ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್ : ಸೆಮಿಫೈನಲ್ ತಲುಪಿದ ಸರಿತಾ ದೇವಿ

ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಸ್ಪರ್ಧಾವಳಿಯಲ್ಲಿ ಸರಿತಾ ದೇವಿ ಹಾಗೂ ಸೋನಿಯಾ ಲ್ಯಾಥರ್ ಉಪಾಂತ್ಯಕ್ಕೆ ಧಾವಿಸಿದ್ದಾರೆ. ಗುರುವಾರ (ಜ.೧೦) ನಡೆದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಈ ಇಬ್ಬರು ಬಾಕ್ಸರ್‌ಗಳು ಸುಲಭ ಗೆಲುವಿನೊಂದಿಗೆ ಮುಂದಿನ ಹಂತಕ್ಕೆ ಪ್ರವೇಶಿಸಿದರು

ಮಾಜಿ ವಿಶ್ವ ಚಾಂಪಿಯನ್ ಲೈಶ್ರಾಮ್ ಸರಿತಾ ದೇವಿ (೬೦ ಕೆ ಜಿ) ಹಾಗೂ ಏಷ್ಯಾ ಬೆಳ್ಳಿ ಪದಕ ವಿಜೇತೆ ಸೋನಿಯಾ ಲ್ಯಾಥರ್ (೫೭ ಕೆ ಜಿ) ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಗೆಲುವಿನ ಅಭಿಯಾನವನ್ನು ಮುಂದುವರೆಸಿದ್ದಾರೆ. ಆಲ್ ಇಂಡಿಯಾ ಪೊಲೀಸ್ ಅನ್ನು ಪ್ರತಿನಿಧಿಸುತ್ತಿರುವ ಸರಿತಾ, ಕ್ವಾರ್ಟರ್‌ಫೈನಲ್ ಸೆಣಸಾಟದಲ್ಲಿ ಅರುಣಾಚಲ ಪ್ರದೇಶದ ಅಕ್ವಿಲಿಯಾ ಡುಪಾಕ್ ವಿರುದ್ಧ ಜಯಶಾಲಿಯಾದರೆ, ರೈಲ್ವೆ ಸ್ಪೋರ್ಟ್ಸ್ ಪ್ರೊಮೋಷನ್ ಬೋರ್ಡ್ ಪ್ರತಿನಿಧಿ ಸೋನಿಯಾ, ಉತ್ತರಾಖಂಡ್‌ನ ಕಮಲಾ ಬಿಶ್ತ್ ವಿರುದ್ಧ ೫-೦ ಅಂತರದ ಗೆಲುವಿನೊಂದಿಗೆ ಪ್ರಾಬಲ್ಯ ಮೆರೆದರು.

ರೋಹ್ಟಕ್‌ನಲ್ಲಿ ನಡೆಯುತ್ತಿರುವ ಸ್ಪರ್ಧಾವಳಿಯಲ್ಲಿ ಇನ್ನುಳಿದಂತೆ ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ನಿಖತ್ ಝರೀನ್ (೫೧ ಕೆ ಜಿ) ಛತ್ತೀಸ್‌ಗಢದ ಅಭಾ ವಿರುದ್ಧ ಗೆಲುವು ಪಡೆದು ಎರಡನೇ ಪದಕ ಜಯಿಸುವ ಹಾದಿಯನ್ನು ಸುಗಮ ಮಾಡಿಕೊಂಡರು. ಇತ್ತ, ಮಾಜಿ ವಿಶ್ವ ಚಾಂಪಿಯನ್‌ಶಿಪ್‌ ಕ್ವಾರ್ಟರ್‌ಫೈನಲ್ ಸ್ಪರ್ಧಿ ಆರ್‌ಎಸ್‌ಪಿಬಿಯ ಪವಿತ್ರಾ (೬೦ ಕೆ ಜಿ) ಮಣಿಪುರದ ಚವೋಬಾ ದೇವಿಯನ್ನು ಮಣಿಸಿದರು.

ಇದನ್ನೂ ಓದಿ : ಘಾನಾ ಬಾಕ್ಸರ್ ಎರ್ನೆಸ್ಟ್ ಮಣಿಸಿದ ವಿಜೇಂದರ್ ಅಜೇಯ ಯಾತ್ರೆ ಅಬಾಧಿತ 

ಮತ್ತೊಂದು ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಮಾಜಿ ವಿಶ್ಚ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತೆ ಸರ್ಜುಬಾಲಾ ದೇವಿ (೪೮ ಕೆ ಜಿ) ಮಧ್ಯಪ್ರದೇಶದ ದೀಪಾ ಕುಮಾರಿಯನ್ನು ೫-೦ ಅಂತರದಿಂದ ಸೋಲಿಸಿದರು. ಮಣಿಪುರವನ್ನು ಪ್ರತಿನಿಧಿಸುತ್ತಿರುವ ಸರ್ಜುಬಾಲಾ ದೇವಿ ಏಕಪಕ್ಷೀಯ ಪ್ರದರ್ಶನದೊಂದಿಗೆ ಪದಕ ಸುತ್ತಿಗೆ ಅರ್ಹತೆ ಪಡೆದರು. ಏತನ್ಮಧ್ಯೆ, ಏಷ್ಯಾ ಚಾಂಪಿಯನ್‌ಶಿಪ್ ಕ್ವಾರ್ಟರ್‌ಫೈನಲ್ ಸ್ಪರ್ಧಿ ಶಿಕ್ಷಾ (೫೪ ಕೆ ಜಿ) ಸ್ಪರ್ಧಾವಳಿಯಿಂದ ಹೊರಬಿದ್ದರು. ಪಂಜಾಬ್ ಮೂಲದ ಶವೀಂದರ್ ಕೌರ್ ವಿರುದ್ಧದ ಸೆಣಸಾಟದಲ್ಲಿ ಶಿಕ್ಷಾ ತೀರ್ಪುಗಾರರಿಂದ ಅವಿರೋಧ ಮೆಚ್ಚುಗೆ ಗಳಿಸಿ ಮುಂದಿನ ಸುತ್ತಿಗೆ ಧಾವಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More