ಗೋಲ್ಡ್ ಕೋಸ್ಟ್‌ನಲ್ಲಿ ಭಾರತದ ಮೊದಲ ಪದಕ ಬೇಟೆಗೆ ಮೀರಾಬಾಯಿ ಅಣಿ

ವಿಶ್ವ ಚಾಂಪಿಯನ್ ಮೀರಾಬಾಯಿ ೨೧ನೇ ಕಾಮನ್ವೆಲ್ತ್ ಕ್ರೀಡಾಕೂಟದ ಮೊದಲ ದಿನದ ಆಕರ್ಷಣೆ ಎನಿಸಿದ್ದಾರೆ. ಗುರುವಾರದಿಂದ (ಏಪ್ರಿಲ್ ೫) ಕೂಟಕ್ಕೆ ಅಧಿಕೃತ ಚಾಲನೆ ಸಿಗಲಿದ್ದು, ಸೈನಾ ನೆಹ್ವಾಲ್ ಸಹ ಸ್ಪರ್ಧಿಸಲಿದ್ದಾರೆ. ಮೊದಲ ದಿನ ಹಲವಾರು ವಿಭಾಗಗಳಲ್ಲಿ ಭಾರತದ ಅಥ್ಲೀಟ್‌ಗಳು ಸೆಣಸಲಿದ್ದಾರೆ

ಈ ಬಾರಿಯ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆಗೆ ಮುನ್ನುಡಿ ಬರೆಯಲು ಮೀರಾಬಾಯಿ ಸಜ್ಜಾಗಿರುವಂತೆ ಪುರುಷರ ವಿಭಾಗದಲ್ಲಿ ಗುರುರಾಜ ಕೂಡ ಆ ಅವಕಾಶಕ್ಕಾಗಿ ಎದುರುನೋಡುತ್ತಿದ್ದಾರೆ. ೪೮ ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ೨೩ರ ಹರೆಯದ ಮೀರಾಬಾಯಿ ಚಾನು ಭರವಸೆ ಮೂಡಿಸಿದ್ದಾರೆ. ಮೀರಾಬಾಯಿ ಶ್ರೇಷ್ಠ ಸಾಧನೆ ೧೯೪ ಕೆಜಿ ಭಾರ ಎತ್ತಿರುವುದು. ಸದ್ಯ, ಈ ಸ್ಪರ್ಧಾ ವಿಭಾಗಗಳಲ್ಲಿರುವ ಯಾವೊಬ್ಬ ಸ್ಪರ್ಧಿಯೂ ಮೀರಾಬಾಯಿ ಅವರ ಸಾಧನೆಯ ಹತ್ತಿರಬಂದಿಲ್ಲ. ಆದರೆ, ಕೆನಡಾದ ಅಮಂಡಾ ಬ್ರಾಡಕ್ ಮೀರಾಗೆ ಪ್ರಬಲ ಸ್ಪರ್ಧಿಯಾಗಿದ್ದರೂ, ಅವರ ಶ್ರೇಷ್ಠ ಸಾಧನೆ ೧೭೩ ಕೆಜಿ ಮಾತ್ರ.

ಶುಭಾರಂಭದ ತವಕ: ಏಷ್ಯಾ ಚಾಂಪಿಯನ್ ಭಾರತದ ವನಿತಾ ಹಾಕಿ ತಂಡ ಕಾಮನ್ವೆಲ್ತ್ ಕೂಟದಲ್ಲಿ ಶುಭಾರಂಭದ ತವಕದಲ್ಲಿದೆ. ಕಳೆದ ಆವೃತ್ತಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದಿದ್ದ ಭಾರತ ವನಿತಾ ಹಾಕಿ ತಂಡ, ವೇಲ್ಸ್ ತಂಡವನ್ನು ಎದುರುಗೊಳ್ಳುತ್ತಿದೆ. ಇನ್ನು, ಸೈಕ್ಲಿಂಗ್ ವಿಭಾಗದಲ್ಲಿ ಭಾರತದ ಅಥ್ಲೀಟ್‌ಗಳು ಸ್ಪರ್ಧೆಗೆ ಸಜ್ಜಾಗಿದ್ದು, ಪದಕ ನಿರೀಕ್ಷೆ ಅಷ್ಟೇನೂ ಪ್ರಖರವಾಗಿಲ್ಲ. ಆದಾಗ್ಯೂ, ದೆಬೋರಾ ಮೇಲೆ ಕೊಂಚ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.

ಸ್ಟಾರ್ ಸ್ಪರ್ಧಿಗಳ ಕಣ: ಇನ್ನುಳಿದಂತೆ ಭಾರತದ ಮೊದಲ ದಿನದಾಟವು ಸ್ಟಾರ್ ಸ್ಪರ್ಧಿಗಳ ಕಣವಾಗಿದೆ. ಬ್ಯಾಡ್ಮಿಂಟನ್‌ನಲ್ಲಿ ಸೈನಾ ನೆಹ್ವಾಲ್, ಸ್ಕ್ವಾಶ್‌ನಲ್ಲಿ ದೀಪಿಕಾ ಪಳ್ಳೀಕಲ್, ಜೋಶ್ನಾ ಚಿನ್ನಪ್ಪ, ಸೌರವ್ ಘೋಷಲ್ ಮತ್ತು ಹರೀಂದರ್ ಸಿಂಗ್ ಪಾಲ್ ಸಂಧು ಸ್ಪರ್ಧೆಗಿಳಿಯುತ್ತಿದ್ದಾರೆ.

ಇದನ್ನೂ ಓದಿ : ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಇವರುಗಳನ್ನು ಮಿಸ್ ಮಾಡಿಕೊಳ್ಳಬೇಡಿ

ಗುರುವಾರದ (ಏಪ್ರಿಲ್ ೫) ಭಾರತದ ವೇಳಾಪಟ್ಟಿ

ವೇಟ್‌ಲಿಫ್ಟಿಂಗ್

ಪುರುಷರ ೫೬ ಕೆಜಿ ಫೈನಲ್: ಗುರುರಾಜ: ಬೆಳಿಗ್ಗೆ ೫.೦೦ಕ್ಕೆ; ಮಹಿಳೆಯರ ೪೮ ಕೆಜಿ ಫೈನಲ್: ಮೀರಾಬಾಯಿ ಚಾನು: ಬೆಳಿಗ್ಗೆ ೯.೩೦ಕ್ಕೆ; ಪುರುಷರ ೬೨ ಕೆಜಿ ಫೈನಲ್: ರಾಜಾ ಮುತ್ತುಪಾಂಡಿ: ಮಧ್ಯಾಹ್ನ ೨.೦೦ಕ್ಕೆ

ಹಾಕಿ

ಮಹಿಳೆಯರ ಹಾಕಿ (ಎ ಗುಂಪು): ಭಾರತ / ವೇಲ್ಸ್: ಸಂಜೆ ೫.೦೦ಕ್ಕೆ

ಬ್ಯಾಡ್ಮಿಂಟನ್

ಮಿಕ್ಸ್‌ಡ್ ಟೀಂ (ಗುಂಪು ಎ): ಭಾರತ / ಶ್ರೀಲಂಕಾ: ಬೆಳಗಿನ ಜಾವ ೪.೩೦ಕ್ಕೆ; ಮಿಶ್ರ ತಂಡ (ಗುಂಪು ಎ): ಭಾರತ / ಪಾಕಿಸ್ತಾನ: ಮಧ್ಯಾಹ್ನ ೨.೩೦ಕ್ಕೆ

ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್

ಪುರುಷರ ಟೀಂ ಫೈನಲ್ ಮತ್ತು ವೈಯಕ್ತಿಕ ವಿಭಾಗದ ಅರ್ಹತಾ ಸುತ್ತು: ಯೋಗೇಶ್ವರ್ ಸಿಂಗ್, ಆಶೀಶ್ ಕುಮಾರ್, ರಾಕೇಶ್ ಪಾತ್ರಾ: ಬೆಳಗಿನ ಜಾವ ೪.೩೮ರಿಂದ

ಟೇಬಲ್ ಟೆನಿಸ್

ಮಹಿಳೆಯರ ಟೀಂ ಸ್ಪರ್ಧೆ (ಗುಂಪು-೨): ಭಾರತ / ವನೌಟು: ಬೆಳಗ್ಗೆ ೫.೦೦ರಿಂದ; ಪುರುಷರ ಟೀಂ (ಗುಂಪು-೧): ಭಾರತ / ಟ್ರಿನಿಡ್ಯಾಡ್ ಟೊಬ್ಯಾಗೊ: ಬೆಳಗ್ಗೆ ೭.೩೦ರಿಂದ; ಮಹಿಳೆಯರ ಟೀಂ (ಗುಂಪು - ೨): ಭಾರತ / ಫಿಜಿ: ಬೆಳಿಗ್ಗೆ ೧೧.೩೦ರಿಂದ; ಪುರುಷರ ಟೀಂ (ಗುಂಪು-೧): ಭಾರತ / ಉತ್ತರ ಐರ್ಲೆಂಡ್: ಮಧ್ಯಾಹ್ನ ೨.೦೦ರಿಂದ

ಸ್ಕ್ವಾಶ್

ಪುರುಷರ ಆರಂಭಿಕ ಸುತ್ತು: ಹರೀಂದರ್ ಪಾಲ್ ಸಂಧು / ಕ್ಯಾಮರಾನ್ ಸ್ಟಾಫರ್ಡ್ : ; ಪುರುಷರ ಆರಂಭಿಕ ಸುತ್ತು: ವಿಕ್ರಮ್ ಮಲ್ಹೋತ್ರಾ / ಮಂಡಾ ಚಿಲಾಬ್ವೆ: ಬೆಳಿಗ್ಗೆ ೧೦.೪೦; ಪುರುಷರ ಸಿಂಗಲ್ಸ್ (೩೨ನೇ ಸುತ್ತು): ಸೌರವ್ ಘೋಷಾಲ್ / ಟಿಬಿಡಿ: ಮಧ್ಯಾಹ್ನ ೧.೩೦; ಮಹಿಳಾ ಸಿಂಗಲ್ಸ್ (೩೨ನೇ ಸುತ್ತು): ಜೋಶ್ನಾ ಚಿನ್ನಪ್ಪ / ಲಿನೆಟ್ ವೈ (ಪಪುವಾ ನ್ಯೂಗಿನಿ): ಮಧ್ಯಾಹ್ನ ೨.೧೦; ದೀಪಿಕಾ ಪಳ್ಳೀಕಲ್ (೩೨ನೇ ಸುತ್ತು): ಮಧ್ಯಾಹ್ನ ೩.೩೦

ಈಜು

ಪುರುಷರ ೫೦ ಮೀಟರ್ ಬಟರ್‌ಫ್ಲೈ ಹೀಟ್ - ೫: ಸಾಜನ್ ಪ್ರಕಾಶ್, ವರ್ಧವಳ್ ಖಾಡೆ: ರಾತ್ರಿ ೭.೦೦; ಪುರುಷರ ೧೦೦ ಮೀಟರ್ ಬ್ಯಾಕ್‌ಸ್ಟ್ರೋಕ್ ಹೀಟ್ ೧: ಶ್ರೀಹರಿ ನಟರಾಜ್: ರಾತ್ರಿ ೭.೧೭

ಸೈಕ್ಲಿಂಗ್

ಮಹಿಳೆಯರ ೪,೦೦೦ ಮೀಟರ್ ಟೀಮ್ ಅರ್ಹತಾ ಸುತ್ತು: ದೇಬೋರಾ, ಅಮೃತಾ ರಘುನಾಥ್, ಸೊನಾಲಿ, ಮನೋರಮಾ ದೇವಿ; ಬೆಳಿಗ್ಗೆ ೧೦.೧೨; ಮಹಿಳೆಯರ ಟೀಂ ಸ್ಪ್ರಿಂಟ್ ಅರ್ಹತಾ ಸುತ್ತು: ದೆಬೋರಾ, ಅಲೀನಾ ರೇಜಿ: ಬೆಳಿಗ್ಗೆ ೧೧.೫೪; ಪುರುಷರ ಟೀಂ ಸ್ಪ್ರಿಂಟ್ ಅರ್ಹತಾ ಸುತ್ತು: ಸಾಹಿಲ್ ಕುಮಾರ್, ಸನುರಾಜ್ ಸನಂದರಾಜ್, ರಂಜಿತ್ ಸಿಂಗ್: ಮಧ್ಯಾಹ್ನ ೧೨.೦೪

ಬಾಕ್ಸಿಂಗ್

ಪುರುಷರ ೬೯ ಕೆಜಿ (೩೨ನೇ ಸುತ್ತು): ಮನೋಜ್ ಕುಮಾರ್ / ಒಸಿಟಾ ಉಮೇಹ್ (ನೈಜೀರಿಯಾ): ಮಧ್ಯಾಹ್ನ ೩.೧೭ಕ್ಕೆ

ಬಾಸ್ಕೆಟ್‌ಬಾಲ್

ಮಹಿಳಾ ಪ್ರಾಥಮಿಕ ಸುತ್ತು (ಬಿ ಗುಂಪು): ಭಾರತ / ಜಮೈಕಾ: ಮಧ್ಯಾಹ್ನ ೨.೦೦; ಪುರುಷರ ಪ್ರಾಥಮಿಕ ಸುತ್ತು (ಬಿ ಗುಂಪು): ಭಾರತ / ಕ್ಯಾಮರೂನ್: ೩.೩೦ಕ್ಕೆ

ಲಾನ್ ಬೌಲಿಂಗ್

ಮಹಿಳಾ ಸಿಂಗಲ್ಸ್ (ಡಿ ವಿಭಾಗ-ಮೊದಲ ಸುತ್ತು): ಪಿಂಕಿ / ಜೋ ಎಡ್ವರ್ಡ್ಸ್ (ನ್ಯೂಜಿಲೆಂಡ್): ಬೆಳಗಿನ ಜಾವ ೪.೩೦ಕ್ಕೆ; ಪುರುಷರ ಟ್ರಿಪಲ್ಸ್ (ಎ ವಿಭಾಗ - ಮೊದಲ ಸುತ್ತು): ಭಾರತ / ವೇಲ್ಸ್: ಬೆಳಗಿನ ಜಾವ ೪.೩೦ಕ್ಕೆ; ಮಹಿಳೆಯರ ಸಿಂಗಲ್ಸ್ (ಡಿ ವಿಭಾಗ - ಎರಡನೇ ಸುತ್ತು): ಪಿಂಕಿ / ಕ್ಯಾಥರೀನ್ ರೆಡ್‌ನಲ್ (ಇಂಗ್ಲೆಂಡ್): ೭.೩೦ಕ್ಕೆ; ಪುರುಷರ ಟ್ರಿಪಲ್ಸ್ (ಎ ವಿಭಾಗ - ಎರಡನೇ ಸುತ್ತು): ಭಾರತ / ಪಪುವಾ ನ್ಯೂಗಿನಿ: ಬೆಳಿಗ್ಗೆ ೭.೩೦; ಪುರುಷರ ಡಬಲ್ಸ್ (ಡಿ ವಿಭಾಗ - ಮೊದಲ ಸುತ್ತು): ಭಾರತ / ಮಲೇಷಿಯಾ: ಬೆಳಿಗ್ಗೆ ೧೧.೩೦ಕ್ಕೆ; ಮಹಿಳೆಯರ ಫೋರ್ (ಬಿ ವಿಭಾಗ - ಮೊದಲ ಸುತ್ತು): ಭಾರತ / ಉತ್ತರ ಐರ್ಲೆಂಡ್: ಬೆಳಿಗ್ಗೆ ೧೧.೩೦ರಿಂದ; ಮಹಿಳೆಯರ ಫೋರ್ (ಬಿ ವಿಭಾಗ - ಮೊದಲ ಸುತ್ತು): ಭಾರತ / ಮಾಲ್ಟಾ: ಮಧ್ಯಾಹ್ನ ೨.೩೦; ಪುರುಷರ ಡಬಲ್ಸ್ (ಡಿ ವಿಭಾಗ - ಎರಡನೇ ಸುತ್ತು): ಭಾರತ / ನಿಯು: ಮಧ್ಯಾಹ್ನ ೨.೩೦ಕ್ಕೆ

ಮೂಲ: ಪಿಟಿಐ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More