ನರ್ ಕೂಡ. ಪಾಕಿಸ್ತಾನ ಕಂಡ ಶ್ರೇಷ್ಠ ಆಲ್ರೌಂಡರ್‌ಗಳಲ್ಲಿ ಒಬ್ಬರು.

ಕೇವಲ ಕ್ರಿಕೆಟ್ ಅಲ್ಲ: “ಭಾರತ ಮತ್ತು ಪಾಕಿಸ್ತಾನ ನಡುವಣದ ಕ್ರಿಕೆಟ್ ಸರಣಿ ಕೇವಲ ಕ್ರೀಡೆಗಷ್ಟೇ ಸೀಮಿತವಲ್ಲ. ದ್ವಿಪಕ್ಷೀಯ ಸರಣಿಯನ್ನು ನಿರ್ಧರಿಸಿರುವುದು ಸುಲಭದ ಸಂಗತಿಯಲ್ಲ. ಅದೊಂದು ರಾಜತಾಂತ್ರಿಕ ಹಾಗೂ ರಾಜಕೀಯ ನಿರ್ಧಾರವಾಗಿದೆ. ಹೀಗಾಗಿ ಸರ್ಕಾರ ಮಾತ್ರ ಸೂಕ್ತ ನಿರ್ಧಾರ ತಳೆಯಲು ಸಾಧ್ಯ,” ಎಂದಿದ್ದಾರೆ ಧೋನಿ.

ಫಿಫಾ ವಿಶ್ವಕಪ್| ಕೊನೇ ಕ್ಷಣದಲ್ಲಿ ಶಾಕಿರಿ ನೀಡಿದ ಶಾಕ್‌ಗೆ ಬೆಚ್ಚಿದ ಸರ್ಬಿಯಾ
ಫಿಫಾ ವಿಶ್ವಕಪ್ | ಮೂಸಾ ಡಬಲ್‌ ಗೋಲಿನ ಕಡುತಾಪಕ್ಕೆ ಕರಗಿದ ಐಸ್‌ಲ್ಯಾಂಡ್
ಫಿಫಾ ವಿಡಿಯೋ | ದಿನ ೯ | ಸ್ವಿಡ್ಸರ್ಲೆಂಡ್, ಬ್ರೆಜಿಲ್, ನೈಜೀರಿಯಾ ಗೆದ್ದ ಬಗೆ
Editor’s Pick More